ರೈತ ಉತ್ಪಾದಕ ಸಂಸ್ಥೆಗಳಿಗೆ ಕೃಷಿ ಉತ್ಪನ್ನ ಮಾರುಕಟ್ಟೆ ಕುರಿತು ಒಂದು ದಿನದ ಕಾರ್ಯಾಗಾರ ಮತ್ತು ವಸ್ತು ಪ್ರದರ್ಶನ"
One-day workshop and exhibition on agricultural product marketing for farmer producer organizations
ಹುಬ್ಬಳ್ಳಿ 27: ಕರ್ನಾಟಕ ರಾಜ್ಯ ಕೃಷಿ ಮಾರಾಟ ಮಂಡಳಿಯ, ಕೃಷಿ ಮಾರಾಟ ತರಬೇತಿ ಮಹಾವಿದ್ಯಾಲಯ, ಹುಬ್ಬಳ್ಳಿ ಹಾಗೂ ಮಾರಾಟ ಮತ್ತು ತಪಾಸಣಾ ನಿರ್ದೇಶನಾಲಯ, ಭಾರತ ಸರ್ಕಾರ ಉಪ ಕಚೇರಿ ಹುಬ್ಬಳ್ಳಿ*ಇವರ ಸಹಯೋಗದಲ್ಲಿ "ರೈತ ಉತ್ಪಾದಕ ಸಂಸ್ಥೆಗಳಿಗೆ ಕೃಷಿ ಉತ್ಪನ್ನ ಮಾರುಕಟ್ಟೆ ಕುರಿತು ಒಂದು ದಿನದ ಕಾರ್ಯಾಗಾರ ಮತ್ತು ವಸ್ತು ಪ್ರದರ್ಶನ" ವನ್ನು ಕೃಷಿ ಮಾರಾಟ ತರಬೇತಿ ಮಹಾವಿದ್ಯಾಲಯ ಹುಬ್ಬಳ್ಳಿ ಹಮ್ಮಿಕೊಳ್ಳಲಾಗಿತ್ತು. ಸದರಿ ಕಾರ್ಯಕ್ರಮದಲ್ಲಿ ಡಾ.ರಂಜಿತ್ ಕುಮಾರಿ್ಪ.ಎಸ್ , ಮಾರಾಟ ಅಧಿಕಾರಿಗಳು, ಮಾರಾಟ ಮತ್ತು ತಪಾಸಣಾ ನಿರ್ದೇಶನಾಲಯ ಹುಬ್ಬಳ್ಳಿ ಪ್ರಸ್ತಾವಿಕ ಭಾಷಣ ಮಾಡುವದರೊಂದಿಗೆ ಕಾರ್ಯಗಾರದ ಪ್ರಾಮುಖ್ಯತೆ ಯನ್ನು ತಿಳಿಸಿದರು, ಮುಂದುವರೆದು ಡಾ.ಗೋವಿಂದ ರೆಡ್ಡಿ, ಡೆಪ್ಯುಟಿ ಮಾರ್ಕೆಟಿಂಗ್ ಅಡ್ವೈಸರ್, ಮಾರಾಟ ಮತ್ತು ತಪಾಸಣಾ ನಿರ್ದೇಶನಾಲಯದ ಭಾರತ ಸರಕಾರದ ಯೋಜನೆಗಳು,
ಹಾಗೂ ರೈತ ಉತ್ಪಾದಕ ಸಂಸ್ಥೆಗಳಿಗೆ ಕೇಂದ್ರ ಸರಕಾರಿ ಯೋಜನೆಗಳ ಬಗ್ಗೆ ಮಾಹಿತಿ ನೀಡಿದರು, ಡಾ.ಕೆ. ಕೊಡಿಗೌಡ, ಹೆಚ್ಚುವರಿ ನಿರ್ದೇಶಕರು, ಕಾನೂನು ಜಾರಿಕೋಶ, ಹುಬ್ಬಳ್ಳಿ ವಿಭಾಗ ಕೃಷಿ ಮಾರಾಟ ಇಲಾಖೆ ಇವರು ರೈತ ಉತ್ಪಾದಕ ಸಂಸ್ಥೆಗಳಿಗೆ ಕೃಷಿ ಉತ್ಪನ್ನ ಮಾರುಕಟ್ಟೆಗಳಿಂದ ಇರುವ ಉಪಯೋಗಗಳ ಬಗ್ಗೆ ತಿಳಿಸದರು, *ಶ್ರೀ. ಗೌರಿಶಂಕರ್ ಕರೋಶಿ, ಪ್ರಗತಿ ಪರ ರೈತರು ಹಾಗೂ ಸಾಮಾಜಿಕ ಜಾಲತಾಣದ ಪ್ರಭಾವಿಗಳು, ಇವರು ಸಾವಯವ ಕೃಷಿ, ಮೌಲ್ಯ ವರ್ಧನೆ ಹಾಗೂ ಮಾರುಕಟ್ಟೆಯ ಬಗ್ಗೆ ರೈತರಿಗೆ ಉಪಯುಕ್ತ ಮಾಹಿತಿ ನೀಡಿದರು*, ಆಶಿಕ್ ಅಲಿ. ಡಿ.ಎಮ್ ಪ್ರಾಚಾರ್ಯರು, ಕೃಷಿ ಮಾರಾಟ ಮಂಡಳಿಯ ಕಾರ್ಯಚಟುವಟಿಕೆಗಳ ಬಗ್ಗೆ ತಿಳಿಸುವದರೊಂದಿಗೆ ಕಾರ್ಯಕ್ರಮವನ್ನು ಸಮಾರೋಪಗೊಳಿಸಿದರು, ಶ್ರೀ ರಾಘವೇಂದ್ರ ಮುರಗೋಡ, ಹಿರಿಯ ಮಾರಾಟ ಅಧಿಕಾರಿಗಳು ಇವರು ಅಗ್ಮಾರ್ಕ್ ಸರ್ಟಿಫಿಕೇಷನ್ ಬಗ್ಗೆ ತಿಳಿಸುವದರೊಂದಿಗೆ ರೈತ ಉತ್ಪಾದಕ ಸಂಸ್ಥೆಗಳ ವಸ್ತು ಪ್ರದರ್ಶನವನ್ನು ಆಯೋಜಿಸಿ ಅದರ ಉಸ್ತುವಾರಿಯನ್ನು ವಹಿಸಿದರು, ನಿರೂಪಿಸಿದರು.
ಸುಪ್ರೀಂನಲ್ಲಿರುವ ಬೆಳಗಾವಿ ಜಿಲ್ಲೆಯ 350 ಪ್ರಕರಣಗಳಿಗೆ ರಾಜಿ ಸಂಧಾನದಿಂದ ಇತೇರ್ಥಕ್ಕೆ ಪ್ರಯತ್ನ : ನ್ಯಾ. ಮಂಜುನಾಥ ನಾಯಕ
ಇರಾನ್ ಸಂಘರ್ಷದ ಮೇಲೆ ಅಧ್ಯಕ್ಷರ ಯುದ್ಧಾಧಿಕಾರಗಳನ್ನು ನಿಯಂತ್ರಿಸಲು ಅಮೆರಿಕ ಸೆನೆಟ್ ಮತದಾನ; ಪಕ್ಷೀಯ ವಿಭಜನೆ ಬಹಿರಂಗ
ಸಚಿವ ಸತೀಶ್ ಜಾರಕಿಹೊಳಿ ಅಳಿಯನಿಗೆ ಇಡಿ ಶಾಕ್ ; ಮನೆ, ಕಚೇರಿ ಸೇರಿ 6 ಕಡೆ ದಾಳಿ
ಆತ್ಮನಿರ್ಭರ ಭಾರತ, ಮೇಕ್ ಇನ್ ಇಂಡಿಯಾ, ಇಂಧನ ಭದ್ರತೆ ರಾಷ್ಟ್ರದ ಪ್ರಮುಖ ಆದ್ಯತೆಗಳು: ಪ್ರಧಾನಿ ಮೋದಿ
ಸುಪ್ರೀಂ ಕೋರ್ಟ್ ನ್ಯಾಯವಾದಿ ಕಾತರಕಿ ಜೊತೆ ಕನ್ನಡ ಸಂಘಟನೆಗಳ ಸಂವಾದ ನಾಳೆ
ನಿಡಸೋಸಿ ರಸ್ತೆ ಅಗಲಿಕರಣಕ್ಕೆ ವೇಗ: ಭರದಿಂದ ಸಾಗಿದ ಮುಸ್ಲಿಂ ಸ್ಮಶಾನ ಆವರಣ ತೆರವು ಕಾರ್ಯಾಚರಣೆ; ಡಿಸಿ ಕಾರ್ಯಕ್ಕೆ ಮೆಚ್ವುಗೆ 