ಅನಿಧರ್ಿಷ್ಠಾವಧಿವರೆಗೆ ಮುಂದೂಡಿದ ಓಬಳಾಪೂರ ಗ್ರಾಮ ಸಭೆ

ಲೋಕದರ್ಶನ ವರದಿ

ರಾಮದುರ್ಗ , 7: ಜೂನ್ ತಿಂಗಳಲ್ಲಿ ನಡೆದ ಪ್ರಥಮ ಹಂತದ ಗ್ರಾಮ ಸಭೆಯಲ್ಲಿ ತೆಗೆದುಕೊಂಡ ನಿರ್ಣಯಗಳನ್ನು ಓದಿ ಹೇಳಿದ ನಂತರ ಮುಂದೆ ಸಭೆ ನಡೆಸಬೇಕೆಂದು ಗ್ರಾಮಸ್ಥರು ಪಟ್ಟು ಹಿಡಿದ ಕಾರಣ ಗ್ರಾಮ ಸಭೆಯನ್ನೇ ಮುಂದೂಡಿದ ಘಟನೆ ತಾಲೂಕಿನ ಓಬಳಾಪೂರದಲ್ಲಿ ಇತ್ತಿಚೆಗೆ 

ನಡೆದಿದೆ.

ಓಬಳಾಪೂರ ಗ್ರಾ.ಪಂ ಅಧ್ಯಕ್ಷ ಶಂಕರ ಲಮಾಣಿ ಅಧ್ಯಕ್ಷತೆಯಲ್ಲಿ 2018-19ನೇ ಸಾಲಿನ ದ್ವಿತೀಯ ಹಂತದ ಗ್ರಾಮಸಭೆ ಆಯೋಜಿಸಲಾಗಿತ್ತು. ಗ್ರಾಮಸಭೆ ಆರಂಭವಾಗುತ್ತಿದ್ದಂತೆ ಪಿಡಿಓ ಶೇಖರ ಹಿರೇಸೋಮನ್ನವರ ಸ್ವಾಗತಿಸಿ ಸಭೆಗೆ ಆಗಮಿಸಿದ್ದ ವಿವಿಧ ಇಲಾಖೆಯ ಅಧಿಕಾರಿಗಳಿಗೆ ತಮ್ಮ ಇಲಾಖೆಯ ಯೋಜನೆಗಳನ್ನು ಗ್ರಾಮಸ್ಥರಿಗೆ ತಿಳಿಸುವಂತೆ ತಿಳಿಸಿದರು.

ಗ್ರಾಮಸ್ಥರ ಒತ್ತಾಯದ ಮೇರೆಗೆ ಹಿಂದಿನ ಸಭೆಯ ನಿರ್ಣಯಗಳನ್ನು ಓದುತ್ತಿದ್ದಂತೆ ಪ್ರಗತಿ ಮಾತ್ರ ಶೂನ್ಯವಾಗಿದೆ ಎಂಬ ಹಿನ್ನಲೆಯಲ್ಲಿ ಗ್ರಾ.ಪಂ ಅಧ್ಯಕ್ಷ ಶಂಕರ ಲಮಾಣಿ ಅಧಿಕಾರಿಗಳ ತಪ್ಪಿನಿಂದಾಗಿ ಹಿಂದಿನ ಸಭೆಯ ನಿರ್ಣಯಗಳನ್ನು ಬರೆದು ನಂತರ ಮತ್ತೊಂದು ದಿನಾಂಕ ನಿಗಧಿ ಮಾಡಿ ಸಭೆ ನಡೆಸಲಾಗುವುದು ಈ ಗ್ರಾಮಸಭೆಯನ್ನು ಅನಿಧರ್ಿಷ್ಠಾವಧಿಗೆ ಮೂಂದೂಡಲಾಗಿದೆ ಎಂದು ಘೋಷಣೆ ಮಾಡಿದರು.

ಸಭೆಯಲ್ಲಿ ಕೃಷಿ ಮತ್ತು ಅಬಕಾರಿ ಇಲಾಖೆಗಳ ಸಹಾಯಕರನ್ನು ಹೊರತುಪಡಿಸಿ ಯಾವದೇ ಅಧಿಕಾರಿಗಳು ಸಭೆಗೆ ಆಗಮಿಸಿರಲಿಲ್ಲ. ಸಭೆಯಲ್ಲಿ ಪಂಚಾಯ್ತಿ ಉಪಾಧ್ಯಕ್ಷೆ ಶಾಂತವ್ವ ಪಾಟೀಲ ಮತ್ತು ಸದಸ್ಯರು ಇದ್ದರು.