2025ಕ್ಕೆ ಅಧಿಕೃತ ಹಿಂದೂ ರಾಷ್ಟ್ರ ಘೋಷಣೆ: ಬಡಿಗೇರ

ಹುನಗುಂದ 02: ಜಗತ್ತನ್ನೇ ಕೇಸರಿಮಯ ಮಾಡೋರಿದ್ದೇವೆ 2025 ಕ್ಕೆ ಈ ದೇಶವನ್ನು ಅಧೀಕೃತವಾಗಿ ಹಿಂದು ರಾಷ್ಟ್ರ ಅಂತ ಘೋಷಣೆ ಮಾಡಲಿದ್ದೇವೆ. ತಾಕತ್ತಿದ್ದರೇ ತಡಿಯಲಿ ನೋಡೋಣ ಎಂದು ಹಿಂದು ಜಾಗರಣ ವೇದಿಕೆಯ ರಾಜ್ಯ ಸಂಚಾಲಕ ಶಿವಾನಂದ ಬಡಿಗೇರ ಹಿಂದು ವಿರೋಧಿಗಳಿಗೆ ಟಾಂಗ್ ನೀಡಿದರು. 

ಇಲ್ಲಿನ ಗುರುಭವನದಲ್ಲಿ ಹಿಂದು ಜಾಗರಣ ವೇದಿಕೆ ಹುನಗುಂದ ತಾಲೂಕ ಘಟಕ ಹಮ್ಮಿಕೊಂಡ ಛತ್ರಪತಿ ಶಿವಾಜಿ ಮಹಾರಾಜರ ಜಯಂತೋತ್ಸವ ಮತ್ತು ಹಿಂದು ಯುವ ಸಮಾವೇಶದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದ ಅವರು ಜಮ್ಮು ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದು ಮಾಡಿದರೇ ಇಡೀ ದೇಶವೇ ಪ್ರಳಯವಾಗುತ್ತೇ ಅಂತಿದ್ರು ಮತ್ತು ತ್ರಿಬಲ್ ತಲಾಕ್ ತಗಿಬೇಕು ಅಂತ ಸ್ವಾತಂತ್ರ್ಯ ಬಂದಾಗಿನಿಂದಲೂ ಹೊದಾಡುತ್ತಿದ್ದರೂ ಆದರೆ ಒಂದೇ ತಾಸಿನಲ್ಲಿ ಅದನ್ನು ರದ್ದು ಮಾಡಿದೆ.ಪಾಕಿಸ್ತಾನದ ಬಗ್ಗೆ ಒಳ್ಳೆದು ಮಾತನಾಡುವರು ಮೊಗ್ಗಲು ಮನೆವನಿಗೆ ಅಪ್ಪ ಎಂದಂತೆ. 

ಚೀನಾ ಪ್ಲಾಸ್ಟೀಕ್ ವಸ್ತು ಮತ್ತು ಪಾಕಿಸ್ತಾನದ ಪಟಾಕಿ ನಾವು ತಗೆದುಕೊಳ್ಳದಿದ್ದರೇ ಶೇ 50 ರಷ್ಟು ಆ ಎರಡು ರಾಷ್ಟ್ರ ದಿವಾಳಿಯಾಗಿ ಹೋಗುತ್ತವೆ.ಚೀನಾ ಮತ್ತು ಪಾಕಿಸ್ತಾನ ಸೈನ್ಯ ಸಂಬಳಕ್ಕಾಗಿ ದುಡಿತ್ತಾರೆ ಆದರೆ ಭಾರತ ದೇಶದ ಸೈನ್ಯ ಈ ದೇಶದ ಮಣ್ಣಿಗಾಗಿ ದುಡಿಯುತ್ತಾರೆ. ಮಹಮ್ಮದೀಯರ ದಾಳಿಯಿಂದ ಅವನತಿಯ ಹಾದಿಯಲ್ಲಿದ್ದ ಸನಾತನ ಹಿಂದು ಧರ್ಮವನ್ನು ರಕ್ಷಿಸಿ ಹಿಂದುಗಳ ಹೃದಯ ಸಾಮ್ರಾಜ್ಯದಲ್ಲಿ ಸದಾ ವಿರಾಜಮಾನದ ಹಿಂದು ಸಾಮ್ರಾಟ ಶಿವಾಜಿ ಮಹಾರಾಜರು ಸೋಲನ್ನು ಅರಿಯದಂತ ವ್ಯಕ್ತಿ,ಅವರು ಬದುಕಿದ ಐವತ್ತು ವರ್ಷದಲ್ಲಿ 3 ಸಾವಿರ ಯುದ್ದ ಮಾಡಿದ ಏಕೈಕ ಹಿಂದು ಸಮ್ರಾಟನಾಗಿದ್ದಾನೆ.

ಟಿಪ್ಪು ಸುಲ್ತಾನ ಮತ್ತು ಶಿವಾಜಿಯನ್ನು ಹೋಲಿಕೆ ಮಾಡಿದರೇ ಶಿವಾಜಿಯ ಮುಂದೆ ಟಿಪ್ಪು ಯಾವ ಲೆಕ್ಕ.ಟಿಪ್ಪು ಸುಲ್ತಾನ ಜಯಂತಿ ಮಾಡಿದ ಸರ್ಕಾರ ದಿವಾಳಿಯಾಗಿ ಹೋಯಿತು.ಟಿಪ್ಪು ಸುಲ್ತಾನ ನಂಬಿದವರು ಸರ್ವನಾಶವಾಗಿ ಹೋಗಿದ್ದಾರೆ.ಸಿಎಎಯಿಂದ ಈ ದೇಶದ ಮುಸ್ಲಿಂರಿಗೆ ಯಾವ ತೊಂದರೆಯಿಲ್ಲ.

ಹಿಂದುತ್ವಕ್ಕೆ ವಿರೋಧವಾದ 11 ಕೋಟಿ ಮುಸ್ಲಿಂರನ್ನು ಹೊರ ಹಾಕತ್ತೆವೆ.ಹಿಂದುತ್ವ ಈ ದೇಶದ ಮೂಲ.ಈ ದೇಶದ ಮಣ್ಣಿನ ಕಣ ಕಣದಲ್ಲೂ ಹಿಂದುತ್ವ ಇದೆ ಎಂದರು.    ಶಾಸಕ ದೊಡ್ಡನಗೌಡ ಪಾಟೀಲ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಧರ್ಮದ ಆಧಾರದ ಮೇಲೆ ದೇಶವನ್ನು ಹೊಡೆಯೋರು ಮೋದಿ ಮತ್ತು ಷಾ ಅಲ್ಲ ಈ ದೇಶದ ಹಿಂದು ವಿರೋಧಿಗಳು.ಕಲ್ಲು, ಮಣ್ಣು, ಕಟ್ಟಿಗೆ, ನೀರನಲ್ಲಿ ದೇವರನ್ನು ಕಾಣುವ ಸಂಪ್ರದಾಯ ನಮ್ಮದು ಆಹೋ ಜಾಹೋ ಸಂಸ್ಕೃತಿ ನಮ್ಮದಲ್ಲ. ಶಾಂತಿ, ಕ್ಷಮಾ ಗುಣ ಈ ದೇಶದ ಸಂಸ್ಕಾರ ಅದಕ್ಕೆ ವಿರುದ್ದವಾದರೇ ಶಿವಾಜಿಯಂತೆ ಶೂರತನದಿಂದ ಹೋರಾಡಿ ಜಯಪಡೆಯೋದು ಗೊತ್ತಿದೆ ಎಂದರು. ವೇ.ಮೂ.ಮಹಾಂತಯ್ಯ ಗಚ್ಚಿನಮಠ ಸಾನಿಧ್ಯವನ್ನು ವಹಿಸಿಕೊಂಡು ಮಾತನಾಡಿದರು. ಈ ಸಂದರ್ಭದಲ್ಲಿ ಶಿವಾಜಿ ಜಯಂತಿಯ ನಿಮಿತ್ಯ ಹಿಂದುತ್ವದ ಧ್ವಜವನ್ನು ಹಿಡಿದು ಬೈಕ್ ರ್ಯಾಲಿ ನಡೆಯಿತು ಮತ್ತು ಹಿಂದು ಜಾಗರಣ ವೇದಕೆಗೆ ಸಹಾಯ ಸಹಕಾರ ನೀಡಿದ ಗಣ್ಯರನ್ನು ಹಿಂದು ಜಾಗರಣ ವೇದಿಕೆಯಿಂದ ಸತ್ಕರಿಸಲಾಯಿತು. 

ಹಿಂದು ಜಾಗರಣ ವೇದಿಕೆಯ ತಾಲೂಕ ಅಧ್ಯಕ್ಷ ವೀರೇಶ ಬಂಡಿ,ನಗರ ಪ್ರಧಾನ ಕಾರ್ಯದರ್ಶಿ ಸಂತೋಷ ಬಡಿಗೇರ, ಬಸನಗೌಡ ಆರೇಗೌಡ್ರ,ಮಲ್ಲಿಕಾರ್ಜುನ ಚೂರಿ, ಶಿವು ಭಾವಿಕಟ್ಟಿ, ಮಂಜುನಾಥ ಆಲೂರ,ಚೇತನ ಮುಕ್ಕಣ್ಣವರ ಸೇರಿದಂತೆ ಅನೇಕರು ಇದ್ದರು.ಕಾರ್ಯಕ್ರಮವನ್ನು ಸಂಗಮೇಶ ಬಂಡೆಪ್ಪನವರ ನಿರೂಪಿಸಿದರು, ತಾಲೂಕ ಪ್ರಧಾನ ಕಾರ್ಯದರ್ಶಿ  ಲಕ್ಷ್ಮಣ ಗಾಯವಾಡ ವಂದಿಸಿದರು.