ಹೆಸ್ಕಾಂನಲ್ಲಿ ಓಂಬಡ್ಸಮನ್ ಸೇವೆ ಆರಂಭ : ಎಸ್ ಎಸ್ ಪಟ್ಟಶೆಟ್ಟಿ

ಲೋಕದರ್ಶನ ವರದಿ

ಬೆಳಗಾವಿ : ವಿಕ್ಷಣಾ ಓಂಬಡ್ಸಮನ್ ಸೇವೆ ಆರಂಭ ಇಂಧನ ಇಲಾಖೆಯಲ್ಲು ಪ್ರಾರಂಭವಾಗಿದೆ.

ಮಂಗಳವಾರ ನಗರದ ಹೆಸ್ಕಾಂ ಕಚೇರಿಯಲ್ಲಿ ನಡೆದ ಪತ್ರಿಕಾಗೊಷ್ಠಿಯಲ್ಲಿ ರಾಜ್ಯ ಓಂಬಡ್ಸಮನ್ ಎಸ್ ಎಸ್ ಪಟ್ಟಶೆಟ್ಟಿ ಅವರು ಮಾತನಾಡಿ ವಿದ್ಯುತ್ ತಂತಿ ಕಟ್ಟಾಯಿತು, ಟ್ರಾನ್ಸ್ಫಾರ್ಮರ್ ಸುಟ್ಟಿತು, ಕರೆಂಟ್ ಪ್ಯೂಸ್ ಹೋಯಿತು,ಕೆಇಬಿ ಲೈಮನ್ ಕೈಗೆ ಸಿಕ್ಕಿಲ್ಲ  ಹೀಗೆ ಅನೇಕ ಸಮಸ್ಯೆಗಳು ಬಂದರೆ  ಇನ್ನುಮುಂದೆ   ಓಂಬಡ್ಸಮನ್ ಕದ ತಟ್ಟಬಹುದು ಎಂದು ಹೇಳಿದರು.

ಕೆಇಬಿ ಕರೆ ಮಾಡಿದರೆ ಸಾಕು ತಕ್ಷಣವೇ ಲೈಮನ್ ಮುಲಕ ನಿಮ್ಮ ಕೇಲಸ ಮುಗಿಯುತ್ತದೆಎಂದು  ಕೆಇಆರ್ ಸಿ ಬೆಂಗಳೂರ ಇಲೆಕ್ಟ್ರಿಕಲ್ ಸಿಟಿ ಓಂಬಡ್ಸಮನ್ ಎಸ್ ಎಸ್ ಪಟ್ಟಣಶಟ್ಟಿ ಹೇಳಿದ್ದಾರೆ. ಹೆಸ್ಕಾಂ ಈ ಹೊಸ ಸೇವೆಯನ್ನು ಆರಂಭಿಸುತ್ತದೆ. ಇಲ್ಲಿಯ ವರೆಗೆ ಜಿಲ್ಲಾ ಪಂಚಾಯತಿಯಲ್ಲಿ ಮಾತ್ರ ಓಂಬಡ್ಸಮನ್ ಸೇವೆ ಇರುತಿತ್ತು. ಈಗ ಕೆಇಬಿ  ಹೆಸ್ಕಾಂ ಮತ್ತು ಇತರ ಇಲಾಖೆಯಲ್ಲೂ ಕಾರ್ಯ ಪ್ರಾರಂಭಿಸುತ್ತದೆ ಎಂದು ಹೇಳಿದರು.

ಸರಿಯಾದ ವೇಳೆಗೆ ಕಾರ್ಯ ನಿರ್ವಹಿಸದ ವಿದ್ಯುತ್ ಲೈನಮನ್ ದಂಡ ತೆರಬೇಕಾದ ಅನಿವಾರ್ಯತೆ ಎದುರಾಗಬೇಕಾಗುತ್ತದನಿಗದಿತ ಸಮಯದ ಒಳಗೆ ವಿದ್ಯುತ್ ಸಮಸ್ಯೆ ಬಗಿಹರಿಸದೇ ಇದ್ದಲ್ಲಿ  50 ರಿಂದ 200  ರೂ. ವರೆಗೆ ದೂರನ್ನು ಆಧರಿಸಿ ಲೈನಮನ್ ಮತ್ತು ಸಂಭಂದಿಸಿದ ವಲಯ ಅಧಿಕಾರಿಗಳೇ ದಂಡ ತುಂಬಬೇಕಾಗುತ್ತದೆ ಎಂದು ಹೇಳಿದರು.