ಪ್ರವಾಹ ಪೀಡಿತ ಗ್ರಾಮಗಳಿಗೆ ಅಧಿಕಾರಿಗಳ ಭೇಟಿ

ಲೋಕದರ್ಶನ ವರದಿ

ಮಾಂಜರಿ 21:  ಇತ್ತೀಚಿಗೆ ಅಧಿಕಾರ ವಹಿಸಿಕೊಂಡಿರುವ ಚಿಕ್ಕೋಡಿಯ ನೂತನ ತಹಶೀಲ್ದಾರ್  ಎಸ್ ಎಸ್ ಸಂಪಗಾವಿ ಇಂದು ಕೃಷ್ಣಾ ನದಿ ಪ್ರವಾಹ ಪೀಡಿತ ಗ್ರಾಮಗಳಾದ  ಮಾಂಜರಿ  ಯಡೂರ ಚಂದೂರ ಇಂಗಳಿ ಗ್ರಾಮಗಳಿಗೆ ಭೇಟಿ ನೀಡಿ ಪ್ರವಾಹ ಪೀಡಿತ ಜನರ ಸಮಸ್ಯೆಗಳನ್ನು ಆಲಿಸಿಕೊಂಡು ಜನರ ಸಮಸ್ಯೆ ಕುರಿತು ಸ್ಪಂದಿಸಿ ರಾಜ್ಯ ಸರಕಾರಕ್ಕೆ ಜಿಲ್ಲಾಧಿಕಾರಿ ಮುಖಾಂತರ  ಪ್ರವಾಹ ಪೀಡಿತ ಜನರ ಸಮಸ್ಯೆಗಳು ಪ್ರಸ್ತಾವನೆ  ನೀಡಲಾಗುವುದು ಎಂದು ಹೇಳಿದರು.

      ಕೆಳದ ಆಗಸ್ಟ್ ತಿಂಗಳ ತಿಂಗಳಿನಲ್ಲಿ ಉಂಟಾಗಿರುವ  ಪ್ರವಾಹದಿಂದ ಹಲವಾರು ಜನರ ಮನೆ-ಮಠ ಬೆಳೆ ಎಲ್ಲವನ್ನೂ ಕಳೆದುಕೊಂಡಿದ್ದಾರೆ  ಆದರೆ ಪ್ರವಾಹ ಸಿಮಿಕ್ಷೆ ಕಾರ್ಯ ಮತ್ತು  ಹಾನಿಗಿಡದ ಮನೆಗಳ ಸವರ್ೇ ಕಾರ್ಯದಲ್ಲಿ ಲೋಪದೋಷ ಆಗುವುದರಿಂದ ನಿಜವಾದ ಫಲಾನುಭವಿಗಳು ವಂಚಿತರಾಗಿದ್ದಾರೆ ಇಂಥ ಫಲಾನುಭವಿಗಳನ್ನು ಗುರುತಿಸಿ ಸಂಬಂಧಪಟ್ಟ  ದಾಖಲೆಗಳನ್ನು ಪರಿಶೀಲಿಸಿ   ಜಿಲ್ಲಾಧಿಕಾರಿಗಳ ಮುಖಾಂತರ ರಾಜ್ಯಸಕರ್ಾರಕ್ಕೆ   ಪ್ರವಾಹ ಪೀಡಿತ ಜನರ ಸಮಸ್ಯೆಗಳು ಪ್ರಸ್ತಾವನೆಯನ್ನು ಸಲ್ಲಿಸಲಾಗುವುದು ಎಂದು  ಹೇಳಿದರು.