ಪುದುಚೆರಿ, ಜೂನ್ 30: ಒನ್ ಸೈಡ್ ಲವ್ ಗೆ ಸಂಬಂಧಿಸಿದ ಪ್ರೇಮ ಪ್ರಕರಣವೊಂದರಲ್ಲಿ , ಯುವಕನೊಬ್ಬ ಸೋಮವಾರ ರಾತ್ರಿ 9 ನೇ ತರಗತಿಯ ವಿದ್ಯಾರ್ಥಿಯ ಮೇಲೆ ಬಿಸಿ ಎಣ್ಣೆ ಸುರಿದಿದ್ದಾನೆ. ಯುವಕ ಬಾಲಕಿಯನ್ನು ಪ್ರೀತಿಸುತ್ತಿದ್ದು, ಈ ವಿಷಯ ಆಕೆಗೆ ತಿಳಿದಿರಲಿಲ್ಲ. ಅಲ್ಲದೆ, ಆಕೆ ಹೋದಲ್ಲೆಲ್ಲಾ ಅವನು ಅವಳನ್ನು ಹಿಂಬಾಲಿಸುತ್ತಿದ್ದ ಎನ್ನಲಾಗಿದೆ. ಇದನ್ನೆಲ್ಲ ಗಮನಿಸಿದ ಆಕೆಯ ಪೋಷಕರು ಗದರಿಸಿ ಬುದ್ಧಿ ಹೇಳಿದ್ದಾರೆ. ಇದರಿಂದ ಕೋಪಗೊಂಡ ಯುವಕ ಕಳೆದ ರಾತ್ರಿ ಬಾಲಕಿ ನಿದ್ದೆ ಮಾಡುತ್ತಿದ್ದಾಗ ಕಿಟಕಿಯ ಮೂಲಕ ಹುಡುಗಿಯ ಮೇಲೆ ಬಿಸಿ ಎಣ್ಣೆ ಸುರಿದಿದ್ದಾನೆ. ಪೋಷಕರು ಆಕೆಯನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದು, ಸುಟ್ಟಗಾಯಗಳಿಗೆ ಚಿಕಿತ್ಸೆ ಪಡೆಯುತ್ತಿದ್ದಾರೆ.ಈ ಸಂಬಂಧ ನೀಡಲಾದ ದೂರಿನ ಮೇರೆಗೆ ಪ್ರಕರಣ ದಾಖಲಿಸಿ, ಯುವಕ ಮಾದೇಶ್ ನನ್ನು ಬಂಧಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.ಇತ್ತೀಚೆಗೆ 35 ವರ್ಷದ ಮಹಿಳೆ ತನ್ನ ಶೀಲವನ್ನು ಶಂಕಿಸಿದ್ದಕ್ಕಾಗಿ, ಗುಪ್ತಾಂಗಕ್ಕೆ ಬಿಸಿ ಹಾಲು ಸುರಿದಿದ್ದನ್ನು ಗಮನಿಸಬಹುದು.