ಪ್ರತಿಯೊಬ್ಬ ಮಕ್ಕಳಲ್ಲೊಂದು ಕಲೆ ಅಡಗಿರುತ್ತದೆ: ಪ್ರಪುಲ್ಲಾ ನಾಯಕ

ಧಾರವಾಡ16: ಇಂದು ಕಲೆಯನ್ನು ಉಳಿಸಿ ಬೆಳೆಸಿಕೊಂಡು ಹೋಗಬೇಕಾದ ಜವಾಬ್ದಾರಿ ಇಂದಿನ ಪೀಳಿಗೆ ಮೇಲಿದೆ. ಭರತನಾಟ್ಯದಿಂದ ಮಕ್ಕಳಲ್ಲಿ ಒಳ್ಳೆಯ ಸಂಸ್ಕೃತಿ ಬೆಳೆಯುತ್ತದೆ ಅಲ್ಲದೆ ಇದರಲ್ಲಿ ಒಂದು ಆಗಾದ ಶಕ್ತಿ ಇದೆ ಎಂದು ಪಾಲಕರು ತಮ್ಮ ಮಕ್ಕಳಿಗೆ ಇದರ ಬಗ್ಗೆ ಮನನ ಮಾಡಿಕೊಟ್ಟು ನಮ್ಮ ನಿಜವಾದ ಸಂಸ್ಕೃತಿಯನ್ನು ಉಳಿಸಲು ಪ್ರೇರೆಪಿಸಬೇಕು ಎಂದು ಪ್ರಪುಲ್ಲಾ ನಾಯಕ ಕರೆ ನೀಡಿದರು.

ಶ್ರೀ ಗಣೇಶ ನೃತ್ಯಶಾಲೆ ಧಾರವಾಡ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಸಹಯೋಗದಲ್ಲಿ ಇತ್ತೀಚೆಗೆ ಧಾರವಾಡದ ಸೃಜನಾ ರಂಗಮಂದಿರದಲ್ಲಿ ಜರುಗಿದ ಇಪ್ಪತ್ತೊಂಬತ್ತನೇಯ ನೃತ್ಯ ಸಂಭ್ರಮದ ವಾಷರ್ಿಕೊತ್ಸವ ಕಾರ್ಯಕ್ರಮದ ಉಧ್ಘಾಟನೆಯನ್ನು ಮಾಡಿ ಅವರು ಮಾತನಾಡುತ್ತಿದ್ದರು. 

ಮಕ್ಕಳನ್ನು ಶಾಸ್ತ್ರೀಯ ಕಲೆಗಳಿಗೆ ಹೆಚ್ಚು ಒತ್ತು ಕೊಟ್ಟು ಮಕ್ಕಳಿಗೆ ವಿದ್ಯೆಯನ್ನು ಕಲಿಸಬೇಕು. ಮನುಷ್ಯರಲ್ಲಿ ಒಂದು ಕಲೆ ಇರುತ್ತದೆ ಅದನ್ನು ಹೊರಹಾಕುವುದು ಮನುಷ್ಯರಿಂದಲೆ ಸಾಧ್ಯ. ಮಕ್ಕಳಿಗೆ ಓದಿನ ಜೊತೆಯಲ್ಲಿ ಕಲೆಗಳಲ್ಲಿ ಆಸಕ್ತಿಯನ್ನು ವಹಿಸುವಂತೆ ಪ್ರೋತ್ಸಾಹಿಸಿ ಮಕ್ಕಳಲ್ಲಿ ಇರುವ ಪ್ರತಿಭೆಯನ್ನು ಹೊರತರಬೇಕೆಂದು ನುಡಿದರು. 

ಗಣೇಶ ನೃತ್ಯಶಾಲೆ ಈಗಾಗಲೆ ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಂಡಿದ್ದು ಇವರಲ್ಲಿ ಕಲಿತ ಅನೇಕ ಮಕ್ಕಳು ರಾಷ್ಟ್ರಮಟ್ಟದಲ್ಲಿ ತಮ್ಮ ಪ್ರತಿಭೆಯನ್ನು ತೋರ್ಪಡಿಸಿದ್ದಾರೆ. ಅಲ್ಲದೆ ಇವರಲ್ಲಿ ವಿದೇಶದ ವಿದ್ಯಾಥರ್ಿನಿಯೊಬ್ಬರು ಗಣೇಶ ನೃತ್ಯಶಾಲೆಯಲ್ಲಿ ಕಲಿತು ತಮ್ಮ ಪ್ರತಿಭೆಯನ್ನು ಮರೆದಿದ್ದಾರೆ. ಇಂಥ ಉತ್ತಮ ಶಾಲೆ ಇನ್ನೂ ಎತ್ತರ ಬೆಳೆಯಲಿ ಎಂದು ಆಶಿಸಿದರು.

ವೇದಿಕೆಯ ಮೇಲೆ ವಿದೂಷಿ ರೋಹಿಣಿ ಇಮಾರತಿ, ರಾಘವೇಂದ್ರ ಇಮಾರತಿ, ಹಾಗೂ ವಿದೂಷಿ ವಾಣಿ ಉಡುಪಿ, ಪುರುಷೋತ್ತಮ ಆರ್. ಜಗನ್ನಾಥ ಕಬಾಡಿ ಉಪಸ್ಥಿತರಿದ್ದರು. 

ನಂತರ ಎಂಬತ್ತಕ್ಕೂ ಹೆಚ್ಚು ವಿದ್ಯಾಥರ್ಿಗಳಿಂದ ವಿವಿಧ ಆಕರ್ಷಕ ನೃತ್ಯಗಳಾದ ಪುಷ್ಪಾಂಜಲಿ, ಜತಿಸ್ವರ, ದೇವರನಾಮ ಹಾಗೂ ಚಂದ್ರ ಚೂಡ ತಕ್ಕದಿಮಿ ತಾ. ರಾಮನ ನಮೋ. ಪಂಜಾಬಿ ನೃತ್ಯ, ಭಾರತಾಂಬೆ ನೃತ್ಯ ಕೋಲಾಟ, ಮಾತನಾಡಣ್ಣಯ್ಯಾ ಸೇರಿದಂತೆ ಅನೇಕ ಭರತನಾಟ್ಯ ನೃತ್ಯಗಳು, ಜಾನಪದ ನೃತ್ಯಗಳು ಜರುಗಿದವು. 

ಹಿನ್ನಲೆಯಲ್ಲಿ ನಟುವಾಂಗ ರೋಹಿಣಿ ಇಮಾರತಿ, ಹಾಡುಗಾರಿಕೆ ವಾಣಿ ಉಡುಪಿ, ವಾಯೋಲಿನ ಜಗನ್ನಾಥ ಕಬಾಡಿ, ಮೃದಂಗ ಪುರುಷೋತ್ತಮ ಕೊಳಲು ವೇಣುಗೊಪಾಲ್, ಪ್ರಸಾದನ ಸಂತೋಷ ಹಾಗೂ ಸ್ನೇಹಾ ಮಹಾಲೆ ನಡೆಸಿಕೊಟ್ಟರು ನಿರೂಪಣೆ ವಿದ್ಯಾ ಶಿರಹಟ್ಟ ನಡೆಸಿದರು.