ಸುಗಮ ಸಂಚಾರಕ್ಕಾಗಿ ಅನೂಕೂಲ ಮಾಡಿಕೊಡಲು ಅಧಿಕಾರಿಗಳಿಗೆ ಒತ್ತಾಯ : ಭಂಡಾರಿ

Officials urged to provide facilities for smooth traffic: Bhandari

ವಿಜಯಪುರ 16: ಆಟೋರಿಕ್ಷಾ ಬಗ್ಗೆ ಸಂಚಾರಿ ಪೊಲೀಸ್ ಇಲಾಖೆ, ಹೋಮಗಾರ್ಡ್‌ ವತಿಯಿಂದ ಕೆಲವು ನಿಯಮಗಳ ಬಗ್ಗೆ ತಿದ್ದುಪಡಿ ಮಾಡಬೇಕೆಂದು ಜಿಲ್ಲಾ ಆಟೋರಿಕ್ಷಾ ಯುನಿಯನ್, ಬಿಜಾಪುರ ವತಿಯಿಂದ ಜಿಲ್ಲಾಡಳಿತದ ಮುಖಾಂತರ ಮುಖ್ಯಮಂತ್ರಿಯವರಿಗೆ, ಗೃಹ ಮಂತ್ರಿಯವರಿಗೆ, ಸಾರಿಗೆ ಸಚಿವರಿಗೆ ಮನವಿ ಸಲ್ಲಿಸಲಾಯಿತು.  

ಈ ಸಂದರ್ಭದಲ್ಲಿ ಮಹ್ಮದ ಗುಲಾಬ್ ಭಂಡಾರಿ ಮಾತನಾಡಿ, ಶಿವಾಜಿ ಸರ್ಕಲ್‌ದಿಂದ, ಬಸವೇಶ್ವರ ಸರ್ಕಲ್‌ದಿಂದ ಗಾಂಧಿ ಸರ್ಕಲ್‌ವರೆಗೆ ಕೇವಲ ಆಟೋರಿಕ್ಷಾ ಸಲುವಾಗಿ ಒನವೇ ಮಾಡಿದರಿಂದ ಕೆ.ಸಿ. ಮಾರ್ಕೇಟ್‌ನಲ್ಲಿ ಟ್ರಾಫಿಕ್ ಜಾಮ್ ಆಗುತ್ತದೆ. ಕೆ.ಸಿ. ಮಾರ್ಕೇಟ್ ರೋಡ ಸಂಚಾರಕ್ಕಾಗಿ ಸರಿಯಾದ ರಸ್ತೆ ಇರುವುದಿಲ್ಲ. ರಸ್ತೆಯಲ್ಲಾ ಹದಗೆಟ್ಟಿದ್ದರಿಂದ ಕೆ.ಸಿ. ಮಾರ್ಕೇಟ್ ಸಂಪೂರ್ಣ ಸಾರ್ವಜನಿಕರಿಗೆ ಹಾಗೂ ಆಟೋ ಸಂಚಾರಿಗಳಿಗೆ ತಿರುಗಾಡಲು ಅಡಚಣೆಯಾಗುತ್ತಿದೆ. ಮೇಲಾಗಿ ಪ್ರತಿಷ್ಠಿತ ಸರ್ಕಾರಿ ಕಾಲೇಜ ಇರುವುದರಿಂದ ವಿದ್ಯಾರ್ಥಿಗಳಿಗೆ ಸಂಚಾರ ಮಾಡಲು ತುಂಬಾ ತೊಂದರೆಯಾಗುತ್ತದೆ.  

ಈ ಒನ್‌ವೇ ರಸ್ತೆಯಿಂದ ಆಟೋಚಾಲಕರ ದುಡಿಮೆ ಕಡಿಮೆಯಾಗುತ್ತಿದೆ. ಪರಿಶ್ರಮ ಜಾಸ್ತಿಯಾಗುತ್ತಿದೆ. ಅದರಲ್ಲಿ ಕೆ.ಸಿ.ಮಾರ್ಕೇಟ್‌ನಿಂದ ಸುಗಮವಾಗಿ ಸಂಚಾರ ಮಾಡುವುದಕ್ಕೆ ಅನುಕೂಲ ಇರುವುದಿಲ್ಲ ಹಾಗೂ ಟ್ರಾಫಿಕ್ ಸಿಗ್ನಲ್ ಬೇಗ ಬಿಡುವುದರಿಂದ ಆ ರೋಡನಲ್ಲಿ ಆಟೋ ನಿಲ್ಲಬೇಕಾಗುತ್ತದೆ. ಇದೇ ಸಂದರ್ಭದಲ್ಲಿ ಆಟೋ ನಿಂತ ಕಾರಣಕ್ಕೆ ಹೋಮ್‌ಗಾರ್ಡ್‌ದವರು ತಮ್ಮ ಜವಾಬ್ದಾರಿಯನ್ನು ಮರೆತು ಆಟೋ ಚಾಲಕರೊಂದಿಗೆ ಮೇಲ್ದರ್ಜೆ ಅಧಿಕಾರಿಯ ವರ್ತನೆ ತೋರಿಸುತ್ತಾರೆ. ಹಾಗು ಅವಾಚ್ಯ ಶಬ್ಧದಿಂದ ಬಡ ಆಟೋ ಕೂಲಿಕಾರ್ಮಿಕರಿಗೆ ನಿಂದಿಸುತ್ತಾರೆ. ಇದರಿಂದ ಆಟೋ ಚಾಲಕರ ಪರಿಸ್ಥಿತಿ ಬೀದಿಗೆ ಬಂದಂತಾಗಿದೆ. ಇದೇ ಸಮಸ್ಯ ಕುರಿತು ಆಟೋ ಯೂನಿಯನ್ ವತಿಯಿಂದ ಅಧಿಕಾರಿಗಳಿಗೆ ಪ್ರಶ್ನೆ ಕೇಳಿದರೆ. ಯಾರಿಗೂ ಕವಡೆ ಕಾಸಿನ ಕಿಮತ್ತು ನೀಡುವುದಿಲ್ಲ. ಆಟೋ ಚಾಲಕರು ಮನಷ್ಯರೇ ಅಲ್ವಾ..? ಅನ್ನೋರೀತಿಯಲ್ಲಿ ವರ್ತನೆ ಮಾಡುತ್ತಾರೆ. ಈ ಸಂದೀಗ್ಧ ಪರಿಸ್ಥಿತಿಯನ್ನು ಅರಿತು. ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪೊಲೀಸ್ ವರೀಷ್ಠಾಧಿಕಾರಿಗಳು ನಮ್ಮ ಸಮಸ್ಯೆಗೆ ಧ್ವನಿಯಾಗಬೇಕೆಂದು ಈ ಮೂಲಕ ವಿನಂತಿಸುತ್ತೇವೆ.  

ಒಂದು ವೇಳೆ ನಮ್ಮ ಸಮಸ್ಯೆಗೆ ಅಧಿಕಾರಿಗಳು ಹಾಗೂ ಜಿಲ್ಲಾ ಪೊಲೀಸ್ ಇಲಾಖೆ ಸ್ಪಂಧಿಸಿದಿದ್ದರೆ. ಯೂನಿಯನ್ ವತಿಯಿಂದ ಮುಂಬರುವ ದಿನದಲ್ಲಿ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು.  

ಇದೇ ಸಂದರ್ಭದಲ್ಲಿ ಜಿಲ್ಲಾ ಆಟೋರಿಕ್ಷಾ ಯುನಿಯನ್ ಪದಾಧಿಕಾರಿಗಳು ಉಪಸ್ಥಿತರಿದ್ದರು.