ಅಖಿಲ ಕರ್ನಾಟಕ ಬೆಳೆ ಸಮೀಕ್ಷೆದಾರರ ಪದಾಧಿಕಾರಿಗಳ ಪದಗ್ರಹಣ
Oath-taking of office bearers of All Karnataka Crop Surveyors
ಲೋಕದರ್ಶನ ವರದಿ
ವಿಜಯಪುರ 14: ಅಖಿಲ ಕರ್ನಾಟಕ ಬೆಳೆ ಸಮೀಕ್ಷೆದಾರರ ಸಂಘಟನೆಯ ರಾಜ್ಯ ಸಮಿತಿಯ ಪದಾಧಿಕಾರಿಗಳ ನೇತೃತ್ವದಲ್ಲಿ ವಿಜಯಪುರ ಜಿಲ್ಲೆಯ ಸಮಸ್ತ ತಾಲೂಕಾಗಳ ಹಾಗೂ ಜಿಲ್ಲಾ ಘಟಕದ ಪದಾಧಿಕಾರಿಗಳ ಪದಗ್ರಹಣ ಹಾಗೂ ಪ್ರಮಾಣ ವಚನ ಸ್ವೀಕಾರ ಸಮಾರಂಭವು ಬುಧವಾರದಂದು ವಿಜಯಪುರದ ಗಗನ ಮಹಲ ಗಾರ್ಡನನಲ್ಲಿ ನೆರವೇರಿತು. ಈ ವೇಳೆ ಸುತ್ತ -ಮುತ್ತಲಿನ ಜಿಲ್ಲೆಗಳ ಹಲವಾರು ತಾಲೂಕಿನ ಬೆಳೆ ಸಮೀಕ್ಷೆದಾರ ಸಂಘಟನೆಯ ಪದಾಧಿಕಾರಿಗಳು ಕೂಡಾ ಭಾಗವಹಿಸಿದ್ದರು. ಸರಿಸುಮಾರು 60 ಜನ ಪದಾಧಿಕಾರಿಗಳಿಗೆಲ್ಲ ರಾಜ್ಯ ಅಧ್ಯಕ್ಷರಾದ ಭೀಮಪ್ಪ ಲಕ್ಷ್ಮಣ ತಳವಾರ ಅವರು ಪ್ರಮಾಣ ವಚನ ಬೋಧನೆಯನ್ನು ಸಂಸ್ಥಾಪಕರಾದ ನರಸಪ್ಪ ಅರ್ಜುನ್ ನಾವಿ ಅವರ ಸಮ್ಮುಖದಲ್ಲಿ ನೆರವೇರಿಸಿದರು.
ತದನಂತರ ವಿಜಯಪುರ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿವರಾದ ಸೋಮಶೇಖರ ನಾಯ್ಕೋಡಿ ಅವರ ನೇತೃತ್ವದಲ್ಲಿ ಎಲ್ಲಾ ತಾಲೂಕಿನ ಹಾಗೂ ಜಿಲ್ಲಾ ಘಟಕದ ಪದಾಧಿಕಾರಿಗಳೊಡನೆ ಮಾನ್ಯ ಜಿಲ್ಲಾಧಿಕಾರಿಗಲಾದ ಡಾ.ಕೆ.ಆನಂದ ಅವರನ್ನು ಭೇಟಿ ನೀಡಿ ಅವರ ಮುಖಾಂತರ ಸಿದ್ಧರಾಮಯ್ಯ ಮಾನ್ಯ ಮುಖ್ಯಮಂತ್ರಿಗಳವರಿಗೆ ಮನವಿ ಸಲ್ಲಿಸಿ ಕೂಡಲೇ ನಮ್ಮ ಬೇಡಿಕೆ ಈಡೇರಿಸುವಂತೆ ಆಗ್ರಹ ಮಾಡಲಾಯಿತು.
ಇದೇವೇಳೆ ಕೃಷಿ ಇಲಾಖೆಯ ಜಂಟಿ ನಿರ್ದೇಶಕರಾದ ಶಿವನಗೌಡ ಪಾಟೀಲ ಅವರನ್ನು ಭೇಟಿ ಮಾಡಿ ಅವರ ಮುಖಾಂತರ ಕೃಷಿ ಸಚಿವರಾದ ಎನ್ ಚಲುವರಾಯಸ್ವಾಮಿ ಅವರಿಗೂ ಮನವಿ ಸಲ್ಲಿಸುತ್ತಾ ಕರ್ನಾಟಕದ ಸಮಸ್ತ 23,720 ಜನ ಬೆಳೆ ಸಮೀಕ್ಷೆದಾರರಾದ ನಮ್ಮನ್ನೆಲ್ಲ ಕನಿಷ್ಠ ವೇತನದ ನೀತಿ ಇದರ ಅಡಿಯಲ್ಲಿ ದಿನಗೂಲಿ ಕಾರ್ಮಿಕರನ್ನಾಗಿ ನೇಮಕ ಮಾಡಿಕೊಂಡು ವರ್ಷ ಪೂರ್ತಿ ಕೆಲಸ ನೀಡಬೇಕೆಂದು ಮನವಿ ಪತ್ರವನ್ನು ಸಲ್ಲಿಸಿ ಮಾತನಾಡಿದರು . ಈ ವೇಳೆ ವಿವಿಧ ಜಿಲ್ಲೆಗಳಿಂದ ಆಗಮಿಸಿದ ಬೆಳೆ ಸಮಿಕ್ಷೆದಾರರು ಹಾಗೂ ಎಲ್ಲಾ ತಾಲೂಕಾ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಬೆಳಗಾವಿಯಲ್ಲಿ ಶಿವಾನಂದ ನೀಲಣ್ಣನವರಗೆ ಅಧಿಕಾರಿಗಳ ಶಾಕ್ : ಶಿವಂ ಅಸೋಸಿಯೇಟ್ ಕಚೇರಿಗಳ ಮೇಲೆ ದಾಳಿ
24 ಗಂಟೆಯಲ್ಲಿ ಕಾರು ಕಳ್ಳತನ ಪ್ರಕರಣ ಭೇಧಿಸಿದ ಪೊಲೀಸರು : ಖದೀಮರ ಪತ್ತೆಗಾಗಿ ಶೋಧ
ಗಡಿ ಮರಾಠಿ ಶಾಲೆಗಳಲ್ಲಿ ಕನ್ನಡ ಕಹಳೆ: 7 ಕನ್ನಡ ಪ್ರಾಥಮಿಕ, 2 ಪ್ರೌಡ ಶಾಲೆಗಳಿಗೆ ರಾಜ್ಯ ಸರಕಾರ ಗ್ರಿನ್ ಸಿಗ್ನಲ್
ಅಂತರಾಜ್ಯ ಖದೀಮನ ಬಂಧನ : 45.56 ಲಕ್ಷ ಮೌಲ್ಯದ ಚಿನ್ನಾಭರಣ, ದ್ವಿಚಕ್ರ ವಾಹನ ವಶಕ್ಕೆ
ಹಿಡಕಲ್ ಹಿನ್ನೀರಿನಲ್ಲಿ ಮುಳುಗಿದ್ದ ಹುನ್ನೂರು ವಿಠಲ ಮಂದಿರ ಜಲದಿಗ್ಭಂಧನದಿಂದ ಮುಕ್ತಿ
2027ರ ಮೇ. 4ರಿಂದ ಸಂಕೇಶ್ವರ ಮಹಾಲಕ್ಷ್ಮೀ ಜಾತ್ರಾ ಮಹೋತ್ಸವ ಪ್ರಾರಂಭ 