ಆನ್ ಲೈನ್ ಲೈನ್ ಮದ್ಯ ಮಾರಾಟ ತ್ವರಿತವಾಗಿ ಆರಂಭಗೊಳ್ಳಬೇಕು; ಅಮ್ರಿತ್ ಕಿರಣ್ ಸಿಂಗ್

ಮುಂಬೈ,ಫೆ ೭ ಭಾರತದಲ್ಲಿ  ಮದ್ಯ  ಆನ್‌ಲೈನ್  ಮಾರಾಟ  ವ್ಯವಸ್ಥೆ   ಎಷ್ಟು  ಬೇಗ ಆರಂಭಿಸಿದರೆ    ಅಷ್ಟು ಒಳ್ಳೆಯದು  ಎಂದು  ಇಂಟರ್ ನ್ಯಾಷನಲ್  ಸ್ಪಿರಿಟ್ ಅಂಡ್ ವೈನ್ಸ್ ಅಸೋಸಿಯೇಶನ್ ಆಫ್ ಇಂಡಿಯಾ ಕಾರ್ಯನಿರ್ವಾಹಕ ಅಧ್ಯಕ್ಷ ಅಮ್ರಿತ್   ಕಿರಣ್ ಸಿಂಗ್ ಹೇಳಿದ್ದಾರೆ.  ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರಗಳು ವಿಶೇಷ  ಶ್ರಮವಹಿಸಬೇಕು. ಅಭಿವೃದ್ಧಿಪರ ಹೆಜ್ಜೆ ಇರಿಸುತ್ತಿರುವ ಕೆಲ ಪ್ರಗತಿಪರ   ರಾಜ್ಯಗಳು ಈ  ವಿಷಯದಲ್ಲಿ   ಇತರ  ರಾಜ್ಯಗಳಿಗೆ  ಮಾರ್ಗದರ್ಶಕರಾಗ ಬೇಕು ಎಂದು  ಅವರು ಅಭಿಪ್ರಾಯಪಟ್ಟಿದ್ದಾರೆ.ಆನ್‌ಲೈನ್‌ನಲ್ಲಿ ಮದ್ಯ ಮಾರಾಟವನ್ನು ಪ್ರಾರಂಭಿಸಲು ಮತ್ತು ಈ ಅವಕಾಶದ ಲಾಭವನ್ನು ಪಡೆಯಲು ಇದು ಸರಿಯಾದ ಸಮಯ" ಎಂದು ಕಿರಣ್ ಸಿಂಗ್ ಹೇಳಿದ್ದಾರೆ.