ವಚನ ದರ್ಶನ ಕಾರ್ಯಕ್ರಮದ ಅಂಗವಾಗಿ ವಿವಿಧ ಗ್ರಾಮಗಳಲ್ಲಿ ಜನಜಾಗೃತಿ ಪಾದಯಾತ್ರೆ
ಗದಗ 11: ತಾಲ್ಲೂಕಿನ ಶ್ರೀಕ್ಷೇತ್ರ ಹರ್ತಿ ಗ್ರಾಮದಲ್ಲಿ ವಚನ ದರ್ಶನ ಆಧ್ಯಾತ್ಮಿಕ ಪ್ರವಚನದ ಅಂಗವಾಗಿ ಹಿರೇವಡ್ಡಟ್ಟಿಹಿಮಣಕವಾಡ ದೇವಮಂದಿರ ಮಹಾಮಠದ ಪೂಜ್ಯಶ್ರೀ ಅಭಿನವ ಮೃತ್ಯುಂಜಯ ಮಹಾಸ್ವಾಮಿಗಳು ಹರ್ತಿ ಗ್ರಾಮ ಸೇರಿದಂತೆ ಕಣವಿ, ಹೊಸೂರು, ಸೊರಟೂರ, ನಾಗಾವಿ, ಯಲಿಶಿರುಂದ, ಕುರ್ತಕೋಟಿ, ಚಿಂಚಲಿ ಗ್ರಾಮಗಳಲ್ಲಿ ಜನಜಾಗೃತಿ ಪಾದಯಾತ್ರೆ ನಡೆಸಿದರು.
ಈ ಪಾದಯಾತ್ರೆಯೂದ್ದಕ್ಕು ಬೆಳಗಿನ ಜಾವದಲ್ಲಿ ರಸ್ತೆಯ ತುಂಬಾ ರಂಗೋಲಿ, ಮನೆಗಳಿಗೆ ತಳಿರು-ತೋರಣ ಮತ್ತು ದೀಪಗಳಿಂದ ಶೃಂಗರಿಸಿ ಡೊಳ್ಳು, ನಂದಿಕೋಲು, ಭಜನೆ ಮೂಲಕ ಶ್ರೀಗಳನ್ನು ಸಾವಿರಾರು ಭಕ್ತರು ಭಕ್ತಿ-ಭಾವದಿಂದ ಬರಮಾಡಿಕೊಂಡು ಪಾದಯಾತ್ರೆಯನ್ನು ಯಶಸ್ವಿಗೊಳಿಸಿದರು.
ಇದೇ ಸಂದರ್ಭದಲ್ಲಿ ಪೂಜ್ಯ ಶ್ರೀಗಳು ಆಶೀರ್ವಚನ ನೀಡಿ ತೋಳ್ಬಲವನ್ನು ಶಕ್ತಿಗಾಗಿ ಪ್ರದರ್ಶನ ಮಾಡದೆ, ಭಕ್ತಿಗಾಗಿ ಪ್ರದರ್ಶನ ಮಾಡಿ ಜನರ ಮನಸ್ಸು ಗೆಲ್ಲಬೇಕು. ದುಶ್ಚಟಗಳನ್ನು ತೈಜಿಸಿ ಮಕ್ಕಳಿಗೆ ಉತ್ತಮ ಶಿಕ್ಷಣ, ಸಂಸ್ಕಾರ ನೀಡಿ ಸುಂದರ ಸಮಾಜ ಕಟ್ಟಬೇಕು. ತಂದೆ-ತಾಯಿ, ಗುರು-ಹಿರಿಯರನ್ನು ಗೌರವದಿಂದ ಕಾಣಬೇಕೆಂದು ನುಡಿದರು.
ಪಾದಯಾತ್ರೆಯ ಸಂಘಟನೆಯ ಉಸ್ತುವಾರಿ ಶಿವಲಿಂಗ ಶಾಸ್ತ್ರಿಗಳು ಸಿದ್ದಾಪೂರ ಶಾಂತಿ ಮಂತ್ರದೊಂದಿಗೆ ಕಾರ್ಯಕ್ರಮ ಯಶಸ್ವಿಗೊಳಿಸಿದರು.