ಕೊಪ್ಪಳ 14: ಇಲ್ಲಿನ ಶ್ರೀ ಗವಿಸಿದ್ಧೇಶ್ವರ ಜಾತ್ರಾ ಮಹೋತ್ಸವದಲ್ಲಿ ಸ್ಥಾಪಿಸಲಾಗಿರುವ ಮಹಿಳೆಯರು ಮತ್ತು ಮಕ್ಕಳ ಹಕ್ಕುಗಳ ಜಾಗೃತಿ ಮಳಿಗೆಗೆ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ, ಹಿರಿಯ ಸಿವಿಲ್ ನ್ಯಾಯಾಧೀಶ ಟಿ.ಶ್ರೀನಿವಾಸ ಅವರು ಇಂದು ಭೇಟಿ ನೀಡಿ ಪ್ರದರ್ಶನ ಮತ್ತು ಮಳಿಗೆಯ ಕಾರ್ಯ ಪರಿಶೀಲಿಸಿದರು.
ಜಾತ್ರೆಗೆ ನಗರ ಮತ್ತು ಗ್ರಾಮೀಣ ಪ್ರದೇಶಗಳ ಲಕ್ಷಾಂತರ ಯಾತ್ರಾಥರ್ಿಗಳು ಪ್ರತಿನಿತ್ಯ ಬರುತ್ತಾರೆ, ಈ ಸಂದರ್ಭ ಬಳಸಿಕೊಂಡು ಸಾರ್ವಜನಿಕರಿಗೆ ತಿಳುವಳಿಕೆ ಮೂಡಿಸಲು ಪ್ರಯತ್ನ ಮಾಡುತ್ತಿರುವುದು ಉತ್ತಮ ಬೆಳವಣಿಗೆಯಾಗಿದೆ. ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ವಕೀಲರುಗಳನ್ನೂ ಸಹ ಸದರಿ ಕೇಂದ್ರಕ್ಕೆ ನಿಯೋಜನೆ ಮಾಡಿ, ಮಕ್ಕಳ ಪರವಾಗಿರುವ ಕಾನೂನುಗಳ ಬಗ್ಗೆ ಮತ್ತು ಸಾರ್ವಜನಿಕರಿಗೆ ಲಭ್ಯವಿರುವ ವಿವಿಧ ಯೋಜನೆಗಳ ಬಗ್ಗೆ ಪ್ರಚಾರ ಮಾಡುವಂತೆ ಪ್ರಾಧಿಕಾರದ ಸದಸ್ಯ ವಕೀಲರುಗಳಿಗೆ ಸೂಚನೆ ನೀಡಿದರು. ಮಳಿಗೆಯತ್ತ ಜನರನ್ನು ಆಕಷರ್ಿಸಲು ಇನ್ನಷ್ಟು ವಿಭಿನ್ನ ಪ್ರಾತ್ಯಕ್ಷಿಕೆ, ಆಡಿಯೋ,ವಿಡಿಯೋ ಫಲಕಗಳನ್ನು ಅಳವಡಿಸಲು ಟಿ.ಶ್ರೀನಿವಾಸ ಸಲಹೆ ನೀಡಿದರು.
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ವಕೀಲರು, ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ವಿಶೇಷ ಮಕ್ಕಳ ಪೊಲೀಸ್ ಘಟಕದ ಅಧಿಕಾರಿಗಳು, ಸಿಬ್ಬಂದಿ ಉಪಸ್ಥಿತರಿದ್ದರು.