ಈರುಳ್ಳಿ ಬೆಳೆ ಕುಸಿತ

ಲೋಕದರ್ಶನ ವರದಿ

ಚಿತ್ರದುರ್ಗ:  ಕೋಟೆ ನಾಡಿನಲ್ಲಿ ರೈತ ಸದಾ ಒಂದಿಲ್ಲ ಒಂದು ಸಮಸ್ಯೆಯಲ್ಲಿ ಸಿಲುಕುತ್ತಿದ್ದಾನೆ. ಅದರಂತೆ ಇಂದೂ ಕುಡ ಮಳೆಯನ್ನೆ ನಂಬಿ ಬಿತ್ತಿದ್ದ ಈರುಳ್ಳಿ ಮೊಳಕೆಯೊಡೆದಿವೆ. ಆದ್ರೆ ಇದೀಗ ಮಳೆಯೂ ಕೈ ಕೊಡುತ್ತಿದೆ. ಇತ್ತ ಕೊಳವೆ ಬಾವಿಯಲ್ಲೂ ಕೂಡ ನೀರಿಲ್ಲದೆ ಈರುಳ್ಳಿ ಬೇಳಗಾರರು ಸಂಕಷ್ಟದಲ್ಲಿ ಸಿಲುಕಿದ್ದಾರೆ. ಮಳೆ ಬಾರದೆ ಹೋದ್ರೆ ದೇವರೇ ಕಾಪಾಡಬೇಕಾಗಿದೆ. ಈ ಕುರಿತ ಒಂದು ವರದಿ. 

ಚಿತ್ರದುರ್ಗ ಕೋಟೆ ನಾಡಿನಲ್ಲಿ ಪ್ರಮುಖ ಬೆಳೆಗಳಲ್ಲಿ ರಾಗಿ ಮುಸುಕಿನ ಜೋಳ ಹಾಗೂ ತೊಟಗಾರಿಕೆ ಬೆಳೆಗಳಿಗೆ ಬಂದ್ರೆ ಈರುಳ್ಳಿ ಪ್ರಮುಖವಾಗುತ್ತದೆ. ಚಿತ್ರದುರ್ಗ ಹಾಗೂ ಚಳ್ಳಕೆರೆ ತಾಲೂಕುಗಳಲ್ಲಿ ಹೆಚ್ಚಾಗ ಈರುಳ್ಳಿ ಬೆಳೆಗಳನ್ನು ಬೆಳೆಯುತ್ತಾರೆ. ಇದುವರೆಗೂ 17 ಸಾವಿರ ಹೆಕ್ಟೇರ್ ಪ್ರದೇಶಗಳಲ್ಲಿ ರೈತರು ಈರುಳ್ಳಿಯನ್ನು ಬಿತ್ತಿದ್ದಾರೆ. ಇದುವರೆಗೂ ಬಿದ್ದಿದ್ದ ಅಲ್ಪ ಸ್ವಲ್ಪ ಮಳೆಯಿಂದಾಗಿ ಈರುಳ್ಳಿ ಬೀಜ ಮೊಳಕೆ ಯೊಡೆದು ಸಣ್ಣ ಸಣ್ಣ ಗಿಡಗಳಾಗಿ ಬೆಳೆದು ನಿಂತಿವೆ. ಸರಿಯಾದ ಸಮಯಕ್ಕೆ ವರುಣ ಕೈ ಕೊಟ್ಟಿರುವುದರಿಂದ ಚಿಗುರೊಡೆದ ಈರುಳ್ಳಿ ಮೊಳಕೆ ಒಣಗುವ ಸ್ಥಿತಿ ನಿಮರ್ಾಣವಾಗಿದೆ. ಇತ್ತು ಮಳೆಯನ್ನು ಆಧರಿಸಿ ಸುಮಾರು 1800 ಹೆಕ್ಟೇರ್ ಹಾಗೂ ನೀರಾವರಿಯನ್ನು ನಂಬಿ 17 ಸಾವಿರ ಹೇಕ್ಟೇರ್ ಪ್ರದೇಶಗಳಲ್ಲಿ ಬಿತ್ತನೆಯನ್ನು ಮಾಡಿದ್ದಾರೆ. ಒಂದು ಕಟಡೆ ಮೆಳೆ ಕೈ ಕೊಟ್ಟರೆ. ಇನ್ನೊಂದು ಕಡೆಯಲ್ಲಿ ಕೊಳವೆ ಬಾವಿಗಳಲ್ಲಿ ನೀರಿಲ್ಲವಾಗಿದೆ. ಇದು ರೈತರನ್ನು ಚಿಂತೇಗೀಡು ಮಾಡಿದೆ. 

ಇನ್ನು ಗೊಬ್ಬರ ಹಾಗೂ ಹನಿ ನೀರಾವರಿಗೆ ಲಕ್ಷಾಂತರ ರೂಪಾಯಿ ಖಚರ್ು ಮಾಡಿದ್ದೇವೆ. ಇಷ್ಟಾದ್ರೂ ನಾವು ಕಷ್ಟ ಪಟ್ಟು ಬೆಳೆದ ಬೆಳೆಗೆ ಸರಿಯಾದ ಬೆಲೆ ಸಿಗುತ್ತಿಲ್ಲ. ಮಾಡಿದ ಸಾಲವನ್ನು ತೀರಿಸಲು ಆಗುತ್ತಿಲ್ಲ. ಇದನ್ನು ಯಾರೂ ಅರಿತುಕೊಳ್ಳುತ್ತಿಲ್ಲ. ಯಾವುದೇ ಸಕರ್ಾರಗಳು ನಮ್ಮ ಕಷ್ಟವನ್ನು ಕೇಳುತ್ತಿಲ್ಲ. ಕಷ್ಟ ಪಟ್ಟು ಬೆಳೆದ್ರೆ ಬೆಳಯೂ ಕೈಗೆ ಬಂದಾಗ ಬೆಲೆಯೂ ಸಿಗುವುದಿಲ್ಲ. ಕಳೆದ ಸಾಲಿನಲ್ಲಿ ಅಕಾಲಿಕ ಮಳೆಯಿಂದಾಗಿ ಈರುಳ್ಳಿ ಬೆಳೆ ಸಂಪೂರ್ಣ ನಾಶವಾಗಿತ್ತು. ಸ್ವಲ್ಪ ಮಟ್ಟಿಗೆ ಉಳಿದ ಬೆಳೆಯೂ ಕೊಳೆತು ತಿಪ್ಪೆಗೆ ಬೀಸಾಡಿದ್ದೇವು. ಈಸಾರಿ ಮಳೆಯೂ ಇಲ್ಲಿ ಬೆಲಯೂ ಇಲ್ಲ. ಇದುವರೆಗೂ ಬೀಳಬೇಕಾಗಿದಗ್ದ ಮಳೆ ಇನ್ನು ಬಂದಿಲ್ಲ. ದರಿಂದ ನಮ್ಮ ಬೆಳೆಯೂ ಒಣಗಿ ಹೋಗುತ್ತಿದೆ. ಎಂದು ಆತಂಕ ವ್ಯಕ್ತಪಡಿಸುತ್ತಾರೆ. ಒಟ್ಟಿನಲ್ಲಿ ಸದಾ ವರುಣನೊಂದಿದೆ ಜೂಜಾಟದೊಂದಿಗೆ ಬದುಕು ಸೆವೆಸುತ್ತಿರುವ ರೈತರು ಇಂದೂ ಕೂಡ ಅದೆ ಜೂಜಾಟದಲ್ಲಿ ತೊಡಗಿದ್ದಾರೆ. ಸದ್ಯದ ಸ್ಥಿತಿಯಲ್ಲಿ ಮಳೆ ಬೀದ್ದರೆ ಮಾತ್ರ ರೈತರು ಹಾಗೂ ಬೆಳೆಗಳಿಗೆ ನೀರಾಗುತ್ತದೆ. ಇಲ್ಲದೆ ಹೋದ್ರೆ ಮತ್ತೆ ಬರಗಾಲವನ್ನು ಎದುರಿಸಬೇಕಾಗುತ್ತದೆ. ಸದಾ ಬರಗಾಲಕ್ಕೆ ತುತ್ತಾಗುತ್ತಿರುವ ಕೋಟೆ ನಾಡು ರೈತರನ್ನು ಮಾತ್ರ ದೇವರೇ ಕಾಪಾಡಬೇಕಾಗಿದೆ.