ಗ್ರಾಪಂನ ಸೌಲಭ್ಯಗಳನ್ನ ಪಡೆಯಬೇಕು: ಪಿಡಿಒ ಕಟ್ಟಿಮನಿ

ಲೋಕದರ್ಶನ ವರದಿ

ಯಲಬುರ್ಗಾ  26: ಪ್ರತಿಯೊಂದು ವಾರ್ಡನಲ್ಲಿರುವ ಸಮಸ್ಯೆಗಳನ್ನ ನಮ್ಮ ಗಮನಕ್ಕೆ ತಂದರೆ ಆದಷ್ಟು ಶಿಘ್ರವಾಗಿ ನಿಮ್ಮ ಸಮಸ್ಯೆಗೆ ಪರಿಹಾರವನ್ನು ನೀಡುತ್ತೇವೆ ಎಂದು ಪಿಡಿಒ ಎಪ್ ಡಿ ಕಟ್ಟಿಮನಿ ಹೇಳಿದರು.

ತಾಲೂಕಿನ ಮೂಧೋಳ ಗ್ರಾಮದಲ್ಲಿ ಗ್ರಾಪಂನಿಂದ ಏರ್ಪಡಿಸಿದ್ದ ಗ್ರಾಮ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.

2019-20ನೇ ಸಾಲೀನ ವಿವಿಧ ಯೋಜನೆಗಳ ಕ್ರೀಯಾ ಯೋಜನೆ ಹಾಗೂ ವಾರ್ಡನ್ ಕುಂದು ಕೊರತೆಗಳ ಬಗ್ಗೆ ಚಚರ್ಿಸಿ ತಿಮರ್ಾನಿಸಲಾಗುವದು ಹಾಗೂ ಪ್ರತಿಯೊಂದು ಕುಟುಂಬಸ್ಥರು ತಪ್ಪದೆ ಉದ್ಯೋಗ ಖಾತ್ರಿ ಯೋಜನೆಯ ಲಾಭ ಪಡೆಯಬೇಕು ಇದರಿಂದ ಗುಳೆ ಹೋಗುವದನ್ನು ತಪ್ಪಿಸಿದಂತಾಗುತ್ತದೆ ಹಾಗೂ ಜನತೆಗೆ ವಿವಿಧ ಯೋಜನೆಗಳ ಲಾಭ ನೀಡಲು ಫಲಾನುಭವಿಗಳಾಗಿ ಆಯ್ಕೆ ಮಾಡಲಾಗುತ್ತದೆ ಪ್ರತಿಯೊಂದು ಕುಟುಂಬವು ಕಡ್ಡಾಯವಾಗಿ ಶೌಚಾಲಯವನ್ನು ಕಟ್ಟಿಸಿಕೊಳ್ಳಬೇಕು ಸ್ಚಚ್ಛತೆಗೆ ಆದ್ಯತೆ ನೀಡಬೇಕು ಎಂದರು.

ಈ ಸಂದರ್ಭದಲ್ಲಿ ಗ್ರಾಪಂ ಅಧ್ಯಕ್ಷೆ ವೀಜಯಲಕ್ಷ್ಮೀ ತಳವಾರ, ಸದಸ್ಯರಾದ ಸುರೇಶ ಹುನಗುಂದ, ಉಮೇಶ ಹವಳದ, ಈರಮ್ಮ ತಮ್ಮಿನಾಳ, ಸೇರಿದಂತೆ ಪಂಚಾಯತ ಸಿಬ್ಬಂದಿಗಳು ಜನತೆ ಹಾಜರಿದ್ದರು.