23ರಂದು ಜಿಲ್ಲಾದ್ಯಂತ ಪಿಂಚಣಿ ಅದಾಲತ್ ಆಯೋಜಿಸಿ'

ಕೊಪ್ಪಳ 08: ಕೊಪ್ಪಳ ಜಿಲ್ಲೆಯ ನಿವೃತ್ತ ಹಾಗೂ ಕುಟುಂಬ ಪಿಂಚಣಿದಾರರ ದೂರುಗಳನ್ನು ಬಗೆಹರಿಸಲು ಆಗಸ್ಟ್. 23 ರಂದು ಜಿಲ್ಲಾದ್ಯಂತ ಪಿಂಚಣಿ ಅದಾಲತ್ ಕಾರ್ಯಕ್ರಮ ಆಯೋಜಿಸುವಂತೆ ಜಿಲ್ಲಾಧಿಕಾರಿ ಪಿ. ಸುನೀಲ್ ಕುಮಾರ್ ಅವರು ಪಿಂಚಣಿ, ಸಣ್ಣ ಉಳಿತಾಯ ಮತ್ತು ಆಸ್ತಿ-ಋಣ ನಿರ್ವಹಣೆ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದರು.  

ಅವರು ಇಂದು (ಆಗಸ್ಟ್.08) ತಮ್ಮ ಕಚೇರಿಯಲ್ಲಿ ಆಯೋಜಿಸಲಾದ ಪಿಂಚಣಿ ಅದಾಲತ್ ಕುರಿತ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.    

ಜಿಲ್ಲಾದ್ಯಂತ ಇರುವ ನಿವೃತ್ತ ಪಿಂಚಣಿದಾರರಿಗೆ ಹಾಗೂ ಕುಟುಂಬ ಪಿಂಚಣಿದಾರರಿಗೆ ಪಿಂಚಣಿ ಪಡೆಯಲು ಉಂಟಾಗುತ್ತಿರುವ ಸಮಸ್ಯೆಗಳು ಅಥವಾ ದೂರುಗಳನ್ನು ಆಗಸ್ಟ್. 23 ರೊಳಗಾಗಿ ಲಿಖಿತ ರೂಪದಲ್ಲಿ ಸಹಾಯಕ ನಿದರ್ೇಶಕರ ಕಛೇರಿ, ಪಿಂಚಣಿ, ಸಣ್ಣ ಉಳಿತಾಯ ಮತ್ತು ಆಸ್ತಿ-ಋಣ ನಿರ್ವಹಣೆ ಇಲಾಖೆಗೆ ಸಲ್ಲಿಸಬೇಕು.  ಈ ನಿಟ್ಟಿನಲ್ಲಿ ಸರಕಾರಿ ನಿವೃತ್ತ ನೌಕರರ ಸಂಘದ ಜಿಲ್ಲಾಧ್ಯಕ್ಷರು, ತಾಲ್ಲೂಕಾ ಅಧ್ಯಕ್ಷರು, ಕಾರ್ಯದಶರ್ಿಗಳು ಹಾಗೂ ಎಲ್ಲ ಪದಾಧಿಕಾರಿಗಳು ತಮ್ಮ ವ್ಯಾಪ್ತಿಗೆ ಒಳಪಡುವ ನಿವೃತ್ತ ಹಾಗೂ ಕುಟುಂಬ ಪಿಂಚಣಿದಾರರ ದೂರುಗಳನ್ನು ನಿದರ್ಿಷ್ಟ ಅವಧಿಯೊಳಗೆ ಪಿಂಚಣಿ, ಸಣ್ಣ ಉಳಿತಾಯ ಮತ್ತು ಆಸ್ತಿ-ಋಣ ನಿರ್ವಹಣೆ ಇಲಾಖೆಗೆ ಮುಂದಿನ ಕ್ರಮಕ್ಕಾಗಿ ಸಲ್ಲಿಸಬೇಕು ಎಂದರು. 

ಜಿಲ್ಲೆಯ ಎಲ್ಲಾ ಕಛೇರಿಗಳ ಮುಖ್ಯಸ್ಥರು ಆಗಸ್ಟ್ 23 ರಂದು ನಡೆಯಲಿರುವ ಪಿಂಚಣಿ ಅದಾಲತ್ ಸಭೆಗೆ ಹಾಜರಾಗಿ ತಮ್ಮ ಅಧೀನ ಕಛೇರಿಗಳಲ್ಲಿ ಪಿಂಚಣಿ ಪ್ರಾಧಿಕರಿಸುವಾಗ ಉದ್ಭವವಾಗುವ ಸಮಸ್ಯೆಗಳ ಬಗ್ಗೆ ಹಾಗೂ ಆಯಾ ಇಲಾಖೆಯಲ್ಲಿ ನಿವೃತ್ತಿ ಹೊಂದಿರುವ ಅಥವಾ ಮರಣ ಹೊಂದಿರುವ ನೌಕರರಲ್ಲಿ ಇಲ್ಲಿಯವರೆಗೆ ಪಿಂಚಣಿ ಪಾವತಿ ಆಗದೆ ಇರುವ ನೌಕರರ ಮಾಹಿತಿಯೊಂದಿಗೆ ಸಭೆಗೆ ಹಾಜರಾಗಬೇಕು.  ಜಿಲ್ಲಾ ಖಜಾನೆಯಲ್ಲಿ ಪಿಂಚಣಿ ಪಾವತಿ ಸಮಯದಲ್ಲಿ ಉಂಟಾಗುವ ಸಮಸ್ಯೆಗಳ ಇತ್ಯರ್ಥಕ್ಕೆ ಹಾಗೂ ಬ್ಯಾಂಕುಗಳಿಂದ ಪಿಂಚಣಿ ಪಡೆಯುತ್ತಿರುವ ಪಿಂಚಣಿದಾರರಿಗೆ ಪಿಂಚಣಿ ಪಾವತಿಸಲು  ಬ್ಯಾಂಕುಗಳಲ್ಲಿ ಉಂಟಾಗುವ ಸಮಸ್ಯೆಗಳ ಬಗ್ಗೆ ಸಭೆಯಲ್ಲಿ ಮಾಹಿತಿ ನೀಡಿ ಇದಕ್ಕೆ ಸೂಕ್ತ ಕ್ರಮ ಕೈಗೊಳ್ಳಬೇಕು.  ಸರಕಾರಿ ನಿವೃತ್ತ ನೌಕರರ ಸಂಘದ ಪ್ರತಿ ತಾಲ್ಲೂಕು ಮತ್ತು ಜಿಲ್ಲಾ ಅಧ್ಯಕ್ಷರ ವತಿಯಿಂದ ಪಿಂಚಣಿ ಅದಾಲತ್ ಕಾರ್ಯಕ್ರಮಗಳನ್ನು ನಡೆಸಬೇಕು.  ಪ್ರತಿ ತಾಲ್ಲೂಕಿನಲ್ಲಿ ಹಾಗೂ ಜಿಲ್ಲಾ ಮಟ್ಟದಲ್ಲಿಯೂ ಸಂಘಗಳಿವೆ.  ಇವುಗಳ ಸಹಯೋಗದಲ್ಲಿ ಪಿಂಚಣಿ ಅದಾಲತ್ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಪಿಂಚಣಿದಾರರ ಸಮಸ್ಯೆ ಅಥವಾ ದೂರನ್ನು ಸ್ವೀಕರಿಸಿ, ಇದಕ್ಕೆ ಸೂಕ್ತ ಕ್ರಮ ವಹಿಸುವಂತೆ ಜಿಲ್ಲಾಧಿಕಾರಿ ಪಿ. ಸುನೀಲ್ ಕುಮಾರ ಅವರು ಪಿಂಚಣಿ, ಸಣ್ಣ ಉಳಿತಾಯ ಮತ್ತು ಆಸ್ತಿ-ಋಣ ನಿರ್ವಹಣೆ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದರು. 

ಸಭೆಯಲ್ಲಿ ಸಣ್ಣ ಉಳಿತಾಯ ಮತ್ತು ಆಸ್ತಿ-ಋಣ ನಿರ್ವಹಣೆ ಇಲಾಖೆಯ ಪ್ರಭಾರಿ ಅಭಿವೃದ್ಧಿ ಅಧಿಕಾರಿ ಮೈಕಲ್ ಮೀರಜ್ಕರ್, ವೀರಭದ್ರಪ್ಪ ಪಾಟೀಲ, ಜಿಲ್ಲಾ ಖಜಾನೆ ಇಲಾಖೆಯ ಪ್ರಭಾರಿ ಉಪ ನಿದರ್ೇಶಕ ತಿರುಪತೆಪ್ಪ ದೇವರಮನಿ, ಖಜಾನೆ ಇಲಾಖೆಯ ಅನೀಲ್ ಕುಮಾರ್, ಜಿಲ್ಲಾ ನಿವೃತ್ತ ನೌಕರರ ಸಂಘದ ಕಾರ್ಯದಶರ್ಿ ಬೀರನಾಯಕ್, ನಿವೃತ್ತ ನೌಕರರ ಸಂಘದ ಮಲಂಗ್ಸಾಬ್, ಕೆ.ಶಾಂತವೀರ, ಚೆನ್ನಬಸಪ್ಪ ತಳವಾರ ಸೇರಿದಂತೆ ಲೀಡ್ ಬ್ಯಾಂಕ್ ವ್ಯಾವಸ್ಥಾಪಕರು ಮತ್ತು ವಿವಿಧ ಬ್ಯಾಂಕುಗಳ ಅಧಿಕಾರಿಗಳು ಹಾಗೂ ಮತ್ತಿತರರು ಉಪಸ್ಥಿತರಿದ್ದರು.