ಡಬಲ್ ಬ್ಯಾರಲ್ ಗನ್ ನಿಂದ ಸ್ವಂತ ಶೂಟ್ ಮಾಡಿಕೊಂಡ ನರ್ಸಿಂಗ್ ಹೋಂನ ಮೆಡಿಶನ್ ತಜ್ಞ
Nursing home medic shoots himself with double-barrel gun
ಕಾರವಾರ : ನಗರದ ಪಿಕಳೆ ನರ್ಸಿಂಗ್ ಹೋಂನ ಔಷಧಿ ನೀಡುವ ತಜ್ಞ ರಾಜೀವ್ ಪಿಕಳೆ ಡಬಲ್ ಬ್ಯಾರಲ್ ಗನ್ ನಿಂದ ಸ್ವತಃ ಶೂಟ್ ಮಾಡಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ಕಾರವಾರದ ಪಿಕಳೆ ನರ್ಸಿಂಗ್ ಹೋಂ ನ ವೈದ್ಯ ನಿತಿನ್ ಪಿಕಳೆ ಅವರ ಸಹೋದರ ರಾಜು ಪಿಕಳೆ ಆತ್ಮಹತ್ಯೆಗೆ ಶರಣಾಗಿದ್ದಾರೆ. ಅಂಕೋಲಾ ತಾಲೂಕಿನ ಅವರ್ಸಾ ಸಮೀಪ ಹಟ್ಟಿಕೇರಿ ಮನೆಯ ಅಂಗಳದಲ್ಲಿ ಡಬ್ಬಲ್ ಬ್ಯಾರಲ್ ಗನ್ ಸಹಿತ ಅವರು ಬಿದ್ದಿದ್ದರು . ಕಳೆದ ಹದಿನೈದು ದಿನದ ಹಿಂದೆ ಪಿಕಳೆ ನರ್ಸಿಂಗ್ ಹೋಂನಲ್ಲಿ ಅವಧಿ ಮೀರಿದ ಮಾತ್ರೆ ನೀಡಿದ ಆರೋಪ ಅವರ ಮೇಲಿತ್ತು. ಅವಧಿ ಮೀರಿದ ಔಷಧಿ ನೀಡುವ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.
ಈ ಘಟನೆಯ ಬಳಿಕ ಮೆಡಿಷನ್ ವಿತರಕ ರಾಜು ಪಿಕಳೆ ಮಾನಸಿಕ ಖಿನ್ನತೆಗೆ ಒಳಗಾಗಿದ್ದರು ಎನ್ನಲಾಗಿದೆ. ರಾಜು ಪಿಕಳೆ ಅವಧಿ ಮುಗಿದ ಟ್ಯಾಬ್ಲೆಟ್ ನೀಡಿದ್ದನ್ನು ಅಪರಿಚಿತ ರೋಗಿಯ ಸಂಬಂಧಿಯಿಂದ ಹಿಡ್ಡನ್ ವಿಡಿಯೋ ಮಾಡಿ ವೈರಲ್ ಮಾಡಲಾಗಿತ್ತು. ಅವಧಿ ಮೀರಿದ ಔಷಧಿ ವಿತರಣೆ ಕಣ್ತಪ್ಪಿನಿಂದ ಆದದ್ದು ಎಂದು ರಾಜು ಪಿಕಳೆ ಕ್ಷಮೆ ಕೇಳಿದ್ದರು. ಜ.23 ಶುಕ್ರವಾರ ಬೆಳಿಗ್ಗೆ ಮನೆಯ ಅಂಗಳದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದು, ಅಂಕೋಲಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 