ಬಿಪಿಎಲ್ ಬಳಗದ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ

ಬಿಪಿಎಲ್ ಬಳಗದ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ  Oath-taking ceremony of BPL office bearers

ತಾಳಿಕೋಟೆ 23: ಬಣಜಿಗ ಹಾಗೂ ಪಂಚಮಸಾಲಿ ಲಿಂಗಾಯತ ನೌಕರರ(ಬಿಪಿಎಲ್) ಬಳಗ ತಾಳಿಕೋಟೆ ತಾಲ್ಲೂಕು ಘಟಕದ ನೂತನ ಪದಾಧಿಕಾರಿಗಳ ಪದಗ್ರಹಣ ಹಾಗೂ ಸನ್ಮಾನ ಕಾರ್ಯಕ್ರಮವು ಸ್ಥಳೀಯ ಬಾಲಭಾರತಿ ಸಭಾಭವನದಲ್ಲಿ ಶನಿವಾರ ನಡೆಯಿತು.

ಸಾನ್ನಿಧ್ಯವನ್ನು ವಹಿಸಿದ್ದ ಖ್ಯಾತ ಪ್ರವಚನಕಾರ ಸ್ಥಳೀಯ ಕೈಲಾಸಪೇಟೆಯ ಬಸವ್ರಭುದೇವರು ಮಾತನಾಡಿ, ಇಚೇಗೆ ವೀರಶೈವ, ಲಿಂಗಾಯತ, ಲಿಂಗವಂತ ಎಂದು ಪ್ರತ್ಯೇಕಿಸುವುದು ನಡೆದಿದೆ. ಬಣಜಿಗ, ಪಂಚಮಸಾಲಿ ಸಮುದಾಯದವರು ಎಲ್ಲ ಲಿಂಗಾಯತ ಸಮುದಾಯಗಳನ್ನು ಜೊತೆಗೂಡಿಸಿಕೊಂಡು ಹೋಗಬೇಕು ಎಂದು ಸಲಹೆ ನೀಡಿದರು.ಅಧ್ಯಕ್ಷತೆಯನ್ನು ವಹಿಸಿದ್ದ ಬಿಪಿಎಲ್ ನೌಕರರ ಸಂಘದ ನಿಕಟಪೂರ್ವ ಅಧ್ಯಕ್ಷ ಆರ್‌.ಎಲ್‌.ಕೊಪ್ಪದ, ನಿಕಟಪೂರ್ವ ಉಪಾಧ್ಯಕ್ಷೆ ಉಮಾ ಸಾಲಂಕಿ, ನೂತನ ಅಧ್ಯಕ್ಷ ಡಾ.ಶ್ರೀಶೈಲ ಹುಕ್ಕೇರಿ, ಹಿರಿಯ ವೈದ್ಯ ಡಾ.ವಿ.ಎಸ್‌.ಕಾರ್ಚಿ ಮಾತನಾಡಿದರು. ಅತಿಥಿಗಳಾಗಿ ಪುರಸಭೆಯ ಸದಸ್ಯ ಮಲ್ಲಿಕಾರ್ಜುನ ಪಟ್ಟಣಶೆಟ್ಟಿ ಇದ್ದರು. ಅನಂತ ಅಂಗಡಿ ನಿರ್ವಹಿಸಿದರು. ರಮೇಶ ಹಿಪ್ಪರಗಿ ಸ್ವಾಗತಿಸಿದರು.  

ಸಂಗಮೇಶ ಪಾಲಕಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಎಸ್‌.ವಿ.ಜಾಮಗೊಂಡಿ ವಂದಿಸಿದರು.ಸನ್ಮಾನ: ಎನ್‌.ಜಿ.ಓ ನಿರ್ದೇಶಕ ಶಂಕರಗೌಡ ಬಿರಾದಾರ, ಪ್ರಾಥಮಿಕ ಶಾಲಾ ಶಿಕ್ಷಕರ ಪತ್ತಿನ ಸಂಘದ ಅಧ್ಯಕ್ಷ ಎಸ್‌.ಎಂ.ಬೈಚಬಾಳ, ಸಹಾಯಕ ಅಭಿಯಂತರ ಸೋಮನಗೌಡ ಜಾಲವಾದಿ, ಪಿಡಿಓ ಪ್ರಭು ಚನ್ನೂರ, ಮುಖ್ಯಶಿಕ್ಷಕ ಎಸ್‌.ಎಸ್‌.ಗಡೇದ, ಸೇವಾ ನಿವೃತ್ತರಾದ ಎಸ್‌.ಕೆ.ಪ್ರೌಢಶಾಲೆಯ ಸಹಶಿಕ್ಷಕ ಎಸ್‌.ವಿ.ಬೆನಕಟ್ಟಿ, ಎಸ್‌.ಕೆ.ಬಾಲಕಿಯರ ಪ್ರೌಢಶಾಲೆಯ ಮುಖ್ಯಶಿಕ್ಷಕರಾಗಿದ್ದ ವೈ.ಎಸ್‌.ನಾದ ಹಾಗೂ ತುಂಬಗಿ ಸರ್ಕಾರಿ ಶಾಲೆಯ ಮುಖ್ಯಶಿಕ್ಷಕಿಯಾಗಿದ್ದ ಉಮಾ ಸಾಲಂಕಿ, ಅವರುಗಳನ್ನು ಗೌರವಿಸಲಾಯಿತು.ಬಣಜಿಗ ಹಾಗೂ ಪಂಚಮಸಾಲಿ ಲಿಂಗಾಯತ ನೌಕರರ(ಬಿಪಿಎಲ್) ಬಳಗ ತಾಳಿಕೋಟೆ ತಾಲ್ಲೂಕು ಘಟಕದ ನೂತನ ಪದಾಧಿಕಾರಿಗಳು: ಡಾ.ಶ್ರೀಶೈಲ ಹುಕ್ಕೇರಿ- ಅಧ್ಯಕ್ಷ, ಪಿಎಸೈ ಎಸ್‌.ಎಂ.ಪಡಶೆಟ್ಟಿ- ಗೌರವಾಧ್ಯಕ್ಷ, ಈರಣ್ಣ ಚಿಮ್ಮಲಗಿ, ಶಿವಾನಂದ ಅಂಗಡಿ, ಕೆ.ಎಂ.ಬಿರಾದಾರ, ಮಲ್ಲಿಕಾರ್ಜುನ ಕೊಳ್ಳಿ,ಪ್ರಕಾಶ ಪಾಟೀಲ ಸಾಸಾಬಾಳ,ವೀರೇಶ ಮೇಟಿ,ಪ್ರಭು ಚನ್ನೂರ(ಉಪಾಧ್ಯಕ್ಷರು)ಎಸ್‌.ಎಂ.ಪಾಲ್ಕಿ-ಪ್ರಧಾನ ಕಾರ್ಯದರ್ಶಿ, ರಾಮನಗೌಡ ಪಾಟೀಲ-ಖಜಾಂಚಿ, ಎಸ್‌.ಎಂ.ಬೈಚಬಾಳ, ಅನಂತ ಅಂಗಡಿ, ಎಸ್‌.ಬಿ.ಬಿರಾದಾರ, ಎಸ್‌.ಎಂ.ಬ್ಯಾಕೋಡ,(ಸಂಘಟನಾ ಕಾರ್ಯದರ್ಶಿಗಳು), ವಿಶ್ವನಾಥ ಅವಟಿ ಹಾಗೂ ಎಂ.ಎಸ್‌.ಗಾಣಿಗೇರ-ಸಹಕಾರ್ಯದರ್ಶಿಗಳು ಎಸ್‌.ಎಂ.ಪಾಟೀಲ, ಎಂ.ಬಿ.ಅರಮನಿ, ಉದಯಕುಮಾರ ಬಳಗಾನೂರ, ಎಂ.ಸಿ.ಬೋರಾಮಣಿ(ಸಾಂಸ್ಕೃತಿಕ ಕಾರ್ಯದರ್ಶಿಗಳು) ಮಹಿಳಾ ವಿಭಾಗ-ಅಶ್ವಿನಿ ಜೋಗೂರ, ಜಿ.ಬಿ.ಬಿರಾದಾರ ಹಾಗೂ ಭಾರತಿ ಅಂಗಡಿ(ಉಪಾಧ್ಯಕ್ಷರು) ನೀಲಮ್ಮ ಮೈಲೇಶ್ವರ, ವಿಜಯಲಕ್ಷ್ಮೀ ಬಿದರಕುಂದಿ ಹಾಗೂ ಎಸ್‌.ಎಸ್‌.ಕೋರಿ-ಸಂಘಟನಾ ಕಾರ್ಯದರ್ಶಿಗಳು,ಎಲ್‌.ಎಂ.ಸಗರನಾಳ ಮಮತಾ ಬೀಳಗಿ(ಸಹಕಾರ್ಯದರ್ಶಿಗಳು )ಲಕ್ಷ್ಮೀ ಇವಣಿ ಹಾಗೂ ಜ್ಯೋತಿ ಸಾಲಂಕಿ ಸಾಂಸ್ಕೃತಿಕ ಕಾರ್ಯದರ್ಶಿಗಳು