ಅಯೋಧ್ಯೆ ತೀರ್ಪಿನ ದಿನ ಎಲ್ಲಾ ಅಧಿಕಾರಿಗಳು ಕಾನೂನು ಬದ್ಧವಾಗಿ ಕರ್ತವ್ಯ ನಿರ್ವಹಿಸಿ: ಸುನೀಲ್ಕುಮಾರ

ಕೊಪ್ಪಳ: ಸರ್ವೋಚ್ಛ ನ್ಯಾಯಾಲಯವು ಅಯೋಧ್ಯೆ ತೀಪು ಪ್ರಕಟಿಸುವ ದಿನ ಪೊಲೀಸ್ ಇಲಾಖೆ, ತಾಲ್ಲೂಕಾ ದಂಡಾಧಿಕಾರಿಗಳು ಸೇರಿದಂತೆ ಎಲ್ಲಾ ಇಲಾಖೆಗಳ ಅಧಿಕಾರಿಗಳು, ಸಿಬ್ಬಂದಿ ವೈಯಕ್ತಿಕ ಭಾವನೆಗಳಿಗೆ, ಬಾಹ್ಯ ಒತ್ತಡಗಳಿಗೆ ಒಳಗಾಗದೇ ಕಾನೂನು ಬದ್ಧವಾಗಿ ಕರ್ತವ್ಯ ನಿರ್ವಹಿಸಿ ಎಂದು ಜಿಲ್ಲಾಧಿಕಾರಿ ಪಿ. ಸುನೀಲ್ ಕುಮಾರ್ ಅಧಿಕಾರಿಗಳಿಗೆ ಸೂಚನೆ ನೀಡಿದರು. 

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಅಯೋಧ್ಯೆ ತೀಪು, ಈದ್ ಮಿಲಾದ್ ಆಚರಣೆ ಹಾಗೂ ಟಿಪ್ಪು ಜಯಂತಿ ಆಚರಣೆ ಕುರಿತು ಆಯೋಜಿಸಿದ್ದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. 

ರಾಮಜನ್ಮ ಭೂಮಿ ಮತ್ತು ಬಾಬ್ರಿ ಮಸೀದಿ ವಿವಾದದ ಕುರಿತು ಸರ್ವೋಚ್ಛ ನ್ಯಾಯಾಲಯವು ತೀಪು ಪ್ರಕಟಿಸಲಿದೆ. ಇದು ಭಾವನಾತ್ಮಕವಾಗಿ ವಿಚಾರವಾಗಿದ್ದು, ಯಾವುದೇ ಅಹಿತಕರ ಘಟನೆಗಳಿಗೆ ಅವಕಾಶ ನೀಡದಂತೆ ಅಧಿಕಾರಿಗಳು ಕರ್ತವ್ಯ ನಿರ್ವಹಿಸಬೇಕು. ಧಾಮರ್ಿಕ ವಿಷಯಗಳಲ್ಲಿ ಭಾವಾನಾತ್ಮಕವಾಗಿ ಸ್ಪಂದಿಸುವ ಮುನ್ನ ಸಮಾಜದ ಶಾಂತಿ, ಸುವ್ಯವಸ್ಥೆ ಕಾಪಾಡುವಲ್ಲಿ ಎಲ್ಲರೂ ಸಹಕರಿಸಬೇಕು. ತೀಪು ಪ್ರಕಟಣೆ ದಿನ ಯಾವುದೇ ಇಲಾಖೆಯ ಅಧಿಕಾರಿ, ಸಿಬ್ಬಂದಿ ರಜೆ ಮೇಲೆ ತೆರಳದೆ, ಕೇಂದ್ರ ಸ್ಥಾನದಲ್ಲಿದ್ದು ಯಾವುದೇ ಸಂದರ್ಭ ಲಭ್ಯವಿರಬೇಕು. ತೀಪರ್ಿನ ಪರಿಣಾಮ ಯಾವುದೇ ಪ್ರತಿಭಟನೆ ಅಥವಾ ವಿಜಯೋತ್ಸವ ಆಚರಿಸುವುದಿಲ್ಲ ಎಂದು ಉಭಯ ಧರ್ಮದವರೂ ತೀಮರ್ಾನಿಸಿ ಪೊಲೀಸ್ ಇಲಾಖೆಗೆ ಒಪ್ಪಿಗೆ ಸೂಚಿಸಿದ್ದಾರೆ. ಆದರೂ ತೀಪರ್ಿನ ಪರಿಣಾಮ ವ್ಯಕ್ತಿಗಳ ಭಾವನೆ ಮೇಲೆ ಯಾವುದೇ ರೀತಿಯ ಪ್ರಭಾವ ಬೀರಬಹುದು. ಭಾವವೇಷಕ್ಕೆ ಒಳಗಾಗಿ ಅಹಿತಕರ ಘಟನೆಗಳೂ ನಡೆಯಬಹುದು. ಆದ್ದರಿಂದ ಅಹಿತಕರ ಘಟನೆ ನಡೆಯುವ ಯಾವುದೇ ಮುನ್ಸೂಚನೆ ದೊರೆತಲ್ಲಿ ತಕ್ಷಣವೇ ಸಂಬಂಧಿಸಿದ ಅಧಿಕಾರಿಗಳಿಗೆ ಮಾಹಿತಿ ನೀಡಿ. ಅಂದು ಜಿಲ್ಲೆಯಾದ್ಯಂತ ಕಾನೂನು ಸುವ್ಯವಸ್ಥೆ ಕಾಪಾಡಲು ಪೊಲೀಸ್ ಇಲಾಖೆ ಹಾಗೂ ಜಿಲ್ಲಾಡಳಿತ ಸಕಲ ರೀತಿಯಲ್ಲಿ ವ್ಯವಸ್ಥೆ ಮಾಡಿಕೊಂಡಿದೆ. ಜಿಲ್ಲೆಯಾದ್ಯಂತ ಎಲ್ಲಾ ಅಧಿಕಾರಿಗಳಿಗೂ ಈ ಕುರಿತು ಕರ್ತವ್ಯ ಹಂಚಿಕೆ ಮಾಡಲಾಗಿದೆ. ಅಧಿಕಾರಿಗಳು ಪರಸ್ಪರ ಹೊಂದಾಣಿಕೆ ಹಾಗೂ ನಿರಂತರ ಸಂಪರ್ಕದಲ್ಲಿದ್ದು ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಎಚ್ಚರಿಕೆಯಿಂದ ಕಾರ್ಯ ನಿರ್ವಹಿಸಿ ಎಂದು ಅವರು ಹೇಳಿದರು. 

ಎರಡು ದಿನಗಳಲ್ಲಿ ಈದ್ ಮಿಲಾದ್ ಆಚರಣೆಯಿದ್ದು, ಅದಕ್ಕೆ ಸಂಬಂಧಿಸಿದ ಬ್ಯಾನರ್ಗಳನ್ನು ಹೊರತು ಪಡಿಸಿ ಯಾವುದೇ  ಧಾರ್ಮಿಕ ಬಾವುಟಗಳು, ಬ್ಯಾನರ್ಗಳನ್ನು ಮುಂದಿನ ಆದೇಶದವರೆಗೆ ತೆರವುಗೊಳಿಸಬೇಕು. ಹಾಗೆಯೇ ಸಕರ್ಾರದ ಆದೇಶದಂತೆ ಟಿಪ್ಪು ಜಯಂತಿ ಆಚರಣೆಯನ್ನು ರದ್ದುಗೊಳಿಸಲಾಗಿದೆ. ಆದ್ದರಿಂದ ಸಂಬಂಧಿಸಿದ ಸಮುದಾಯದವರು ಸಾರ್ವಜನಿಕವಾಗಿ ಎಲ್ಲಿಯೂ ಜಯಂತಿ ಆಚರಣೆ ಮಾಡುವುದಾಗಲೀ, ಭಾವುಟ, ಭಾವಚಿತ್ರ, ಬ್ಯಾನರ್ಗಳನ್ನು ಅಳವಡಿಸುವುದಾಗಲೀ ಮಾಡಬಾರದು. ಪೊಲೀಸ್ ಇಲಾಖೆಯೂ ಸಹ ಬ್ಯಾನರ್ ಅಳವಡಿಕೆ ಅಥವಾ ಆಚರಣೆ ಕುರಿತಂತೆ ಯಾವುದೇ ಪ್ರಭಾವಕ್ಕೆ ಒಳಗಾಗಿ ಅನುಮತಿ ನೀಡಬಾರದು. ಅಯೋಧ್ಯೆ ತೀಪು, ಈದ್ ಮಿಲಾದ್ ಆಚರಣೆ ಹಾಗೂ ಟಿಪ್ಪು ಜಯಂತಿ ಆಚರಣೆ ಕುರಿತಂತೆ ಸಕರ್ಾರದ ಆದೇಶದಂತೆ ಜಿಲ್ಲಾಡಳಿತ ಕರ್ತವ್ಯ ನಿರ್ವಹಿಸುತ್ತಿದ್ದು, ಎಲ್ಲಾ ಇಲಾಖೆಗಳೂ ಜಿಲ್ಲಾಡಳಿತದ ಆದೇಶಕ್ಕೆ ಬದ್ಧವಾಗಿ ಅದರಂತೆ ಕಾರ್ಯ ನಿರ್ವಹಿಸಬೇಕು ಎಂದು ಅವರು ಸೂಚನೆ ನೀಡಿದರು. 

ಟಿಪ್ಪು ಜಯಂತಿ ಹಾಗೂ ಅಯೋಧ್ಯೆ ತೀರ್ಪಿನ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಸುವುದು, ಆಕ್ಷೇಪಾರ್ಹ ಪೋಸ್ಟ್, ಕಮೆಂಟ್ ಹಾಗೂ ಸಂದೇಶ ರವಾನಿಸುವುದನ್ನು ಸಂಪೂರ್ಣ ನಿಷೇಧಿಸಲಾಗಿದೆ. ಒಂದು ವೇಳೆ ಸಾರ್ವಜನಿಕರಿಗೆ ಬೇರೆ ಮೂಲಗಳಿಂದ ಅಂತಹ ಆಕ್ಷೇಪಾರ್ಹ ಸಂದೇಶ ಬಂದಲ್ಲಿ ಕಳುಹಿಸಿದವರ ಕುರಿತು ಜಿಲ್ಲಾ ಪೊಲೀಸ್ ಇಲಾಖೆಗೆ ಮಾಹಿತಿ ನೀಡಬೇಕು. ಸಮಾಜದ ಶಾಂತಿ ಕದಡುವ, ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟುಮಾಡುವ ಯಾವುದೇ ಸಂದೇಶ ಕಳುಹಿಸಿದವರ ವಿರುದ್ಧ ವಾರಂಟ್ ರಹಿತ ಬಂಧನಕ್ಕೆ ಆದೇಶ ನೀಡಲಾಗುವುದು ಎಂದು ಅವರು ಎಚ್ಚರಿಕೆ ನೀಡಿದರು. 

ಸಭೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ. ಸಂಗೀತಾ, ಅಪರ ಜಿಲ್ಲಾಧಿಕಾರಿ ಎಂ.ಪಿ. ಮಾರುತಿ, ಉಪವಿಭಾಗಾಧಿಕಾರಿ ಸಿ.ಡಿ. ಗೀತಾ, ತಹಶೀಲ್ದಾರ್ ಜೆ.ಬಿ. ಮಜ್ಗಿ, ಡಿವೈಎಸ್ಪಿ ವೆಂಕಟಪ್ಪ ನಾಯಕ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.