ಲೋಕದರ್ಶನ ವರದಿ
ಬೆಳಗಾವಿ 05: ನರ್ಸಿಂಗ್ ಪವಿತ್ರ ವೃತ್ತಿಯಾಗಿದ್ದು, ಬಡರೋಗಿಗಳ ಸೇವೆ ಮೂಲಕ ಜೀವನದಲ್ಲಿ ಧನ್ಯತೆ ಪಡೆಯುವುದು ಹಾಗೂ ವಿಧ್ಯಾಥರ್ಿಗಳು ಯಾವಾಗಲೂ ಸಕಾರಾತ್ಮಕ ಧೋರಣೆ ಹೊಂದುವುದು ಅವಶ್ಯಕ, ರೋಗಿಗಳನ್ನು ತಮ್ಮ ಪಾಲಕರಂತೆ ಕಾಣಿದಾಗ ಈ ವೃತ್ತಿಯಿಂದ ಯಶಸ್ಸು ಗಳಿಸಲು ಸಾಧ್ಯ ಎಂದು ನಗರ ಕುಟುಂಬ ಕಲ್ಯಾಣ ಕೇಂದ್ರದ ವೈದ್ಯಾಧಿಕಾರಿ ಡಾ. ಜಯಾನಂದ ಧನವಂತ ಹೇಳಿದರು.
ನಗರದ ಭಾರತ ಕಾಲನಿಯ ಮಹಿಳಾ ಕಲ್ಯಾಣ ಸಂಸ್ಥೆ ಸಭಾಗೃಹದಲ್ಲಿ ಎಫ್. ವಿ.ಟ.ಆರ್. ಎಸ್ ಬೆಂಗಳೂರು ಹಾಗೂ ಮಹಿಳಾ ಕಲ್ಯಾಣ ಸಂಸ್ಥೆ ಆಶ್ರಯದಲ್ಲಿ ನಿರುದ್ಯೋಗಿ ಯುವತಿಯರಿಗಾಗಿ ಆಯೋಜಿಸಿದ್ದ ಹೋಂ ನಸರ್ಿಂಗ್ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಸಾಯಿ ಪ್ರಮೋಷನ್ ಹೋಂ ನಸರ್ಿಂಗ್ ಸವರ್ಿಸ್ ತರಬೇತಿ ಸಂಸ್ಥೆಯ ಮುಖ್ಯಸ್ಥರಾದ ವಿದ್ಯಾವತಿ ಇಂಗಳಿ ಮಾತನಾಡಿ ಶಿಕ್ಷಣವನ್ನು ಅರ್ಧಕ್ಕೆ ನಿಲ್ಲಿಸಿದ ಮಹಿಳೆರಿಗೆ ಇಂತಹ ವೃತ್ತಿ ತರಬೇತಿ ನೀಡಿ ಸ್ವಾವಲಂಬಿಗಳನ್ನಾಗಿ ಮಾಡಲು ಪ್ರಯತ್ನಿಸಲಾಗುತ್ತಿದೆ. ಈ ಕ್ಷೇತ್ರ ಉದ್ಯೋಗಕ್ಕಾಗಿ ಬಹಳ ಬೇಡಿಕೆಯಿದ್ದು ಇದರ ಸದುಪಯೋಗ ಪಡಿಸಿಕೊಳ್ಳಬೇಕೆಂದರು.
ಮಾಜಿ ನಗರ ಸೇವಕಿ ಸರಳಾ ಹೇರೆಕರ ಮಾತನಾಡಿ ಜೀವನದಲ್ಲಿ ಯಶಸ್ಸು ಸಾಧಿಸಲು ಶಕ್ತಿ ಮತ್ತು ಉತ್ಸಾಹವಿರಬೇಕು. ಗುರಿ ಮುಟ್ಟಲು ದೃಢ ನಿಷ್ಠೆಯೊಂದಿಗೆ ಮುನ್ನಡೆಯಬೇಕು ಹಿರಿಯ ನಾಗರಿಕರ ಸೇವೆ ಮಹತ್ವದಾಗಿದೆ ಎಂದು ಹೇಳಿದರು.
ಮಹಿಳಾ ಕಲ್ಯಾಣ ಸಂಸ್ಥೆಯ ಗೌರವ ಕಾರ್ಯದಶರ್ಿ ವೈಜಯಂತಿ ಚೌಗಲಾ ಅಧ್ಯಕ್ಷತೆ ವಹಿಸಿ ಮಾತನಾಡಿ ಮಹಿಳೆಯರು ವಿವಿಧ ವೃತ್ತಿಗಳಲ್ಲಿ ನಿರತರಾಗಿ ಕೈ ಜೋಡಿಸಿದಾಗ ಮಾತ್ರ ಕುಟುಂಬದ ಆಥಿಕ ಪ್ರಗತಿ ಸಾಧ್ಯ. ಮಹಿಳೆಯರು ಸ್ವಯಂ ಉದ್ಯೋಗಗಳಲ್ಲಿ ತೊಡಗುವ ಅನಿವಾರ್ಯತೆ ಇದೆ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಕಣಬರಗಿ ನಗರ ಕುಟುಂಬ ಕಲ್ಯಾಣ ಕೇಂದ್ರದ ವೈದ್ಯಾಧಿಕಾರಿ ಡಾ. ಅನುಪಮಾ ತುಕ್ಕಾರ, ಮಹಿಳಾ ಕಲ್ಯಾಣ ಸಂಸ್ಥೆಯ ಸಂಯೋಜಕ ಎಂ. ಎಸ್. ಚೌಗಲಾ, ಜಿಲ್ಲಾ ಗ್ರಾಹಕ ಮಾಹಿತಿ ಕೇಂದ್ರದ ಸಂಯೋಜಕ ಎಂ ಎಂ ಗಡಗಲಿ ಉಪಸ್ಥಿತರಿದ್ದರು. ಶಶಿಕಲಾ ಕಟ್ಟಿಮನಿ ನಿರೂಪಿಸಿದರೂ ಯೋಜನಾ ನಿದರ್ೇಶಕಿ ಸುರೇಖಾ ಪಾಟೀಲ ಸ್ವಾಗತಿಸಿ ವಂದಿಸಿದರು.
****