ನ. 28, ರಿಂದ 30ವರೆಗೆ ಭಾರಿ ಜಾನುವಾರುಗಳ ಪ್ರದರ್ಶನ ಜಾತ್ರೆ

ಲೋಕದರ್ಶನ ವರದಿ

ಬೈಲಹೊಂಗಲ, 21: ಪಟ್ಟಣದ ಐತಿಹಾಸಿಕ  ಶ್ರೀ ಮರಡಿ ಬಸವೇಶ್ವರ ದೇವಸ್ಥಾನದ ಜಾತ್ರಾ ಮಹೋತ್ಸವ ಅಂಗವಾಗಿ ನಾಡಿನ ಸಮಸ್ತ ರೈತ ಭಾಂದವರ ಸಹಕಾರದೊಂದಿಗೆ ಪಟ್ಟಣದಲ್ಲಿ ಪ್ರಪ್ರಥಮ ಬಾರಿಗೆ ನ. 28,29,30 ರಂದು ಭಾರೀ ಜಾನುವಾರುಗಳ ಪ್ರದರ್ಶನ ಜಾತ್ರೆ, ಅನಿಗೋಳ ರಸ್ತೆಯ ಎಪಿಎಂಸಿ ಜಾನುವಾರುಗಳ ಮಾರಾಟ ಪೇಟೆಯಲ್ಲಿ ವಿಜೃಂಭಣೆಯಿಂದ ಜರುಗಲಿದೆ ಎಂದು  ಶ್ರೀ ಮರಡಿ ಬಸವೇಶ್ವರ  ಜಾತ್ರಾ ಜಾನುವಾರು ಪ್ರದರ್ಶನ ಕಮೀಟಿ ಅಧ್ಯಕ್ಷ ಶಿವರಂಜನ್ ಬೋಳನ್ನವರ, ಉಪಾಧ್ಯಕ್ಷ ಮಡಿವಾಳಪ್ಪ ಹೋಟಿ ಹೇಳಿದರು.

     ಅವರು ಬುಧವಾರ ಪಟ್ಟಣದ ಬೈಲಹೊಂಗಲ ಪತ್ರಕರ್ತರ ಸಂಘದ ಕಾಯರ್ಾಲಯದಲ್ಲಿ ಜಂಟಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿ, ಇತ್ತಿಚೀನ ದಿನಗಳಲ್ಲಿ ಜಾನುವಾರುಗಳು ಸಂಖ್ಯೆ ಕಡಿಮೆಯಾಗುತ್ತಿದ್ದು, ರೈತ ಬಾಂಧವರು ದೇಶಿಯ ದನಗಳ ತಳಿಗಳ ಬಗ್ಗೆ ಆಸಕ್ತಿ ವಹಿಸಿ ಅವುಗಳನ್ನು ಉಳಿಸಿ, ಬೆಳೆಸುವ ಪ್ರವೃತ್ತಿ ಬೆಳೆಸಿಕೊಳ್ಳುವ ಅಗತ್ಯತೆಯಿದೆ. ಈ ನಿಟ್ಟಿನಲ್ಲಿ ಜಾನುವಾರು ಜಾತ್ರೆ ನಡೆಸಿ ಉತ್ತೇಜನ ಕೊಡಲಾಗುತ್ತಿದೆ ಎಂದರು.

ಪ್ರಸಕ್ತ ದಿನಮಾನದಲ್ಲಿ  ಬದುಕು ಯಾಂತ್ರಕೃತವಾಗಿ ಸಾಗುತ್ತಿರುವುದರಿಂದ ದೇಶಿ ಪದ್ಧತಿಯನ್ನು ನಾವು ಮರೆಯುತ್ತಿರುವುದು ಸರಿಯಾದ ಕ್ರಮವಲ್ಲ. ಜಾನುವಾರು ಸಾಕುವದರಿಂದ ಸಾವಯವ ಗೊಬ್ಬರ ಕೂಡಾ ಉತ್ಪತ್ತಿಯಾಗಿ ರೈತರಿಗೆ  ತುಂಬಾ ಅನುಕೂಲವಾಗಿದೆ. ಈ ಮೂರು ದಿನಗಳ ಕಾಲ ಜಾನುವಾರು ಜಾತ್ರೆ ನಡೆಯುವದರಿಂದ ಶುಕ್ರವಾರ ನಡೆಯುವ ಜಾನುವಾರು ಸಂತೆಗೆ ಕಳೆ ಬರಲಿದೆ ಎಂದರು.

ನ. 28 ರಂದು  ನಡೆಯುವ ಸಮಾರಂಭವನ್ನು ಶಾಖಾ ಮೂರುಸಾವಿರಮಠದ ಪ್ರಭುನೀಲಕಂಠ ಸ್ವಾಮೀಜಿ, ರುದ್ರಾಕ್ಷಿಮಠದ ಬಸವಲಿಂಗ ಸ್ವಾಮೀಜಿ, ಡಾ. ಮಹಾಂತಯ್ಯಶಾಸ್ತ್ರೀ ಅವರು ಬೃಹತ್ ಜಾನುವಾರು ಜಾತ್ರೆಗೆ ಚಾಲನೆ ನೀಡಲಿದ್ದಾರೆ. ದಿ. 30 ರಂದು ಮದ್ಯಾಹ್ನ 3 ಗಂಟೆಗೆ ಬಹುಮಾನ ವಿತರಿಸಲಾಗುವುದು.

ಜೋಡು ಎತ್ತು ಸ್ಪಧರ್ೆಯಲ್ಲಿ ವಿಜೇತರಾದವರಿಗೆ ಪ್ರಥಮ ಬಹುಮಾನ ರೂ. 21000, ದ್ವಿತೀಯ ಬಹುಮಾನ ರೂ. 15000, ತೃತೀಯ ಬಹುಮಾನ ರೂ.

10000,  ಜಾನುವಾರು ಜಾತ್ರೆಯ ಸವರ್ೊತ್ತಮ ಬಹುಮಾನ (ಜಾತ್ರಾ ಚಾಂಪಿಯನ್ ) ರೂ.21111, 2 ಹಲ್ಲಿನಿಂದ 6 ಹಲ್ಲಿನವರೆಗೆ ಒಂಟಿ ಹೋರಿಗಳಿಗೆ ಜೈ ಹನುಮಾನ ಗೆಳೆಯರ ಬಳಗದಿಂದ ಪ್ರಥಮ ಬಹುಮಾನ ರೂ.21000, ದ್ವಿತೀಯ ರೂ.15001, ತೃತೀಯ ರೂ.10001, ಹಾಗೂ ಹಲ್ಲ ಹಚ್ಚದ (ಹಾಲ ಹಲ್ಲು) ಒಂಟ ಹೋರಿಗಳಿಗೆ ಪ್ರಥಮ ಬಹುಮಾನ ರೂ.10000, ದ್ವಿತೀಯ ರೂ.7000, ತೃತೀಯ ರೂ. 5000, ದೇಶಿಯ ಆಕಳುಗಳಿಗೆ ರೂ.10000, ದ್ವೀತೀಯ 5000, ತೃತೀಯ ರೂ.3000, ಎಮ್ಮೆಗಳ ಆಕರ್ಷಕ ಬಹುಮಾನ ರೂ. 10000 ಪ್ರಥಮ, ರೂ. 5000 ದ್ವಿತೀಯ, ರೂ. 3000 ತೃತೀಯ ಬಹುಮಾನ, ಹಾಗೂ ನೆನಪಿನ ಕಾಣಿಕೆ  ನೀಡಲಾಗುತ್ತದೆ ಆಸಕ್ತ ರೈತರು ಬೃಹತ್ ಜಾನುವಾರು ಜಾತ್ರಗೆ  ಉಚಿತ ಪ್ರವೇಶವಿದ್ದು ಇದರ ಪ್ರಯೋಜನ ಪಡೆದುಕೊಳ್ಳಬೇಕೆಂದರು.

ಹೆಚ್ಚಿನ ಮಾಹಿತಿಗಾಗಿ 7022200550, 9980444468 ಸಂಪಕರ್ಿಸಲು ಕೋರಲಾಗಿದೆ.

ಪತ್ರಿಕಾಗೋಷ್ಠಿಯಲ್ಲಿ ರೈತ ಮುಖಂಡರಾದ ರುದ್ರಪ್ಪ ಹೊಸಮನಿ, ಮಹಾಂತೇಶ ತುರಮರಿ, ಮಹಾಂತೇಶ ಮತ್ತಿಕೊಪ್ಪ, ಮಾರುತಿ ತಿಗಡಿ, ಶಿವಾನಂದ ಇಂಚಲ ಇದ್ದರು.