ಲೋಕದರ್ಶನ ವರದಿ
ಶೇಡಬಾಳ: ಶೇಡಬಾಳ ಪಟ್ಟಣದ ಸನ್ಮತಿ ವಿದ್ಯಾಲಯದ ವಿದ್ಯಾಥರ್ಿ ಪವನ ಪಾಂಡುರಂಗ ಗುರವ ಇತನು 14 ವರ್ಷ ವಯಸ್ಸಿನ ಕುಸ್ತಿ ಪಂದ್ಯಾವಳಿಯಲ್ಲಿ ರಾಜ್ಯ ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದುಕೊಂಡು ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ರಾಷ್ಟ್ರ ಮಟ್ಟದ ಪಂದ್ಯಾವಳಿಯು ಬರುವ ದಿ. 17/11/2019 ರಂದು ದೆಹಲಿಯಲ್ಲಿ ಜರುಗಲಿದ್ದು, ಪವನ ಪಾಂಡುರಂಗ ಗುರವ ಇತನು ಈ ಪಂದ್ಯಾವಳಿಯಲ್ಲಿ ಭಾಗವಹಿಸಲಿದ್ದಾನೆ.
ವಿದ್ಯಾಥರ್ಿಯ ಸಾಧನೆಗೆ ಸನ್ಮತಿ ಶಿಕ್ಷಣ ಸಹಕಾರಿ ಸಮಿತಿಯ ಅಧ್ಯಕ್ಷರು, ಉಪಾಧ್ಯಕ್ಷರು, ಆಡಳಿತ ಮಂಡಳಿಯ ಸದಸ್ಯರು, ಮುಖ್ಯಾಧ್ಯಾಪಕರಾದ ಎಂ.ಎನ್.ಕಾಳೇನಟ್ಟಿ, ದೈಹಿಕ ಶಿಕ್ಷಕರಾದ ಎಂ.ಕೆ.ಕಾಂಬಳೆ, ಎಸ್.ಬಿ.ಇರಾಜ, ಎಸ್.ಆರ್.ಪೂಜಾರ, ಮುತಾಲಿಕ, ಸಪ್ತಸಾಗರೆ, ಪಾಟೀಲ, ನಾಯಿಕ, ಚೇತನ ನಾಂದ್ರೆ, ಹೆಬ್ಬಾಳೆ, ಚೌಗಲೆ, ಭಂಡಾರೆ, ಮುತವಲ್ಲಿ, ಅಸೂದೆ ಮೊದಲಾದ ಶಿಕ್ಷಕರು, ವಿದ್ಯಾಥರ್ಿಗಳು, ಗ್ರಾಮಸ್ಥರು ಪವನ ಪಾಂಡುರಂಗ ಗುರವ ಇತನಿಗೆ ಪುಷ್ಪಗುಚ್ಛ ನೀಡಿ ಅಭಿನಂದಿಸಿ ಶುಭ ಹಾರೈಸಿದರು.