ವಿಶ್ವಯೋಗ ದಿನಾಚರಣೆಯ ಯೋಗಾಸನ ಕಾರ್ಯಕ್ರಮ
Yoga program for International Yoga Day
ಲೋಕದರ್ಶನ ವರದಿ
ಮಾಂಜರಿ 21 “ : ವಿದ್ಯಾರ್ಥಿಗಳು ಅಳವಡಿಸಿಕೊಂಡರೆ ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಸಾಧ್ಯವಾಗುತ್ತದೆ ಎಂದು ರಾಯಬಾಗ್ ಪಟ್ಟಣದ ಪತಂಜಲಿ ಯೋಗ ಕೇಂದ್ರದ ಮುಖ್ಯಸ್ಥರಾದ ಸಂಜಯ್ ಕುಸ್ತಿಗಾರ್ ಹೇಳಿದರು. ಅವರು ಇಂದು ಚಿಕ್ಕೋಡಿ ತಾಲೂಕಿನ ಅಂಕಲಿ ಗ್ರಾಮದ ಕೆ ಎಲ್ ಇ ಶಿಕ್ಷಣ ಸಂಸ್ಥೆಯ ಎಲ್ಲಾ ಅಂಗ ಸಂಸ್ಥೆಯ ಆಶ್ರಯದಲ್ಲಿ ಶಾರದಾದೇವಿ ಕೋರೆ ಕ್ರೀಡಾಂಗಣದ ಆವರಣದಲ್ಲಿ ರವಿವಾರ ಆಯೋಜಿಸಲಾಗಿದ್ದ ವಿಶ್ವಯೋಗ ದಿನಾಚರಣೆಯ ಯೋಗಾಸನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಯೋಗ ಸನ್ಯಾಸಿಗಳು, ಸಾಧುಗಳಿಗೆ ಮಾತ್ರ ಸೀಮಿತ. ಸಾಧಾರಣ ಜನರಿಗೂ ಯೋಗಕ್ಕೂ ಸಂಬಂಧ ಇಲ್ಲ ಎಂಬ ತಪ್ಪು ಕಲ್ಪನೆ ಜನರಲ್ಲಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ ಆರೋಗ್ಯಕರ ಜೀವನ ನಡೆಸಲು ಪ್ರತಿಯೊಬ್ಬರಿಗೂ ಯೋಗ ಅತ್ಯಗತ್ಯ. ಎಂದು ಅವರು ಹೇಳಿದರು
ಈ ವೇಳೆ ಸ್ಥಳೀಯ ಸಲಹಾ ಸಮಿತಿಯ ಅಧ್ಯಕ್ಷರಾದ ಸುರೇಶ್ ಪಾಟೀಲ್ ಮಾತನಾಡಿ ರಾಯಬಾಗ್ ಪಟ್ಟಣದ ಪತಂಜಲಿ ಯೋಗ ಕೇಂದ್ರದ ಮುಖ್ಯಸ್ಥರಾದ ಸಂಜಯ್ ಕುಸ್ತಿಗಾರ್ ಇವರು ಗ್ರಾಮೀಣ ಪ್ರದೇಶದಲ್ಲಿ ಯೋಗಾಸನದ ಮೂಲಕ ಅವರು ತಮ್ಮ ಅದ್ಭುತ ಕಾರ್ಯ ಮಾಡುತ್ತಿರುವುದು ಶ್ಲಾಘನೀಯ. ಅವರಿಂದ ವಿಶ್ವಯೋಗ ದಿನದ ಮಾಹಿತಿ ಪಡೆದುಕೊಂಡ ಯೋಗ ಶಿಕ್ಷಣವನ್ನು ನಿತ್ಯ ಜೀವನದಲ್ಲಿ ನಿರಂತರವಾಗಿ ಅಳವಡಿಸಿಕೊಳ್ಳಬೇಕು ಎಂದು ಕರೆ ನೀಡಿದರು. ಸಂದರ್ಭದಲ್ಲಿ ಸಂಜಯ್ ಕುಸ್ತಿಗಾರ್ ಅವರು ಯೋಗಾಸನದ ಕೆಲವು ಬಂಗಿಗಳನ್ನು ವಿದ್ಯಾರ್ಥಿಗಳಿಗೆ ತಿಳಿಸಿಕೊಟ್ಟರು.
ಇ ಕಾರ್ಯಕ್ರಮದಲ್ಲಿ ಕೆ.ಎಲ್.ಇ ಸಂಸ್ಥೆಯ ಅಜೀವ ಸದಸ್ಯರಾದ ಶ್ರೀ ಬಿ.ಎಸ್.ಅಂಬಿ, ,ಅಂಗ ಸಂಸ್ಥೆಗಳ ಮುಖ್ಯಸ್ಥರಾದ ಜೆ.ಎಸ್.ತಮಗೊಂಡ ಪ್ರೊ.ಪಿ.ಎನ್.ತಳವಾರ,ಪಾರ್ಥ ಸಾರಥಿನಂದಾ ಮಾಹುವಾ ನೀಯೋಗಿ ಸಂತೋಷ ಹಿರೇಮಠ,ಎಮ್.ಎಸ್.ಕಾನಡೆ,ಹಾಗೂ ಎಲ್ಲ ಸಿಬ್ಬಂದಿವರ್ಗವಿದ್ಯಾರ್ಥಿಗಳು ಉಪಸ್ಥಿತರಿದ್ದು ಕಾರ್ಯಕ್ರಮ ಯಶಸ್ವಿಗೊಳಿಸಿದರು ಕಾರ್ಯಕ್ರಮದ ನಿರೂಪಣೆ ಶ್ರೀಯುತ ಬಸವರಾಜ ಜಕಾತಿ ಅವರು ನೆರವೇರಿಸಿದರು ಸ್ವಾಗತ ಭಾಷಣ ಶ್ರೀಮತಿ ಶಾರದಾದೇವಿ ಕೋರೆ ಪ್ರೌಢಶಾಲೆಯ ಉಪ ಪ್ರಾಂಶುಪಾಲರಾದ ಶ್ರೀಮತಿ ಜೆ ಎಸ್.ತಮಗೊಂಡ ನೆರೆವೇರಿಸಿದರು.
ಸುಪ್ರೀಂ ಕೋರ್ಟ್ ನ್ಯಾಯವಾದಿ ಕಾತರಕಿ ಜೊತೆ ಕನ್ನಡ ಸಂಘಟನೆಗಳ ಸಂವಾದ ನಾಳೆ
ನಿಡಸೋಸಿ ರಸ್ತೆ ಅಗಲಿಕರಣಕ್ಕೆ ವೇಗ: ಭರದಿಂದ ಸಾಗಿದ ಮುಸ್ಲಿಂ ಸ್ಮಶಾನ ಆವರಣ ತೆರವು ಕಾರ್ಯಾಚರಣೆ; ಡಿಸಿ ಕಾರ್ಯಕ್ಕೆ ಮೆಚ್ವುಗೆ
ವಿಮೆ ಹಣಕ್ಕಾಗಿ ಪತಿ ಹತ್ಯೆ: ಪತ್ನಿ, ಎಫ್ಎಸ್ಎಲ್ ಅಧಿಕಾರಿ ಸೇರಿ 9 ಜನ ಬಂಧನ : ಎಸ್ ಪಿ ರಾಮರಾಜನ್
ಹಿಂಡಲಗಾ ಜೈಲಿನಿಂದ ಶಿವಾನಂದ ನಿಲಣ್ಣವರ ಬಿಡುಗಡೆ : ಎಲ್ಲದಕ್ಕು ಓಂ ನಮಃ ಶಿವಾಯ ಎಂದು ಪ್ರತಿಕ್ರಿಯೆ
ಕಲುಸಿತ ಆಹಾರ ಸೇವನೆ: 30 ವಿಧ್ಯಾರ್ಥಿಗಳು ಆಸ್ಪತ್ರೆಗೆ ಅಲೇದಾಟ, ಅಧಿಕಾರಿಗಳ ವಿರುದ್ಧ ತಡರಾತ್ರಿ ಪ್ರತಿಭಟನೆ
ಬಹುಕೋಟಿ ವಂಚನೆ ಪ್ರಕರಣ : ಶಿವಾನಂದ ನೀಲಣ್ಣವರಗೆ ಮಧ್ಯಂತರ ಜಾಮೀನು ಮಂಜೂರು 