ಒಂದು ದಿನದ ಪುನಶ್ಚೇತನ ಕಾರ್ಯಾಗಾರ

ಬ್ಯಾಡಗಿ17: ಶಾಲಾ ಶೈಕ್ಷಣಿಕ ಕಾರ್ಯ ಚಟುವಟಿಕೆಗಳಲ್ಲಿ ಬಿಸಿಯೂಟವು ಒಂದು ಅವಿಭಾಜ್ಯ ಅಂಗವಾಗಿದ್ದು, ಮಕ್ಕಳ ಆರೋಗ್ಯದ ದೃಷ್ಟಿಯಿಂದ ಶುಚಿ- ರುಚಿಯಿರುವ ಅಡುಗೆಯನ್ನು ತಯಾರಿಸಿ ನೀಡಲು ಬಿಸಿಯೂಟ ತಯಾರಕರು ಮುಂದಾಗಬೇಕು ಎಂದು ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ ಹೇಳಿದರು. 

ಪಟ್ಟಣದ ಎನ್.ಬಿ. ಬಿ. ಲಾಯೆನ್ಸ್ ಶಾಲೆಯಲ್ಲಿ ತಾಲೂಕ ಪಂಚಾಯತ, ಶಿಕ್ಷಣ ಇಲಾಖೆ ಮತ್ತು ಅಕ್ಷರ ದಾಸೋಹ ಯೋಜನೆಯ ಸಂಯುಕ್ತಾಶ್ರಯದಲ್ಲಿ ಅಕ್ಷರ ದಾಸೋಹದ ಬಿಸಿಯೂಟ ತಯಾರಕರಿಗೆ ಏರ್ಪಡಿಸಲಾಗಿದ್ದ ಒಂದು ದಿನದ ಪುನಶ್ಚೇತನ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದ ಅವರು ಶಾಲೆಗಳಲ್ಲಿ ಅಡುಗೆ ಸಿಬ್ಬಂದಿ ವಿರುದ್ಧ ಹಲವಾರು ದೂರುಗಳು ಕೇಳಿ ಬರುತ್ತಿದೆ. ಬಿಸಿಯೂಟ ತಯಾರಿಸುವಾಗ ಆಹಾರ ಧಾನ್ಯ ಸ್ವಚ್ಛಗೊಳಿಸದೆ ಹಾಗೂ ತಾಜಾ ತರಕಾರಿಗಳನ್ನು ಬಳಸದೇ ಅಡುಗೆ ತಯಾರಿಸಲಾಗುತ್ತಿದೆ ಎಂದು ಪಾಲಕರು ದೂರುತ್ತಿದ್ದಾರೆ. ಈ ಬಗ್ಗೆ ಶಿಕ್ಷಕರು ಮೇಲ್ವಿಚಾರಣೆ ನಡೆಸುವುದು ಸೂಕ್ತ ಎಂದು ತಿಳಿಸಿದರು. 

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ತಾ.ಪಂ. ಅಧ್ಯಕ್ಷೆ ಸವಿತಾ ಸುತ್ತಕೋಟಿ ಮಾತನಾಡಿ, ಶಾಲೆಯ ಮಕ್ಕಳನ್ನು ಮನೆ ಮಕ್ಕಳಂತೆ ಭಾವಿಸಿಕೊಂಡು ಉತ್ತಮ ಗುಣಮಟ್ಟದ ಆಹಾರವನ್ನು ತಯಾರಿಸಿ ಕೊಡಲು ಬಿಸಿಯೂಟ ತಯಾರಕರು ಮತ್ತು ಶಿಕ್ಷಕರು ಕಾಯರ್ೊನ್ಮುಖರಾಗಬೇಕು ಎಂದು ಹೇಳಿದರು. 

ಮುಖ್ಯ ಅತಿಥಿಗಳಾಗಿದ್ದ ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇ ಶಕರಾದ ಅಂದಾನೆಪ್ಪ ವಡಿಗೇರಿ  ಮಾತನಾಡಿ, ಪ್ರತಿಯೊಂದು ಶಾಲೆಯಲ್ಲಿಯೂ ಶಿಕ್ಷಕರು ಮತ್ತು ಬಿಸಿಯೂಟ ತಯಾರಕರು ಆಹಾರ ದಾಸ್ತಾನು, ಅಡುಗೆ ಕೊಠಡಿ, ಪಾತ್ರೆ ಪರಿಕರ, ಸ್ವಯಂ ಸ್ವಚ್ಛತೆಗೆ ಹೆಚ್ಚಿನ ಆದ್ಯತೆಯನ್ನು ನೀಡ ಮಕ್ಕಳಿಗೆ ಗುಣಮಟ್ಟದ ಆಹಾರವನ್ನು ತಯಾರಿಸಿ ನೀಡಬೇಕು. ಜೊತೆಗೆ ಬಿಸಿ  ಹಾಲನ್ನು ನೀಡುವಾಗ ಕಾಳಜಿ ವಹಿಸುವಂತೆ ಕಿವಿಮಾತನ್ನು ಹೇಳಿದರು. 

ಗ್ಯಾಸ್ ಏಜನ್ಸಿಯ ಸಿಬ್ಬಂದಿ ಸುಧೀರ ಹವಳದ ಮಾತನಾಡಿ, ಬಿಸಿಯೂಟ ತಯಾರಕರು ಅಡುಗೆ ತಯಾರಿಸುವಾಗ ಗ್ಯಾಸ್ ಸಿಲೆಂಡರ್ ಬಳಕೆಯ ಮುನ್ನೆಚ್ಚರಿಕೆ ಹಾಗೂ ತೊಂದರೆಯಾದಾಗ ಅನುಸರಿಸಬೇಕಾದ ಕ್ರಮಗಳ ಬಗ್ಗೆ ವಿವರಿಸಿ ಪ್ರಾತ್ಯಕ್ಷಿಕೆಯ ಮೂಲಕ ಮಾಹಿತಿ ಒದಗಿಸಿದರು. 

ಕಾರ್ಯಾಗಾರದಲ್ಲಿ ಜಿಲ್ಲಾ ಅಕ್ಷರ ದಾಸೋಹದ ಅಧಿಕಾರಿ ಎಸ್. ಬಿ. ಹಾದಿಮನಿ, ತಾ.ಪಂ. ಉಪಾಧ್ಯಕ್ಷೆ ಶಾಂತಮ್ಮ ದೇಸಾಯಿ, ಕ್ಷೇತ್ರ ಶಿಕ್ಷಣಾಧಿಕಾರಿ ಬಿ. ಕೆ. ರುದ್ರಮುನಿ, ಡಾ. ಎಸ್. ಎನ್. ನಿಡಗುಂದಿ, ವೀರೇಂದ್ರ ಶೆಟ್ಟರ ಹಾಗೂ ಇನ್ನಿತರರು ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಬಿಸಿಯೂಟದ ನಿರ್ವಹಣೆಯಲ್ಲಿ ಉತ್ತಮ ಕಾರ್ಯ ನಿರ್ವಹಿಸಿದ ಸಿಬ್ಬಂದಿಯನ್ನು ಸನ್ಮಾನಿಸಲಾಯಿತು. 

ಅಕ್ಷರ ದಾಸೋಹದ ಸಹಾಯಕ ನಿದರ್ೆಶಕ ತಿಮ್ಮಾರೆಡ್ಡಿ ಕಾರ್ಯಕ್ರಮವನ್ನು ಸ್ವಾಗತಿಸಿ ನಿರೂಪಿಸಿದರು. ಕ್ಷೇತ್ರ ಸಮನ್ವಯಾಧಿಕಾರಿ ಎಂ. ಎಫ್. ಬಾಕರ್ಿ ವಂದಿಸಿದರು.