ಸಭೆಗೆ ಗೈರಾದ ಅಧಿಕಾರಿಗಳು, ಸಿಡಿಮಿಡಿಗೊಂಡ ಶಾಸಕ

ಲೋಕದರ್ಶನ ವರದಿ

ಶಿರಹಟ್ಟಿ 24:ಪಟ್ಟಣದ ತಾಲೂಕು ಪಂಚಾಯ್ತಿ ಸಾಮಥ್ರ್ಯ ಸೌಧದಲ್ಲಿ ಶುಕ್ರವಾರ ನಡೆಯಬೇಕಾಗಿದ್ದ ಕೆಡಿಪಿ ತ್ರೈಮಾಸಿಕ ಸಭೆಯು ಅಧಿಕಾರಿಗಳ ಗೈರಿನಿಂದಾಗಿ ಸಿಡಿಮಿಡಿಗೊಂಡ ಶಾಸಕ ರಾಮಣ್ಣ ಲಮಾಣಿ ಸಭೆಯನ್ನು ಮೊಟಕುಗೊಳಸಿ ಹೊರನಡೆದರು.

ಪ್ರತಿ 3ತಿಂಗಳಿಗೊಮ್ಮೆ ಶಾಸಕರ ಅಧ್ಯಕ್ಷೆಯಲ್ಲಿ ನಡೆಯುವ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯು ಮುಂಜಾನೆ 11 ಘಂಟೆಗೆ ಪ್ರಾರಂಭವಾಗಬೇಕಾಗಿದ್ದ ಸಭಗೆ ಅಧಿಕಾರಿಗಳು ಗೈರಾಗಿ ಸಭೆಯ ಘನತೆಗೆ ಚ್ಯುತಿ ತಂದಿದ್ದು, ಜೊತೆಗೆ ಪ್ರತಿ ಇಲಾಖೆ ಅಧಿಕಾರಿಗಳು ಶಾಸಕರು ನಿದರ್ೇಶಿಸಿದ ವಿಷಯ ಪರಿಪಾಲಿಸದೆ ತಮಗೆ ಮನಃ ಬಂದಂತೆ ಅಧಿಕಾರ ನಡೆಸುತ್ತಿರುವುದು ಶಾಸಕರಿಗೆ ತೋರಿಸುವ ಅಗೌರವಾಗಿದೆ. ತಾಲೂಕು ಮಟ್ಟದ ಅಧಿಕಾರಿಗಳು ಶಾಸಕರ ಆದೇಶವನ್ನು ಪಾಲಿಸದೇ ಇದ್ದರೆ ಅವರನ್ನು ಇಟ್ಟುಕೊಂಡು ಏನು ಪ್ರಯೋಜನ, ಸಭೆಗಾದರು ಬಂದು ಮಹಿತಿಯ ಬಗ್ಗೆ ಚೆಚರ್ೆ ಮಾಡಿಬೇಕೆಂದರೆ ಸಭೆಗೂ ಬರುತ್ತಿಲ್ಲ. ಇವರ ನಡೆ ಸಾಕಷ್ಟು ಅನುಮಾನಕ್ಕೆ ಕಾರಣವಾಗಿದ್ದು, ಮುಂದಿನ ಸಭೆಗೆ ಕಡಾಕಂಡಿತವಾಗಿ ಗೈರಾದರೆ, ಅತ್ಯಂತ ಕಠಿಣ ಕ್ರಮಕ್ಕೆ ಮುಂದಾಗಲಾಗುವುದು ಎಂದು ಹೇಳಿದರು. 

ಅಸಹಾಯಕತೆ ತೋರಿದ ಇಒ: ಪ್ರತಿ ಕೆಡಿಪಿ, ಸಾಮಾನ್ಯ ಸಭೆಗೆ ಸರ್ವ ಇಲಾಖೆ ಅಧಿಕಾರಿಗಳು ಕಡ್ಡಾಯವಾಗಿ ಹಾಜರಾಗುವಂತೆ ನೋಟಿಸ್ ನೀಡಿದರೂ ಸಹ ಪಿಎಂಜಿಎಸ್ವೈ ಇಲಾಖೆ ಸೇರಿದಂತೆ ಕೆಲ ಅಧಿಕಾರಿಗಳು ಉದ್ದೇಶ ಪೂರ್ವಕವಾಗಿ ಸಭೆಗೆ ಗೈರಾಗುವುದರ ಮೂಲಕ ನೋಟಿಸ್ಗೆ ಅಗೌರವ ತೋರುತ್ತಿದ್ದು, ಮೇಲಾಧಿಕಾರಿಗಳ ಗಮನಕ್ಕೆ ತಂದರು ಯಾವುದೇ ಪ್ರಯೋಜನವಾಗುತ್ತಿಲ್ಲ ಎಂದು ಇಒ ಅವರು ತಮ್ಮ ಅಸಾಯಕತೆಯನ್ನು ಶಾಸಕರ ಎದುರು ತೋಡಿಕೊಂಡರು. 

ಸಭೆಗೆ ಗೈರಾದ ಅಧಿಕಾರಿಗಳು: ಸಿಡಿಪಿಒ ಅಧಿಕಾರಿ ಜಿ.ಆರ್. ಪವಿತ್ರ, ಗ್ರಾಮೀಣ ಕುಡಿಯುವ ನೀರು ಸರಬರಾಜ ಮತ್ತು ನೈರ್ಮಲ್ಯ ಇಲಾಖೆ ಹಾಗೂ ಜಿಪಂ ಇಲಾಖೆ ಅಧಿಕಾರಿ ನಾಗರತ್ನ, ಪಿಎಂಜಿಎಸ್ವೈ ಇಲಾಖೆ ಅಧಿಕಾರಿ, ತಾಲೂಕು ಆರೋಗ್ಯಾಧಿಕಾರಿ ಸುಭಾಸ ದೈಗೊಂಡ, ಸಮಾಜ ಕಲ್ಯಾಣ ಅಧಿಕಾರಿ ಎಸ್.ಬಿ. ಹತರ್ಿ, ಕಾರ್ಮಿಕ ಇಲಾಖೆ, ರೇಷ್ಮೆ ಇಲಾಖೆ, ಅಬಕಾರಿ, ಪೋಲಿಸ್, ತಹಶೀಲ್ದಾರ ಲಕ್ಷ್ಮೇಶ್ವರ, ಬಿಎಸ್ಎನ್ಎಲ್, ಹೆಸ್ಕಾಂ, ಸಹಕಾರಿ ಸಂಘ, ಕೆಎಸ್ಆರ್ಟಿಸಿ ಸೇರಿದಂತೆ ಶಿರಹಟ್ಟಿ ಹಾಗೂ ಲಕ್ಷ್ಮೇಶ್ವರ ಮುಖ್ಯಾಧಿಕಾರಿಗಳು ಸಭೆಗೆ ಗೈರು ಹಾಜರಾಗಿದ್ದರು. ಹೀಗಾಗಿ ಶಾಸಕರು ಸರ್ವ ಅಧಿಕಾರಿಗಳು ಸಭೆಗೆ ಹಾಜರಾಗದೆ ಜನರ ಸಮಸ್ಯೆಯನ್ನು ಯಾರ ಜೊತೆ ಚಚರ್ಿಸಬೇಕು ಎಂದು ಇಒ ಅವರನ್ನು ಪ್ರಶ್ನಿಸಿ, ಗೈರಾದ ಅಧಿಕಾರಿಗಳು ಅಮಾನತು ಗೊಳಿಸುವಂತೆ ಸೂಚಿಸಿದರು.