ಲೋಕದರ್ಶನ ವರದಿ
ವಿಜಯಪುರ, 12 : ನಗರದ ಬಿ.ಎಲ್.ಡಿ.ಈ ಎಂಜನೀಯರಿಂಗ್ ಕಾಲೇಜು ಮತ್ತು ಲೀಡರ್ಸ ಎಕ್ಸಲ್ರೇಟಿಂಗ್ ಡೆವಲೆಪಮೆಂಟ ಪ್ರೋಗ್ರಾಮ್ ಸಹಯೋಗದಲ್ಲಿ ದಾನ ಉತ್ಸವದ ಅಂಗವಾಗಿ ಹಳೇ ಪುಸ್ತಕ ಮತ್ತು ನೋಟ್ ಬುಕ್ಗಳನ್ನು ಸಂಗ್ರಹಿಸಲಾಯಿತು.
ಈ ಅಭಿಯಾನವನ್ನು ಉದ್ದೇಶಿಸಿ ಮಾತನಾಡಿದ ಡಾ.ಪಿ.ವಿ. ಮಳಜಿ ಅವರು ವಿದ್ಯಾಥರ್ಿಗಳ ಈ ವಿನೂತನ ಕಾರ್ಯಕ್ಕೆ ಮಚ್ಚುಗೆ ವ್ಯಕ್ತ ಪಡಿಸಿ ಶ್ಲಾಘಿಸಿದರು.
ಲೀಡ್ ಕಾಲೇಜು ಸಂಯೋಜಕರಾದ ಉಪನ್ಯಾಸಕ ಗೋವಿಂದ ಮಧಭಾವಿ ಮತ್ತು ಲೀಡ್ ಸಂಯೋಜಕ ಪ್ರಮೋದ ಹುಕ್ಕೇರಿ ಮಾತನಾಡಿ, ಇಲ್ಲಿಯವರೆಗೆ ಸುಮಾರು 650 ಕ್ಕೂ ಹೆಚ್ಚು ಪುಸ್ತಕಗಳನ್ನು ಸಂಗ್ರಿಸಿದ್ದೇವೆ ಮತ್ತು ತನ್ಮೂಲಕ ಗ್ರಾಮೀಣ ಪ್ರದೇಶದ ಮಕ್ಕಳಿಗೆ ಈ ಪುಸ್ತಕಗಳನ್ನು ತಲುಪಿಸುವ ಕಾರ್ಯವನ್ನು ಮಾಡುತ್ತಿದ್ದೇವೆ ಎಂದರು.
ಇಲ್ಲಿ ಸಂಗ್ರಹಿತವಾದ ಪುಸ್ತಕಗಳನ್ನು ಒಟ್ಟುಗೂಡಿಸಿ ಒಂದು ಸಣ್ಣ ಗ್ರಾಮವನ್ನು ಆಯ್ಕೆಮಾಡಿಕೊಂಡು ಹಳ್ಳಿಯ ಜನರ ಸಹಭಾಗಿತ್ವದಲ್ಲಿ ಲೀಡ್ ವಿದ್ಯಾಥರ್ಿಸ್ನೇಹಿ ಗ್ರಂಥಾಲಯ ವನ್ನು ಆರಂಭಿಸಲಾಗುವುದು ಎಂದರು.
ಡಾ.ಎಸ್.ಆರ್.ಸವಣೂರ. ಪ್ರೋ ಎಸ್.ಸಿ.ಸಂಕದ ಮತ್ತು ಕಾಲೇಜು ಉಪನ್ಯಾಸಕರು ಮತ್ತು ಲೀಡ್ ವಿದ್ಯಾಥರ್ಿಗಳು ಈ ಸಂಧರ್ಭದಲ್ಲಿ ಉಪಸ್ಥಿತರಿದ್ದರು.