ಟೋಕಿಯೊ, ಆ 20 ಭಾರತ ಮಹಿಳಾ ಹಾಕಿ ತಂಡ ಇಲ್ಲಿ ನಡೆದಿರುವ ಒಲಿಂಪಿಕ್ಸ್ ಟೆಸ್ಟ್ ಸರಣಿಯಲ್ಲಿ ಭರ್ಜರಿ ಪ್ರದರ್ಶನವನ್ನು ನೀಡಿದ್ದು, ಚೀನಾ ವಿರುದ್ಧ ಡ್ರಾ ಸಾಧಿಸುವಲ್ಲಿ ಸಫಲವಾಗಿದೆ.
ಭಾರತದ ಪೆನಾಲ್ಟಿ ಕಾರ್ನರ್ ನುರಿತೆ ಗುಜರಾತ್ ಕೌರ್ ಚಾಣಕ್ಯ ನಡೆ ಪ್ರದರ್ಶಿಸಿದರೂ, ಚೀನಾ ಗೋಲಿ ಕಣ್ಣು ತಪ್ಪಿಸಲು ಆಗಲಿಲ್ಲ. ಈ ಅವಧಿಯಲ್ಲಿ ಚೀನಾ ಭಾರತದ ಮೇಲೆ ಒತ್ತಡ ಹೇರುವ ಆಸೆ ಹೆಣೆದುಕೊಂಡಿತು. ಅಲ್ಲದೆ ಆಕ್ರಮಣಕಾರಿ ಆಟಕ್ಕೆ ಮುಂದಾಯಿತು. ಆದರೂ, ಮೊದಲಾವಧಿಯಲ್ಲಿ ಗೋಲುಗಳು ದಾಖಲಾಗಲಿಲ್ಲ.
ಭಾರತ ಎರಡನೇ ಅವಧಿಯ ಆರಂಭದಲ್ಲಿ ಭರ್ಜರಿ ಪ್ರದರ್ಶನ ನೀಡಿತು. ಆದರೆ, 17ನೇ ನಿಮಿಷದಲ್ಲಿ ಗೋಲು ಬಾರಿಸುವ ಯೋಜನೆ ಫಲಿಸಲಿಲ್ಲ. ಮೂರನೇ ಅವಧಿಯಲ್ಲಿ ಚೀನಾ ಆಕ್ರಮಣಕಾರಿ ಆಟವನ್ನು ಆಡುವ ಮೂಲಕ ಅಂಕ ಗಳಿಸುವ ಯೋಜನೆಯನ್ನು ಹೆಣೆದುಕೊಂಡಿತು. ಆದರೆ, 41ನೇ ನಿಮಿಷದಲ್ಲಿ ಸಿಕ್ಕ ಪೆನಾಲ್ಟಿ ಕಾರ್ನರ್ ಅವಕಾಶದಲ್ಲಿ ಗೋಲು ನೀಡದಂತೆ ತಡೆಯುವಲ್ಲಿ ಭಾರತದ ಗೋಲ್ ಕೀಪರ್ ಸವಿತಾ ಸಫಲರಾದರು.
ಚೀನಾ ತಂಡಕ್ಕೆ ಸಿಕ್ಕ ಪೆನಾಲ್ಟಿ ಕಾರ್ನರ್ ಅವಕಾಶವನ್ನು ತಡೆಯುವಲ್ಲಿ ಭಾರತೀಯ ಆಟಗಾತರ್ಿಯರು ಸಫಲರಾದರು.
ಭಾರತ ಮೂರು ಪಂದ್ಯಗಳಿಂದ ಐದು ಅಂಕ ಕಲೆ ಹಾಕಿದ್ದು, ಅಂಕ ಪಟ್ಟಿಯಲ್ಲಿ ಮೊದಲ ಸ್ಥಾನ ಹೊಂದಿದೆ. ಬುಧವಾರ ಭಾರತ, ಆತಿಥೇಯ ಜಪಾನ್ ವಿರುದ್ಧ ಫೈನಲ್ ಪಂದ್ಯದಲ್ಲಿ ಹೋರಾಟ ನಡೆಸಲಿದೆ.