ಎಸ್ಡಿಎಂಸಿ ಸದಸ್ಯರಿಗೆ ಒಂದು ದಿನದ ಕಾರ್ಯಾಗಾರ

ಹಾವೇರಿ: ಫೆ.01: ಶಾಲೆಗಳಸರ್ವಾಂಗೀಣ ಅಭಿವೃದ್ಧಿಗೆ  ಎಸ್.ಡಿ.ಎಂ.ಸಿ ಸಹಕಾರ ಅತ್ಯಗತ್ಯ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಎಚ್. ಪಾಟೀಲ ಅವರು ಹೇಳಿದರು. 

ತಾಲೂಕಿನ ಯಲಗಚ್ಚ ಗ್ರಾಮದ ಸಂಪನ್ಮೂಲ ಕೇಂದ್ರದಲ್ಲಿ ಗುರುವಾರ ಎಸ್.ಡಿ.ಎಂ.ಸಿ. ಸದಸ್ಯರಿಗೆ ಆಯೋಜಿಸಲಾದ ಒಂದು ದಿನದ ಕಾಯರ್ಾಗಾರದಲ್ಲಿ ಭಾಗವಹಿಸಿ ಅವರು ಮಾತನಾಡಿದರು. 

ಉಚಿತ ಹಾಗೂ ಕಡ್ಡಾಯ ಶಿಕ್ಷಣ ಯೋಜನೆಯಡಿ 6 ರಿಂದ 16 ವಯೋಮಾನದ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಲು ಸಮುದಾಯದ ಸಹಭಾಗಿತ್ವ ಅವಶ್ಯಕತೆ ಮನಗಂಡು ಪ್ರತಿಶಾಲೆಗೆ ಎಸ್ ಡಿ ಎಂ ಸಿ ವ್ಯವಸ್ಥೆ ಜಾರಿಗೊಳಿಸಲಾಗಿದೆ ಎಂದ ಅವರು ಪಠ್ಯ ಪುಸ್ತಕ, ಸಮವಸ್ತ್ರ, ಸೈಕಲ್, ಅಕ್ಷರ ದಾಸೋಹ, ಕ್ಷೀರಭಾಗ್ಯ ಯೋಜನೆಗಳ ಮಾಹಿತಿ ನೀಡಿದರು ಹಾಗೂ 6 ರಿಂದ 16 ವರ್ಷದ ಎಲ್ಲ ಮಕ್ಕಳಿಗೆ ಉಚಿತ ಶಿಕ್ಷಣ ದೊರೆಯಬೇಕು ಎಂದು  ಹೇಳಿದರು.

ಎಸ್.ಡಿ.ಎಂ.ಸಿ.ರಚನೆ, ಅಧಿಕಾರ ಮತ್ತು ಕರ್ತವ್ಯಗಳು, ಸಕರ್ಾರದ ಪ್ರೋತ್ಸಾಹದಾಯಕ ಕಾರ್ಯಕ್ರಮಗಳು, ಶಿಕ್ಷಣದ ಸಾರ್ವತ್ರೀಕರಣದಲ್ಲಿ ಪೂರ್ವ ಪ್ರಾಥಮಿಕ ಶಿಕ್ಷಣದ ಮಹತ್ವ, ರೂಪುರೇಷೆಗಳು, ಶಿಕ್ಷಕರ ತರಬೇತಿಗಳು, ಅನುಪಾಲನೆ, ಶಿಕ್ಷಣದ ಸಾರ್ವತ್ರೀಕರಣಕ್ಕಾಗಿ ಸಕರ್ಾರದ  ಮಹತ್ವಾಕಾಂಕ್ಷೆಯ ಕಾರ್ಯಕ್ರಮಗಳು, ಕನರ್ಾಟಕ ರಾಜ್ಯ ಮಕ್ಕಳ ರಕ್ಷಣಾನೀತಿ, ಶಾಲಾಭಿವೃದ್ಧಿ ಯೋಜನೆ  ಶಾಲೆಗಳಲ್ಲಿ ಸಾಮಾಜಿಕ ಲೆಕ್ಕ ಪರಿಶೋಧನೆ ಕುರಿತು ಮಾಹಿತಿ ನೀಡಿದರು.

        ಭರಮಪ್ಪ ಕೋಡಿಹಳ್ಳಿ, ಮರಳಿಹಳ್ಳಿ. ಮಾಹಾಂತೇಶ ಯಂಕಣ್ಣನವರ, ರಮೇಶ ಯಲ್ಲಣ್ಣನವರ, ಭೀಮಣ್ಣ ಕಳ್ಳಿಮನಿ, ವ್ಹಿ.ಎಂ.ಅರಳಿ,  ಪ್ರೌಢ ಶಾಲಾ ಮುಖ್ಯೋಪಾಧ್ಯಾರಾದ ಪಿ ಬಿ ಕಲ್ಪಾದಿ, ಸಂಪನ್ಮೂಲ ವ್ಯಕ್ತಿಗಳಾದ ಕೆ.ವ್ಹಿ.ಮೇಲ್ಮೂರಿ, ಎಸ್ ಐ.ಅಂಗಡಿ, ಎಸ್ ಎಸ್ ಮಡ್ಲೂರ, ಸಿ.ಆರ್.ಪಿ. ಕೆ.ವ್ಹಿ.ಮೇಲ್ಮೂರಿ ಅವರು ಉಪಸ್ಥಿತರಿದ್ದರು.