ಲೋಕದರ್ಶನ ವರದಿ
ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ನಕಲು ಮುಕ್ತ ಪರೀಕ್ಷೇ ನಡೆಸುವಲ್ಲಿ ಪ್ರಾಮಾಣಿಕ ತಮ್ಮ ಕರ್ತವ್ಯಗಳನ್ನು ನಿರ್ವಹಿಸಬೇಕು: ಬಲರಾಮ ಕಟ್ಟಿಮನಿ
ಮುದ್ದೇಬಿಹಾಳ 19: ಇದೇ ಮಾರ್ಚ್ 21ರಿಂದ ಆರಂಭವಾಗುವ ಎಸ್‌ಎಸ್‌ಎಲ್‌ಸಿ ಅತ್ಯಂತ ಪಾರದರ್ಶಕವಾಗಿ ಹಾಗೂ ಯಾವುದೇ ರೀತಿಯ ಅಕ್ರಮಗಳಿಗೆ ಅವಕಾಶ ನೀಡದಂತೆ ಸಂಬಸಿದ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ನಕಲು ಮುಕ್ತ ಪರೀಕ್ಷೇ ನಡೆಸುವಲ್ಲಿ ಪ್ರಾಮಾಣಿಕ ತಮ್ಮ ಕರ್ತವ್ಯಗಳನ್ನು ನಿರ್ವಹಿಸಬೇಕೆಂದು ತಹಶಿಲ್ದಾರ ಬಲರಾಮ ಕಟ್ಟಿಮನಿ ಅವರು ಹೇಳಿದರು. ಪಟ್ಟಣದ ತಾಲೂಕಾ ಕ್ಷೇತ್ರ ಶಿಕ್ಷಣ ಇಲಾಖೆ ಸಭಾ ಭವನದಲ್ಲಿ ಗುರುವಾರ 2024-25ನೇ ಸಾಲಿನ ಎಸ್ ಎಸ್ ಎಲ್ ಸಿ ಪರೀಕ್ಷೆ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ನೀಡಿರುವ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪರೀಕ್ಷೆಗೆ ನಿಯೋಜಿತರು ಪಾಲಿಸಬೇಕು. ಪ್ರತಿ ಪರೀಕ್ಷಾ ಕೇಂದ್ರದಲ್ಲಿ ಅಗತ್ಯ ಮೂಲ ಸೌಕರ್ಯ, ಸಿ.ಸಿ.ಟಿವಿ ಕಲ್ಪಿಸುವುದನ್ನು ಮೇಲಾಧಿಕಾರಿಗಳು ಖಾತರಿಪಡಿಸಿಕೊಳ್ಳಬೇಕು. ಪರೀಕ್ಷಾ ಕೇಂದ್ರಗಳಲ್ಲಿ ವೆಬಕಾಸ್ಟಿಂಗ್ ಕಡ್ಡಾಯವಾಗಿದ್ದು, ವೆಬ್ ಕಾಸ್ಟಿಂಗ್ ಅಗತ್ಯವಿರುವ ತಾಂತ್ರಿಕ ಸೌಲಭ್ಯಗಳನ್ನು ಖಚಿತಪಡಿಸಿಕೊಳ್ಳಬೇಕು. ಪರೀಕ್ಷಾ ವಿದ್ಯಾರ್ಥಿಗಳಿಗೆ ಆರೋಗ್ಯ ಸಂಬಂಧಿಸದಂತೆ ಸೂಕ್ತ ಆರೋಗ್ಯ ಸೇವೆ, ಕುಡಿಯುವ ನೀರಿನ ವ್ಯವಸ್ಥೆ, ಸಮರ್ಕ ವಿದ್ಯುತ್ ಪೂರೈಕೆ ಒದಗಿಸಲು ಹೇಸ್ಕಾಂ ಇಲಾಖೆ ಅಧಿಕಾರಿಗೊಂದಿಗೆ ಸಂಪರ್ಕಿಸುವುದು ಸೇರಿದಂತೆ ಹಲವು ರೀತಿ ಮೂಲಬೂತ ಸೌಲಭ್ಯಗಳನ್ನು ಕೈಗೊಳ್ಳಬೇಕು ಜತೆಗೆ ಪಾಲಕರನ್ನು ಪರೀಕ್ಷಾ ಕೇಂದ್ರದೊಳಗೆ ಪ್ರವೇಶ ನಿಷೇಧಿಸಲಾಗಿ ಕಾರಣ ಯಾರೂ ಕೂಡ ಬರದಂತೆ ನೋಡಿಕೊಳ್ಳಬೇಕು. ಒಂದು ವೇಳೆ ನಕಲು ಮಾಡಲು ಪ್ರೋತ್ಸಾಹಿಸುವವಂತಹ ಘಟನೆಗಳು ಕಂಡುಬಂದರೆ ತಕ್ಷಣವೇ ನಿಧಾಕ್ಷ್ಯಣ್ಯವಾಗಿ ಕೂಡಲೆ ಕ್ರಮ ಕೈಗೊಳ್ಳಲಾಗುವುದು ಬಹಳ ಎಚ್ಚರಿಕೆಯಿಂದ ನಕಲು ಮುಕ್ತ ವ್ಯವಸ್ಥಿತ ಪರೀಕ್ಷೆ ನಡೆಸಲು ಮುಂದಾಗಬೇಕು ಬೇಕು ಎಂದರು. ಈ ವೇಳೆ ತಾಲೂಕಾ ಕ್ಷೇತ್ರ ಶಿಕ್ಷಣಾಧಿಕಾರಿ ಬಿ ಎಸ್ ಸಾವಳಗಿ ಅವರು ಮಾತನಾಡಿ ಕಳೆದ ವರ್ಷ ತಾಲೂಕಿನಲ್ಲಿ ಎಸ್ ಎಸ್ ಎಲ್ ಪರೀಕ್ಷೇ ಸುವ್ಯವಸ್ಥೆಯಂತೆ ಯಶಸ್ವಿಯಾಗಿ ನಡೆಸಲಾಗಿತ್ತು. ಅದರಂತೆ ಈ ಬಾರಿಯೂ ಪರೀಕ್ಷಾ ಸಮಯದಲ್ಲಿ ಪ್ರಶ್ನೆ ಪತ್ರಿಕೆ ಸೂಕ್ತ ನಿಗದಿತ ಸಮಯದೊಳಗೆ ಆಯಾ ಪರೀಕ್ಷಾ ಕೇಂದ್ರಕ್ಕೆ ತಲುಪಿಸುವ ಮೂಲಕ ಯಾವೂದೇ ತೊಂದರೆ ಸಮಸ್ಯೆಗಳಾಗದಂತೆ ಸೂಸುತ್ರವಾಗಿ ಪರೀಕ್ಷೆಗಳು ನಡೆ ಯುವಂತೆ ನೋಡಿಕೊಳ್ಳಬೇಕು. ಈ ಬಾರಿ ಒಟ್ಟು 19 ಪರೀಕ್ಷಾ ಕೇಂದ್ರಗಳಲ್ಲಿ 3536 ಬಾಲಕರು, 2783 ಬಾಲಕಿರು ಸೇರಿದಂತೆ ಒಟ್ಟು 6319,ಪ್ರತಿ ಪರೀಕ್ಷಾ ಕೇಂದ್ರಕ್ಕೆ 19 ಅಧೀಕ್ಷರು, 19 ಜನ ಪ್ರಶ್ನೇ ಪತ್ರಿಕೆ ಪರಿಪಾಲಕರು, ಒಂದು ಕೋಠಡಿ 24 ವಿದ್ಯಾರ್ಥಿಗಳಂತೆ ಕೋಣೆಗಳನ್ನು ರಚಿಸಲಾಗಿದೆ, 450 ಕೋಠಡಿ ಮೇಲ್ವೀಚಾರಕರನ್ನು ನೇಮಿಸಲಾಗಿದೆ. ಪ್ರತಿ ಪರೀಕ್ಷಾ ಕೇಂದ್ರಕ್ಕೆ ಒಬ್ಬರಂತೆ 19 ಜನ ಜಾಗೃತ ದಳದ ಅಧಿಕಾರನ್ನು ನೇಮಿಸಲಾಗಿದೆ, 19 ಜನ ಮೋಬೈಲ್ ಸ್ಕಾ-್ವಡ್,ಒಟ್ಟು 5 ತಾಲೂಕಾ ಸ್ಕಾ-್ವಡ್ ತಂಡ ರಚಿಸಲಾಗಿದೆ ಎಂದರು. ಎಸ್ ಎಸ್ ಎಲ್ ಪರೀಕ್ಷೇ ನೋಡೆಲ್ ಅಧಿಕಾರಿ ಎಂ ಕೆ ಬಾಗವಾನ, ಲೋಕೋಪಯೋಗಿ ಇಲಾಖೆ ಎಇಇ ಶಿವನಗುತ್ತಿ, ಕ್ಷೇತ್ರ ಸಮಯ್ವಾಧಿಕಾರಿ ಯು ಬಿ ಧರಿಕಾರ, ಎ ಎಸೈ ಕೆ ಎಸ್ ಅಸ್ಕಿ, ತಾಲೂಕಾ ಪ0ಚಾಯತನ ಖೂಬಾಶಿಂಗ ಜಾಧವ, ತಾಳಿಕೋಟಿ ಉಪತಹಶಿಲ್ದಾರ ಜೈನಾಪೂರ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು, ಶಿಕ್ಷಕರು ಸಿಬ್ಬಂದಿಗಳು ಇದ್ದರು.