ಔರಂಗಾಬಾದ್ ಪೂರ್ವ ಕ್ಷೇತ್ರದಲ್ಲಿ ಠೇವಣಿ ಕಳೆದುಕೊಂಡ 32 ಅಭ್ಯರ್ಥಿಗಳು

 ಔರಂಗಾಬಾದ್, ಮಹಾರಾಷ್ಟ್ರ, ಅ.26:   ಜಯಗಳಿಸಿದ ಬಿಜೆಪಿ ಅಭ್ಯರ್ಥಿ ಮತ್ತು ಎಐಐಎಂಐಎಂ ಅಭ್ಯರ್ಥಿಯನ್ನು ಹೊರತುಪಡಿಸಿ, ಉಳಿದ 32 ಅಭ್ಯರ್ಥಿಗಳು ಔರಂಗಾಬಾದ್ ಪೂರ್ವ ವಿಧಾನಸಭಾ ಕ್ಷೇತ್ರದಲ್ಲಿ ಠೇವಣಿ ಕಳೆದುಕೊಂಡಿದ್ದಾರೆ. ಮರಾಠವಾಡ ಪ್ರದೇಶದ 46 ಕ್ಷೇತ್ರಗಳ ಪೈಕಿ ಈ ಕ್ಷೇತ್ರದಲ್ಲಿ ಅತಿ  ಹೆಚ್ಚು 34 ಅಭ್ಯರ್ಥಿಗಳು ಕಣದಲ್ಲಿದ್ದರು.  ಬಿಜೆಪಿ ಸರ್ಕಾರದ ಕೈಗಾರಿಕಾ ಸಚಿವ ಅತುಲ್ ಸೇವ್ ಮತ್ತು ಎಐಐಎಂ ಅಭ್ಯರ್ಥಿಗಳಾದ ಡಾ. ಗಫ್ಫಾರ್ ಖಾದ್ರಿ ನಡುವೆ ನಿಕಟ ಸ್ಪರ್ಧೆ ನಡೆದಿದ್ದು, ಇದರಲ್ಲಿ ಅತುಲ್ ಅವರು 13,900 ಮತಗಳಿಂದ ಗೆದ್ದಿದ್ದಾರೆ. ಎಸ್ಪಿ, ಬಿಎಸ್ಪಿ ಮತ್ತು ಸಣ್ಣ ಪಕ್ಷಗಳು ಮತ್ತು ಸ್ವತಂತ್ರ ಅಭ್ಯರ್ಥಿಗಳು ಸೇರಿದಂತೆ 32 ಅಭ್ಯರ್ಥಿಗಳು ತಮ್ಮ ಠೇವಣಿ ಕಳೆದುಕೊಂಡಿದ್ದಾರೆ. ಅತುಲ್ ಸೇವ್ ಅವರು ಡಾ.ಖಾದ್ರಿ ಅವರನ್ನು ಎರಡನೇ ಬಾರಿ ಸೋಲಿಸಿ ಕ್ಷೇತ್ರವನ್ನುಉಳಿಸಿಕೊಂಡಿದ್ದಾರೆ. 2014ರ ಚುನಾವಣೆಯಲ್ಲಿ, ಅತುಲ್ ಅವರು ಶಿವಸೇನೆಯ ಅಭ್ಯರ್ಥಿಯ ವಿರುದ್ಧ 4000 ಮತಗಳ ಅಂತರದಿಂದ ಗೆದ್ದಿದ್ದರು. ಆಗ ಶಿವಸೇನೆ ಪ್ರತ್ಯೇಕವಾಗಿ ಸ್ಪರ್ಧಿಸಿತ್ತು. ಆದಾಗ್ಯೂ, ಈ ಬಾರಿ ಬಿಜೆಪಿ ಮತ್ತು ಶಿವಸೇನೆ ಚುನಾವಣಾ ಪೂರ್ವ ಮೈತ್ರಿ ಮಾಡಿಕೊಂಡಿತ್ತು.