ಮಕರ ಸಂಕ್ರಾಂತಿಯಂದು ಸಪ್ತಸಾಗರ ಕಾಶಿಲಿಂಗೇಶ್ವರ ಜಾತ್ರೆ
ಕಾಗವಾಡ 11: ಅಥಣಿ ತಾಲೂಕಿನ ಸಪ್ತಸಾಗರ ಗ್ರಾಮ ದೇವರಾದ ಶ್ರೀ ಕಾಶಿಲಿಂಗ ದೇವರ ಸಂಕ್ರಮಣದ ಜಾತ್ರಾ ಮಹೋತ್ಸವು ಶನಿವಾರ ದಿ.11 ರಿಂದ 15 ರ ವರೆಗೆ ನಡೆಯಲಿದ್ದು, ವಿವಿಧ ಕಾರ್ಯಕ್ರಮಗಳಿಂದ ಅದ್ದೂರಿಯಾಗಿ ನಡೆಯಲಿವೆ. ಶನಿವಾರ ದಿ.11 ರಂದು ಸಂಜೆ 5.15 ಕ್ಕೆ ಕಳಸಾರೋಹಣ ಮಾಡುವ ಮೂಲಕ ಸಂಕ್ರಮಣದ ಜಾತ್ರಾ ಮಹೋತ್ಸವವು ಪ್ರಾರಂಭವಾಗುವದು. ರವಿವಾರ ದಿ.12 ರಂದು ಕೃಷ್ಣಾ ಕಿತ್ತೂರದ ಗುರುದೇವಾಶ್ರಮದ ಶ್ರೀ ಬಸವೇಶ್ವರ ಮಹಾಸ್ವಾಮಿಗಳು ಇವರಿಂದ ಆಧ್ಯಾತ್ಮಿಕ ಪ್ರವಚನ ಜರುಗುವದು. ಸೋಮವಾರ ದಿ.13 ರಂದು ಭೋಗಿಯ ಕಾರ್ಯಕ್ರಮ ಶ್ರೀ ಕಾಶಿಲಿಂಗದೇವರ ರುದ್ರಾಭಿಷೇಕ ಜರುಗಲಿದೆ. ಮಂಗಳವಾರ ದಿ.14 ರಂದು ಮುಂ. 10 ಗಂಟೆಗೆ ಕಾಶಿಲಿಂಗ ದೇವಸ್ಥಾನದಿಂದ ಕೃಷ್ಣಾ ನದಿಯವರೆಗೆ ಪಲ್ಲಕ್ಕಿ ಉತ್ಸವ ಮತ್ತು ಜಲಾಭಿಷೇಕ, ಮಧ್ಯಾಹ್ನ 12 ರಿಂದ 3 ಗಂಟೆಯ ವರೆಗೆ ವಿವಿಧ ಸಂಗೀತ ಮತ್ತು ವಿವಿಧ ಮಜಲಾಶಯ ಕಾರ್ಯಕ್ರಮಗಳು, ಸಂಜೆ 05.45 ರಿಂದ ರಾತ್ರಿ 10 ರವರೆಗೆ ಕಾಶಿಲಿಂಗ ದೇವರ ಪಲ್ಲಕ್ಕಿ ಉತ್ಸವ, ಹಾಗೂ ರಥೋತ್ಸವ ಕಾರ್ಯಕ್ರಮ ಜರುಗುವದು. ಅದೇ ರೀತಿಯಾಗಿ ದಿ. 13 ಮತ್ತು 14 ರಂದು ಮುಂಜಾನೆ 11.35 ಕ್ಕೆ ಪುರುಷರ ಮುಕ್ತ ಕಬ್ಬಡ್ಡಿ ಪಂದ್ಯಾವಳಿಗಳು ನಡೆಯುತ್ತವೆ. ದಿ.15 ರಂದು ಮಧ್ಯಾಹ್ನ 2. 30 ಕ್ಕೆ ಜಂಗೀ ನಿಕಾಲಿ ಕುಸ್ತಿಗಳು ಜರುಗುವವು. ಸೋಮವಾರ ದಿ. 13 ರಂದು ಕಾಶಿಲಿಂಗೇಶ್ವರ ನಾಟ್ಯ ಸಂಘ ಸಪ್ತಸಾಗರ ಇವರು ಅರ್ಿಸುವ 9ನೇ ಕಲಾಕುಸುಮ "ರೈತನ ಹೆಸರು ನಾಡಿನ ಉಸಿರು" ಎಂಬ ನಾಟಕ ಜರುಗುವದು ಎಂದು ಜಾತ್ರಾ ಕಮೀಟಿಯವರು ತಿಳಿಸಿರುತ್ತಾರೆ.