ಇಂಡಿ26: ರೈತರು ತಮ್ಮ ಸ್ವಂತ ಜಮೀನಿನಲ್ಲಿ ಹಿಪ್ಪು ನೇರಳೆ ಬೆಳೆ ಬೆಳೆದು ಸ್ವಾವಲಂಬಿಗಳಾಗಿ ಬದುಕಿ ಸಾಗಿಸಿ ಎಂದು ವಿಜಯಪುರ ರೇಷ್ಮೆ ಉಪ ನಿದರ್ೇಶಕ ಬಿ.ವೈ. ಬಿರಾದಾರ ಹೇಳಿದರು.
ಅವರು ರೇಷ್ಮೆ ಇಲಾಖೆ ವತಿಯಿಂದ ತಾಲೂಕಿನ ಇಂಗಳಗಿ ಗ್ರಾಮದ ಮಲ್ಲೇಶಪ್ಪ ಬಳಬಟ್ಟಿ ಅವರ ಹಿಪ್ಪು ನೆರಳೆ ತೋಟದಲ್ಲಿ ರೈತರಿಂದ ರೈತರಿಗೆ ಒಂದು ದಿನದ ಕ್ಲಸ್ಟರ್ ಮಟ್ಟದ ತರಬೇತಿ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಮಾತನಾಡಿ ಇಂಡಿ ತಾಲೂಕಿನಲ್ಲಿ ಮಳೆ ಪ್ರಮಾಣ ಕಡಿಮೆ ಇರುವುದರಿಂದ ರೇಷ್ಮೆ ಹುಳುಗಳಿಗೆ ಆಹಾರವಾದ ಹಿಪ್ಪು ನೇರಳೆಯನ್ನು ಮರ ಪಧ್ಧತಿಯಲ್ಲಿ ಬೆಳೆಯುವುದು ಸೂಕ್ತವಾಗಿದೆ. ಮರ ಪಧ್ಧತಿ ಬೆಳೆಯುವುದರಿಂದ ಹಿಪ್ಪು ನೇರಳೆ ಗಿಡಕ್ಕೆ ಬಹಳಷ್ಟು ದಿನ ನೀರು ಇಲ್ಲದಿದ್ದರೂ ಬೆಳೆ ಒಣಗಲ್ಲ. ಕಡಿಮೆ ನೀರಿದ್ದರೂ ಸಹ ಬೆಳೆ ಬೆಳೆಯಲು ಸಹಕಾರಿಯಾಗುತ್ತದೆ ಎಂದು ರೈತರಿಗೆ ತಿಳಿಸಿದರು.
ರೇಷ್ಮೆ ವಿಸ್ತೀಣರ್ಾಧಿಕಾರಿ ಎಂ.ಎಂ. ನದಾಫ್ ಮಾತನಾಡಿ ತಾಲೂಕಿನಲ್ಲಿರುವ ಹಿಪ್ಪು ನೇರಳೆ ಕ್ಷೇತ್ರ ಹಾಗೂ ಗೂಡು ಉತ್ಪಾದನೆ ಮತ್ತು ರೈತರಿಗೆ ಸಕರ್ಾರದಿಂದ ಸಿಗುವ ಸೌಲಭ್ಯಗಳ ಬಗ್ಗೆ ತಿಳಿಸಿದರು.
ರೈತರು ಹೆಚ್ಚಿನ ಸಂಖ್ಯೆಯಲ್ಲಿ ರೇಷ್ಮೆ ಬೆಳೆ ಬೆಳೆದು ಸ್ವಾವಲಂಬಿಗಳಾಗಿ ಬದುಕು ಸಾಗಿಸಬೇಕು. ಅನೇಕ ಯುವಕರು ಕೆಲಸ ಸಿಗದೇ ಇರುವುದರಿಂದ ರೇಷ್ಮೆ ಬೆಳೆ ಬೆಳೆದು ಉತ್ತಮ ಜೀವನ ನಡೆಸುತ್ತಿದ್ದಾರೆ. ಅವರಂತೆ ಇನ್ನುಳಿದ ಯುವಕರೂ ಸಹ ಜಮೀನಿದ್ದರೆ ರೇಷ್ಮೆ ಬೆಳೆ ಬೆಳೆದು ಸ್ವಾಭಿಮಾನದ ಬದುಕು ಸಾಗಿಸಬೇಕೆಂದು ತಿಳಿಸಿದರು.
ಇಂಡಿಯ ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಡಾ. ಆರ್. ಬಿ. ನೆಗಳೂರ ಮಾತನಾಡಿ ರೇಷ್ಮೆ ಕೃಷಿ ಸೇರಿದಂತೆ ಸಮಗ್ರ ಕೃಷಿಯ ಬಗ್ಗೆ ರೈತರಿಗೆ ಮನವರಿಕೆ ಮಾಡಿಕೊಟ್ಟರು. ಇಂಡಿ ಪಟ್ಟಣದಲ್ಲಿ ಕೃಷಿ ವಿಜ್ಞಾನ ಕೆಂದ್ರ ಪ್ರಾರಂಭಿಸಲಾಗಿದ್ದು ರೈತರು ಕೇಂದ್ರದ ಅನುಕೂಲ ಪಡೆಯಬೇಕು ಎಂದರು.
ಮತ್ತೋರ್ವ ವಿಜ್ಞಾನಿ ಶ್ರೀಮತಿ ಸೈಯದಾ ಸಮೀದಾ ಅಂಜುಮ್ ಮಾತನಾಡಿ ಹಿಪ್ಪು ನೆರಳೆ ತೋಟಕ್ಕೆ ತಗಲುವ ರೋಗ ಮತ್ತು ತಡೆಗಟ್ಟಲು ಬಳಸಬೇಕಾದ ಔಷಧೋಪಚಾರದ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದರು.
ಗುಳೇದಗುಡ್ಡದ ಪ್ರಗತಿಪರ ರೈತ ಡಾ. ಎಸ್.ಎಸ್. ನಾರಾ ಮಾತನಾಡಿ ರೇಷ್ಮೆ ಸಾಕಾಣಿಕೆ ಸಲಕರಣೆಯ ಬಗ್ಗೆ ತರಬೇತಿಯಲ್ಲಿ ವಿವರವಾಗಿ ತಿಳಿಸಿದರು.
ಎಸ್.ಬಿ ಅಜರ್ುನೆ, ಪ್ರಕಾಶ ಪೋತೆ, ಮಲ್ಲೇಶಪ್ಪ ಬಳಬಟ್ಟಿ ಅವರು ರೈತರಿಗೆ ತಿಳುವಳಿಕೆ ನೀಡಿದರು.
ಕಾರ್ಯಕ್ರಮವನ್ನು ರೇಷ್ಮೆ ಪ್ರದರ್ಶಕ ಆರ್.ಎಂ. ಮೇತ್ರಿ ನಿರೂಪಿಸಿ, ವಂದಿಸಿದರು.