ಲೋಕದರ್ಶನ ವರದಿ
ಆಸ್ಪತ್ರೆಗೆ ಭೇಟಿ ನೀಡಿ ಪರೀಶೀಲಿಸಿದ ಉಸ್ತುವಾರಿ ಅಧಿಕಾರಿ ಕೆ.ವಿ.ಕಾವ್ಯರಾಣಿ
ಕಂಪ್ಲಿ 21: ಪಟ್ಟಣದ ಸರ್ಕಾರಿ ಸಮುದಾಯ ಆರೋಗ್ಯ ಕೇಂದ್ರಕ್ಕೆ ತಾಲೂಕು ಉಸ್ತುವಾರಿ ಅಧಿಕಾರಿ ಕೆ.ವಿ.ಕಾವ್ಯರಾಣಿ ಶುಕ್ರವಾರ ಭೇಟಿ ನೀಡಿ, ಪರೀಶೀಲಸಿದರು.
ಇಲ್ಲಿನ ಕಡತಗಳನ್ನು ಹಾಗೂ ಚಿಕಿತ್ಸೆಗೆ ಸಂಬಂಧಿಸಿದ ಓಷಧ ಸೇರಿದಂತೆ ಆಸ್ಪತ್ರೆಯ ಹೆರಿಗೆ ಹಾಗೂ ಬಾಣಂತಿಯರ ಕೊಠಡಿ ಹಾಗೂ ಎಲ್ಲಾ ಕೊಠಡಿಗಳಿಗೆ ತೆರಳಿ, ಪರೀಶೀಲನೆ ನಡೆಸಿದರು.
ನಂತರ ತಾಲೂಕು ಉಸ್ತುವಾರಿ ಅಧಿಕಾರಿ ಕೆ.ವಿ.ಕಾವ್ಯರಾಣಿ ಮಾತನಾಡಿ, ಇಲ್ಲಿನ ಆಸ್ಪತ್ರೆಯಲ್ಲಿ ಪರೀವೀಕ್ಷಣೆ ಮಾಡಿದಾಗ, ಚೆಕ್ ಲೀಸ್ಟ್ ಪ್ರಕಾರ ಪರೀಶೀಲನೆ ನಡೆಸಲಾಗಿದೆ. ಆಸ್ಪತ್ರೆ ಬಳಿಯಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಇದೆ. ನೀರು ಇಲ್ಲದ ಪರಿಣಾಮ ಸ್ಥಗಿತವಾಗಿದ್ದು, ಕೂಡಲೇ ಘಟಕ ಆರಂಭಿಸಿ, ನೀರು ಕಲ್ಪಿಸುವಂತೆ ಸಾರ್ವಜನಿಕರು ದೂರು ನೀಡಿದ ಹಿನ್ನಲೆ ತಾಪಂ, ಪುರಸಭೆ ಅಧಿಕಾರಿಗೆ ಜಂಟಿಯಾಗಿ ಕ್ರಮವಹಿಸಿ, ಏ.15 ಒಳಗೆ ಪುರಸಭೆಗೆ ಹಸ್ತಾಂತರಿಸಿ, ಆರ್‌ಒ ಪ್ಲಾಂಟ್ ಆರಂಭಿಸುವಂತೆ ಸೂಚಿಸಲಾಗಿದೆ. ರಾತ್ರಿ ವೇಳೆ ವೈದ್ಯರು ಇರುವುದಿಲ್ಲ ಎಂಬ ಆರೋಪ ಕೇಳಿ ಬಂದಿದ್ದು, ಒಂದು ವಾರ ಬಿಟ್ಟು, ತಹಶೀಲ್ದಾರ್ ರಾತ್ರಿ ಸಮಯದಲ್ಲಿ ಖುದ್ದಾಗಿ ಭೇಟಿ ನೀಡಿ, ಪರೀಶೀಲಿಸುವಂತೆ ತಿಳಿಸಲಾಗಿದೆ. ಮತ್ತು ಹೊರಗಡೆ ಓಷಧ ಬರೆಯುವುದನ್ನು ತಡೆಗಟ್ಟಲು ಸೂಕ್ತ ಕ್ರಮವಹಿಸಲಾಗುವುದು ಎಂದರು.
ಸಭೆ : ಇಲ್ಲಿನ ತಹಶೀಲ್ದಾರ್ ಕಛೇರಿಯ ಸಭಾಂಗಣದಲ್ಲಿ ತಾಲೂಕು ಉಸ್ತುವಾರಿ ಅಧಿಕಾರಿ ಕೆ.ವಿ.ಕಾವ್ಯರಾಣಿ ಇವರ ನೇತೃತ್ವದಲ್ಲಿ ವಿವಿಧ ಇಲಾಖೆ ಅಧಿಕಾರಿಗಳ ಸಭೆ ನಡೆಸಲಾಯಿತು.
ಇಲಾಖೆವಾರು ದಾಖಲೆ ಜತೆಗೆ ಅಂಕಿಅಂಶಗಳನ್ನು ತರದೇ ಇರುವುದರಿಂದ ಮುಂದಿನ ಸಭೆಯಲ್ಲಿ ಕಡ್ಡಾಯವಾಗಿ ತರಬೇಕೆಂದು ಸರಕಾರಧ 5ಗ್ಯಾರಂಟಿ ಜನರಿಗೆ ತಲುಪಿಸಿ ಕುಡಿಯು ನೀರು ಮತ್ತು ಪಂಚಾಯಿತಿ ಉದೋಗ್ಯ ಖಾತ್ರಿ ಸೇರಿದಂತೆ ಇಲಾಖೆ ಅಧಿಕಾರಿಗಳಿಗೆ ತಾಲೂಕು ಉಸ್ತುವಾರಿ ಅಧಿಕಾರಿ ಕೆ.ವಿ.ಕಾವ್ಯರಾಣಿ ಖಡಕ್ ಆಗಿ ಸೂಚಿಸಿದರು.
ಈ ಸಂದರ್ಭದಲ್ಲಿ ತಹಶೀಲ್ದಾರ್ ಶಿವರಾಜ ಶಿವಪುರ, ಆರ್‌ಐ ಜಗದೀಶ, ತಾಪಂ ಇಒ ಆರ್.ಕೆ.ಶ್ರೀಕುಮಾರ, ವೈದ್ಯಾಧಿಕಾರಿಗಳಾದ ಡಾ.ಅರುಣ್‌ಕುಮಾರ, ಡಾ.ರವೀಂದ್ರ ಕನಿಕೇರಿ, ಡಾ.ಮಲ್ಲೇಶಪ್ಪ, ಡಾ.ಶ್ರೀನಿವಾಸ, ಡಾ.ಪ್ರಕಾಶಗೌಡ ಸೇರಿದಂತೆ ಸಿಬ್ಬಂದಿ ಇದ್ದರು.ನಂತರ ಪಟ್ಟಣದ ಮೆಟ್ರಿಕ್ ನಂತರದ ಬಾಲಕಿಯರ ವಸತಿ ಶಾಲೆಗೆ ಭೇಟಿ ನೀಡಿ, ಪರೀಶೀಲಿಸಿದರು.