ಲೋಕದರ್ಶನ ವರದಿ
ಬೈಲಹೊಂಗಲ: ಸತ್ಯ, ಅಹಿಂಸೆ, ಸರಳತೆಯಿಂದ ಕೂಡಿದ ಮಹಾತ್ಮಾ ಗಾಂಧೀಜಿಯವರ ಸಾರ್ಥಕ ಜೀವನವೇ ಒಂದು ಸಂದೇಶ ಎಂದು ನಿವೃತ್ತ ಮುಖ್ಯಶಿಕ್ಷಕ ಎಸ್.ಎಲ್ ನಾಗನೂರ ಹೇಳಿದರು. ತಾಲೂಕಿನ ಬೂದಿಹಾಳ ಸರಕಾರಿ ಪ್ರೌಢಶಾಲೆಯಲ್ಲಿ ಬೆಂಗಳೂರಿನ ಕನರ್ಾಟಕ ಗಾಂಧಿ ಸ್ಮಾರಕ ನಿಧಿ(ರಿ) ಹಾಗೂ ಗೋವನಕೊಪ್ಪದ ಸಣ್ಣವೀರಪ್ಪ ಚನ್ನಬಸಪ್ಪ ಹೊಂಗಲ ಪ್ರತಿಷ್ಠಾನದ ಗಾಂಧಿ ಅಧ್ಯಯನ ಕೇಂದ್ರ ಇವರ ಸಹಯೋಗದಲ್ಲಿ "ಬಾ-ಬಾಪು 150ನೆಯ ವಷರ್ಾಚರಣೆ" ನಿಮಿತ್ಯ ಮಹಾತ್ಮಾ ಗಾಂಧೀಜಿ ಜಯಂತಿ ಪ್ರಯುಕ್ತ ಗಾಂಧೀಜಿಯವರ ಜೀವನ ಮತ್ತು ಸಾಧನೆ ಕುರಿತು ಏರ್ಪಡಿಸಿದ್ದ ಛಾಯಾಚಿತ್ರ ಪ್ರದರ್ಶನ ಉದ್ಘಾಟಿಸಿ ಅವರು ಮಾತನಾಡಿದರು.
ಅನೇಕ ಕಠಿಣ ಸವಾಲುಗಳನ್ನು ಧೈರ್ಯದಿಂದ ಎದುರಿಸಿ ಶಾಂತಿ ಅಹಿಂಸೆಯ ಮಾರ್ಗದಿಂದ ಸ್ವಾತಂತ್ರ್ಯಕ್ಕಾಗಿ ಹೋರಾಡಿ ದೇಶಸೇವೆಗಾಗಿಯೇ ಬದುಕಿದ ಗಾಂಧೀಜಿಯವರ ಕೊಡುಗೆಯನ್ನು ಎಂದಿಗೂ ಮರೆಯಲಾಗದು ಎಂದು ಅವರು ಅಭಿಪ್ರಾಯಪಟ್ಟರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಬೆಳಗಾವಿಯ ಜಿಲ್ಲಾ ಪಂಚಾಯತಿ ಲೆಕ್ಕಾಧೀಕ್ಷಕ ಕಿರಣ ಗಣಾಚಾರಿ ಮಾತನಾಡಿ ಗಾಂಧೀಜಿ ಮತ್ತು ಶಾಸ್ತ್ರೀಜಿಯವರು ನುಡಿದಂತೆ ನಡೆದು ತೋರಿಸಿ ತಮ್ಮ ಜೀವನದುದ್ದಕ್ಕೂ ತಾವು ನಂಬಿದ ತತ್ವ ಸಿದ್ಧಾಂತಗಳಿಗೆ ಬದ್ಧರಾಗಿಯೇ ಬದುಕಿದ ಮಹಾನ ವ್ಯಕ್ತಿಗಳು ಎಂದು ಹೇಳಿದರು.
ಎಸ್.ಸಿ.ಎಚ್ ಫೌಂಡೇಶನ್ ಸಂಸ್ಥಾಪಕ ಮಹಾಂತೇಶ ಹೊಂಗಲ ಮಾತನಾಡಿ ಫೌಂಡೇಶನ್ ಗ್ರಾಮೀಣ ವಿದ್ಯಾಥರ್ಿಗಳಿಗಾಗಿ ವಿನೂತನ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದ್ದು ವಿದ್ಯಾಥರ್ಿಗಳ ಉತ್ತಮ ಭವಿಷ್ಯ ರೂಪಿಸಿ ಸಮಾಜ ಸೇವೆ ಮಾಡುವಂತಹ ಮನೋಭಾವ ಬೆಳೆಸುವುದು ಸಂಸ್ಥೆಯ ಮುಖ್ಯ ಉದ್ದೇಶವಾಗಿದೆ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಮುಖ್ಯಶಿಕ್ಷಕ ಎನ್.ಆರ್.ಠಕ್ಕಾಯಿ ಮಾತನಾಡಿ ಗಾಂಧೀಜಿಯವರ ಶಿಸ್ತು, ಪ್ರಾಮಾಣಿಕತೆ, ಸ್ವಚ್ಛತೆ, ಮಾನವೀಯತೆ ಅಂತಹ ಗುಣಗಳನ್ನು ವಿದ್ಯಾಥರ್ಿಗಳು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಅಭಿಪ್ರಾಯಪಟ್ಟರು.
ಗಾಂಧೀಜಿ ಜಯಂತಿ ಪ್ರಯುಕ್ತ ವಿದ್ಯಾಥರ್ಿಗಳಿಗಾಗಿ ಏರ್ಪಡಿಸಿದ್ದ ಪ್ರಬಂಧ, ಭಾಷಣ, ಚಿತ್ರಕಲಾ ಸ್ಪಧರ್ೆಗಳಲ್ಲಿ ವಿಜೇತರಾದವರಿಗೆ ಬೆಂಗಳೂರಿನ ಗಾಂಧೀ ಸ್ಮಾರಕ ನಿಧಿಯಿಂದ ಪ್ರಮಾಣಪತ್ರ ಹಾಗೂ ಗ್ರಂಥಗಳನ್ನು ಬಹುಮಾನವಾಗಿ ವಿತರಿಸಲಾಯಿತು. ಇದೇ ಸಂದರ್ಭದಲ್ಲಿ ಆರ್.ಸಿ. ಸೊರಟೂರ ಪ್ಲಾಸ್ಟಿಕ್ ನಿಷೇಧ ಕುರಿತು ಪ್ರತಿಜ್ಞಾ ವಿಧಿ ಬೋಧಿಸಿದರು.
ಕಾರ್ಯಕ್ರಮದಲ್ಲಿ ಶಿಕ್ಷಕರಾದ ಪಿ.ಎಸ್ ಗುರುನಗೌಡರ, ಎ.ಎಚ್ ಪಾಟೀಲ, ಎಚ್.ವಿ ಪುರಾಣಿಕ, ಎಸ್.ಡಿ.ಎಂ.ಸಿ ಉಪಾಧ್ಯಕ್ಷ ಬಾಬು ನಿಂಬಾಳಕರ, ಸದಸ್ಯ ದುಂಡಯ್ಯ ಕುಲಕಣರ್ಿ, ಊರ ಗಣ್ಯರಾದ ಜನಕರಾಜ ಪಾಟೀಲ, ಬಾಳಪ್ಪ ನಾಗಣ್ಣವರ, ಚನಬಸಯ್ಯ ಹಿರೇಮಠ, ಮೂಗಬಸಪ್ಪ ಸೊಗಲದ, ಚನಬಸಪ್ಪ ಹೊಂಗಲ, ದ್ಯಾಮಪ್ಪ ಜೋಗಿಗುಡ್ಡ, ಮೂಗಬಸಪ್ಪ ಹೊಂಗಲ ಉಪಸ್ಥಿತರಿದ್ದರು.
ಜೆ.ಆರ್ ನರಿ ಸ್ವಾಗತಿಸಿದರು. ಐ.ಎಸ್ ಮುದಗಲ್ ನಿರೂಪಿಸಿದರು. ಎಸ್.ಬಿ ಭಜಂತ್ರಿ ವಂದಿಸಿದರು.