ಮಹಾಲಿಂಗಪುರ 06: ಸ್ಥಳೀಯ ಕೆಎಲ್‌ಇ ಸಂಸ್ಥೆಯ ಎಸ್‌ಸಿಪಿ ಪಪೂ ಕಾಲೇಜು ಹಾಗೂ ಪ್ರೌಢಶಾಲೆಯ ಆಶ್ರಯದಲ್ಲಿ ಡಿ.6ರಂದು ವಿಜ್ಞಾನ ವಸ್ತು ಪ್ರದರ್ಶನ ಮತ್ತು ವಾಣಿಜ್ಯ ಸಂಭ್ರಮ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ತನ್ನಿಮಿತ್ತ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ವಿಜ್ಞಾನ ಮಾದರಿ ತಯಾರಿಸುವ ಸ್ಪರ್ಧೆ, ನೃತ್ಯ, ಗಾಯನ ಮತ್ತು ಭಾಷಣ ಸ್ಪರ್ಧೆ ಏರಿ್ಡಸಲಾಗಿದೆ. ವಿಜ್ಞಾನ ವಸ್ತುಪ್ರದರ್ಶನಕ್ಕೆ ಪ್ರಥಮ 4 ಸಾವಿರ, ದ್ವಿತೀಯ 3 ಸಾವಿರ, ತೃತೀಯ 2 ಸಾವಿರ, ಚತುರ್ಥ 1 ಸಾವಿರ ರೂ. ಬಹುಮಾನ, ನೃತ್ಯ, ಗಾಯನ, ಭಾಷಣ ಸ್ಪರ್ಧೆಗೆ ಪ್ರಥಮ, ದ್ವಿತೀಯ, ತೃತೀಯ ನಗದು ಬಹುಮಾನ ಹಾಗೂ ಸಮಗ್ರ ವೀರಾಗ್ರಣಿ ಆಕರ್ಷಕ ಟ್ರೋಫಿ ಘೋಷಿಸಲಾಗಿದೆ. ಡಿ.6ರಂದು ಬೆಳಗ್ಗೆ 10.30ಕ್ಕೆ ಉದ್ಘಾಟನಾ ಸಮಾರಂಭ ಜರುಗಲಿದೆ. ಸ್ಥಳೀಯ ಆಡಳಿತ ಮಂಡಳಿ ಸದಸ್ಯ ಅಶೋಕ ಅಂಗಡಿ ಉದ್ಘಾಟಿಸಲಿದ್ದಾರೆ. ಕೆಎಲ್‌ಇ ಶಿಕ್ಷಣ ಸಂಸ್ಥೆಯ ನಿರ್ದೇಶಕ ಜಯಾನಂದ ಮುನವಳ್ಳಿ ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಕೆಎಲ್‌ಇ ಪಾಲಿಟೆಕ್ನಿಕ್ ಪ್ರಾಚಾರ್ಯ ಎಸ್.ಐ.ಕುಂದಗೋಳ, ಪದವಿ ಪ್ರಾಚಾರ್ಯ ಡಾ.ಕೆ.ಎಂ.ಅವರಾದಿ, ಸ್ಥಾನಿಕ ಆಡಳಿತ ಮಂಡಳಿ ಸದಸ್ಯರಾದ ಬಸವರಾಜ ಡಫಳಾಪೂರ, ಸಂತೋಷ ಹುದ್ದಾರ, ಡಾ.ಪ್ರವೀಣ ಪಾಶ್ಚಾಪೂರ, ಮುಖ್ಯ ಗುರು ಐ.ಜಿ.ಯರಗಾಣಿ, ಎಸ್.ಬಿ.ಮಲಾಬಾದಿ, ಧನಂಜಯ ಕುಲಕರ್ಣಿ ಭಾಗವಹಿಸಲಿದ್ದಾರೆ.
ಬುಧವಾರ ಕಾಲೇಜಿನ ಆವರಣದಲ್ಲಿ ಪ್ರಚಾರ ಸಾಮಗ್ರಿಗಳನ್ನು ಬಿಡುಗಡೆ ಮಾಡಲಾಯಿತು. ಪಿಯು ಕಾಲೇಜಿನ ಪ್ರಾಚಾರ್ಯ ಎಲ್.ಬಿ.ತುಪ್ಪದ, ಪ್ರೌಢ ಶಾಲೆಯ ಉಪಪ್ರಾಂಶುಪಾಲ ಬಿ.ಎನ್.ಅರಕೇರಿ, ಎಂ.ಬಿ.ತೇಲ್ಕರ, ವಾಣಿಜ್ಯ ವಿಭಾಗದ ಮುಖ್ಯಸ್ಥ ಜಿ.ವೈ.ಕಿತ್ತೂರ, ಹಿರಿಯ ಉಪನ್ಯಾಸಕರಾದ ಆರ್.ಎನ್.ಪಟ್ಟಣಶೆಟ್ಟಿ, ಒಕ್ಕೂಟದ ಅಧ್ಯಕ್ಷ ಎಸ್.ವಿ.ಸಿದ್ನಾಳ, ಆರ್.ಎಸ್.ಕಲ್ಲೋಳಿ ಇದ್ದರು.