ಪಂಚಮಸಾಲಿ ಹೋರಾಟ ಯಾವ ರೀತಿ ತಿರುವು ಪಡೆದರೂ ಅಚ್ಚರಿ ಪಡಬೇಕಿಲ್ಲ

One should not be surprised by the way the Panchmasali struggle takes a turn

ಬೆಳಗಾವಿ : ಸರಕಾರ ನಮ್ಮ ಪ್ರತಿಭಟನೆಯನ್ನು ಪೋಲಿಸರ ಮುಖಾಂತರ ಹತ್ತಿಕ್ಕಬಾರದು. ಈ ಬಾರಿ ಮೀಸಲಾತಿ ಸಿಗುವವರೆಗೂ ಹೋರಾಟ ಬಿಡಲ್ಲ. ಹೋರಾಟ ಯಾವ ರೀತಿ ತಿರುವು ಪಡೆದರೂ ಅಚ್ಚರಿ ಪಡಬೇಕಿಲ್ಲ ಎಂದು ಕೂಡಲಸಂಗಮ ಬಸವ ಜಯ ಮೃತ್ಯುಂಜಯ ಸ್ವಾಮೀಜಿ ಹೇಳಿಕೆ ನೀಡಿದ್ದಾರೆ. 

   ಚಿಕ್ಕೋಡಿಯಲ್ಲಿ ಸೋಮವಾರ ಮಾಧ್ಯಮ ದವರೊಂದಿಗೆ ಮಾತನಾಡಿದ ಅವರು, ಯಾವುದೇ ಕಾರಣಕ್ಕೂ ಮೀಸಲಾತಿ ವಿಚಾರದಲ್ಲಿ ಹಿಂದೆ ಸರಿಯಲ್ಲ. ಹಿಂದೆ‌ ಸಿಎಂ ಸಿದ್ದರಾಮಯ್ಯನವರು ಸಭೆ ಕರೆದರು ಆದರೆ ನಂತರ ಅವರೂ ಮೀಸಲಾತಿ ಕೊಡಲಿಲ್ಲ. ಈಗಾಗಲೆ ಕಾಂಗ್ರೆಸ್ ಪಕ್ಷದ ಶಾಸಕ‌,  ಸಚಿವರಿಗೆ ಆಗ್ರಹ ಮಾಡಿದ್ದೇವೆ ಎಂದು ಸ್ಚಾಮಿಜಿಗಳು ಹೇಳಿದರು.  

   ಡಿಸೆಂಬರ್ 9 ರಿಂದ ಬೆಳಗಾವಿ ಸುವರ್ಣ ಸೌಧದಲ್ಲಿ ಚಳಿಗಾಲ ಅಧಿವೇಶನ  ನಡೆಯಲಿದೆ. ಡಿ 10ರಂದು ನಮ್ಮ ಎಲ್ಲ ಕಾರ್ಯಕರ್ತರು ಸುವರ್ಣ ಸೌಧ ಪ್ರವೇಶ ಮಾಡಲಿದ್ದಾರೆ ಎಂದರು. 

   ಚಳಿಗಾಲ ಅಧಿವೇಶನಕ್ಕೆ ಮತ್ತೆ  ಪಂಚಮಸಾಲಿ ಬಿಸಿ ಮುಟ್ಟಿಸಲು ಮುಂದಾಗಿದ್ದು, ಡಿಸೆಂಬರ್ ೧೦ರಂದೇ ಸುವರ್ಣ ಸೌಧ ಮುತ್ತಿಗೆ ಹಾಕಲು ಪಂಚಮಸಾಲಿಗಳು ಮುಂದಾಗಿದ್ದಾರೆ. 

   ಪಂಚಮಸಾಲಿ ಹಾಗೂ ಇತರೆ ಲಿಂಗಾಯತ ಸಮುದಾಯಕ್ಕೆ 2A ಮೀಸಲಾತಿ ವಿಚಾರವಾಗಿ ಈ ಮುತ್ತಿಗೆ ಕಾರ್ಯಕ್ರಮ ನಡೆಯಲಿದೆ.