ಪರಮಾಣು ಭದ್ರತೆ : ಮೈಕ್ ಪೊಂಪಿಯೊ ರಫೇಲ್ ಗ್ರಾಸ್ಸಿ ಚರ್ಚೆ

ವಾಷಿಂಗ್ಟನ್, ಫೆ 06 ,ಅಮೆರಿಕ ವಿದೇಶಾಂಗ ಕಾರ್ಯದರ್ಶಿ ಮೈಕ್ ಪೊಂಪಿಯೊ ಮಂಗಳವಾರ ಇರಾನ್ ಕುರಿತು ಅಂತರರಾಷ್ಟ್ರೀಯ ಪರಮಾಣು ಶಕ್ತಿ ಸಂಸ್ಥೆ (ಐಎಇಎ)ಯ ರಫೇಲ್ ಗ್ರಾಸ್ಸಿಯನ್ನು ಭೇಟಿಯಾದರು ಎಂದು ಯು.ಎಸ್. ರಾಜ್ಯ ಇಲಾಖೆ ತಿಳಿಸಿದೆ. ಇರಾನ್‌ನಲ್ಲಿ ಐಎಇಎ ಮೇಲ್ವಿಚಾರಣೆ ಕಾರ್ಯ, ಪರಮಾಣು ಭದ್ರತೆ ಮತ್ತು ಯುಎಸ್ ಭದ್ರತಾ ಹಿತಾಸಕ್ತಿಗಳಿಗೆ ಐಎಇಎ ಪ್ರಾಮುಖ್ಯತೆ ಕುರಿತು ಇಬ್ಬರೂ ಚರ್ಚಿಸಿದ್ದಾರೆ ಎಂದು ವಿದೇಶಾಂಗ ಇಲಾಖೆಯ ವಕ್ತಾರ ಮೋರ್ಗನ್ ಒರ್ಟಾಗಸ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಪರಮಾಣು ಸಮಸ್ಯೆಗಳ ಬಗ್ಗೆ ನಿಕಟ ಸಂಪರ್ಕದಲ್ಲಿರಲು ಪೊಂಪಿಯೊ ಮತ್ತು ಗ್ರೊಸಿ ವಾಗ್ದಾನ ಮಾಡಿದ್ದಾರೆ ಎಂದು ಹೇಳಿಕೆಯಲ್ಲಿ ಸೇರಿಸಲಾಗಿದೆ. ಇರಾನ್‌ನ ಪರಮಾಣು ಶಕ್ತಿ ಸಂಸ್ಥೆ (ಎಇಒಐ) ಮತ್ತು ಅದರ ಮುಖ್ಯಸ್ಥರ ವಿರುದ್ಧ ವಾಷಿಂಗ್ಟನ್‌ನ ನಿರ್ಬಂಧಗಳ ನಂತರ ಈ ಸಭೆ ನಡೆಸಲಾಗಿದೆ. 2018 ರಲ್ಲಿ ಇರಾನ್ ಪರಮಾಣು ಒಪ್ಪಂದದಿಂದ ಏಕಪಕ್ಷೀಯವಾಗಿ ನಿರ್ಗಮಿಸಿದಾಗಿನಿಂದ, ವಾಷಿಂಗ್ಟನ್ ಟೆಹ್ರಾನ್ ಮೇಲೆ ಸರಣಿ ನಿರ್ಬಂಧಗಳ ಮೂಲಕ ಒತ್ತಡವನ್ನು ಹೆಚ್ಚಿಸುತ್ತಿದೆ. ಇರಾನ್ ಕಠಿಣ ನಿಲುವನ್ನು ಉಳಿಸಿಕೊಂಡಿದೆ ಮತ್ತು ಪ್ರತಿಕ್ರಿಯೆಯಾಗಿ ತನ್ನ ಪರಮಾಣು ಬದ್ಧತೆಗಳನ್ನು ಕಡಿಮೆ ಮಾಡಿದೆ. ಜನವರಿ ಆರಂಭದಲ್ಲಿ, ಇರಾನ್ 2015 ರ ಇರಾನ್ ಪರಮಾಣು ಒಪ್ಪಂದಕ್ಕೆ ತನ್ನ ಬದ್ಧತೆಯನ್ನು ಕೊನೆಗೊಳಿಸುವ ಐದನೇ ಮತ್ತು ಅಂತಿಮ ಹಂತವನ್ನು ಘೋಷಿಸಿತು, ಇದು ಕೇಂದ್ರಾಪಗಾಮಿಗಳ ಸಂಖ್ಯೆಯ ಮೇಲಿನ ನಿರ್ಬಂಧವಾಗಿದೆ. ಆದರೆ ಐಎಇಎ ಜೊತೆಗಿನ ಸಹಕಾರವನ್ನು ಮುಂದುವರಿಸುವುದಾಗಿ ಇರಾನ್ ಹೇಳಿದೆ.