ಚಂಡಮಾರುತದಿಂದ ಒಂದು ಲಕ್ಷ ಕೋಟಿರೂ ಹಾನಿ : ಮಮತಾ

ಕೋಲ್ಕತಾ, ಮೇ 21, ಅಂಫಾನ್   ಚಂಡಮಾರುತ ಪಶ್ಚಿಮ ಬಂಗಾಳದಲ್ಲಿ  ಭಾರಿ  ಹಾನಿಯುಂಟು ಮಾಡಿದೆ. ಮತ್ತು ಇದರಿಂದ ಈವರೆಗೆ   12 ಮಂದಿ ಮೃತಪಟ್ಟಿದ್ದಾರೆ. ಚಂಡಮಾರುತದಿಂದಾದ ಅನಾಹುತ ಕೊರೊನಾ ವೈರಸ್ ಗಿಂತಲೂ ಬೀಕರವಾಗಿದೆ ಒಂದು  1 ಲಕ್ಷ ಕೋಟಿ ರೂಪಾಯಿಗೂ ಹೆಚ್ಚು ಆಸ್ತಿಪಾಸ್ತಿಗೆ  ನಷ್ಟ ಉಂಟಾಗಿದೆ ಎಂದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೇಳಿದ್ದಾರೆ.
190 ಕಿ.ಮೀ ವೇಗದಲ್ಲಿ ಅಪ್ಪಳಿಸಿದ ಅಂಫಾನ್ ಚಂಡಮಾರುತ ಪಶ್ಚಿಮ ಬಂಗಾಳವನ್ನು ಅಕ್ಷರಃ ಸಹ ನಲುಗಿಸಿದೆ , ತತ್ತರಗೊಳ್ಳುವಂತೆ  ಮಾಡಿದೆ. ಭಾರಿ ಮಳೆಯಿಂದಾಗಿ ಹಲವು ಮರಗಳು, ವಿದ್ಯುತ್ ಕಂಬಗಳು ಧರೆಗುರುಳಿದವು. 5,500 ಮನೆಗಳು ನೆಲಸಮವಾಗಿದೆ ಅನೇಕ ಕಡೆ  ಸಂಪರ್ಕಿಸುವ ಸೇತುವೆಗಳಿಗೆ ಭಾರಿ ಹಾನಿಯಾಗಿ ಜನರು ಬಹಳ ತೊಂದರೆಗೆ ಒಳಗಾಗಿದ್ದಾರೆ ಚಂಡಮಾರುತ ಅಪ್ಪಳಿಸುವುದಕ್ಕೂ ಮುನ್ನ ಪಶ್ಚಿಮ ಬಂಗಾಳ ಮತ್ತು ಒಡಿಶಾದಲ್ಲಿ ಕನಿಷ್ಠ 6.58 ಲಕ್ಷ ಜನರನ್ನು  ಸ್ಥಳಾಂತರಿಸಲಾಗಿದೆ.