400 ಮೀಟರ ಟ್ರ್ಯಾಕ್ ನಿಮರ್ಿಸಲು ಸೂಚನೆ

ಲೋಕದರ್ಶನ ವರದಿ

ಸಿದ್ದಾಪುರ 3: ತಾಲೂಕು ಪಂಚಾಯತ ಸಭಾಭವನದಲ್ಲಿ ಶಾಸಕ ವಿಶ್ವೇಶ್ವರ ಹೆಗಡೆ ಕಾಗೇರಿ ನೇತ್ರತ್ವದಲ್ಲಿ ತಾಲೂಕು ಕ್ರೀಡಾಂಗ ಅಭೀವೃದ್ದಿ ಕುರಿತು ಸಭೆ ನಡೆಯಿತು.

 ಇನ್ನೂ ಹದಿನೈದು ದಿನಗಳೊಳಗೆ ಕಂದಾಯ ಇಲಾಖೆ ಕ್ರೀಡಾಂಗಣ ಜಾಗವನ್ನು  ಸವರ್ೆ ಮಾಡಿ ಗಡಿ ಗುರುತಿಸುವಂತೆ ತಿಳಿಸಿದ ಅವರು 400 ಮೀಟರ ಟ್ರ್ಯಾಕ್ ನಿಮರ್ಿಸಲು ನೀಲ ನಕ್ಷೆ ರೂಪಿಸುವಂತೆ ಪಿಡ್ಲುಡಿ ಇಲಾಖೆ ಮತ್ತು ಯುವಜನ ಮತ್ತು ಕ್ರೀಡಾ ಇಲಾಖೆಗೆ ಸೂಚಿಸಿದರು. ತಾಲೂಕು ಯುವಜನ ಸೇವಾ ಕ್ರೀಡಾಧಿಕಾರಿ ಮಾಧವ ನಾಯ್ಕ ಸಹಭಾಗಿತ್ವದಲ್ಲಿ ಮುಂದಿನ ಕ್ರಮಕೈಗೊಳ್ಳಲು ಸೂಚಿಸಿದರು. 

   7 ಎಕರೆ 24 ಗುಂಟೆ ಜಾಗಮಂಜೂರಿದ್ದು, ಈಗ 5 ಎಕರೆ 20 ಮಾತ್ರ ಇದೆ.ಒಟ್ಟು  ಜಾಗದ ಗುರುತು ಮಾಡಿ ಈಗಾಗಲೇ ಮಂಜೂರಿ ಇರುವ 28 ಲಕ್ಷ ರೂಪಾಯಿಗಳಲ್ಲಿ ಸಾಧ್ಯವಾಗುವಂತೆ  ಮೈದಾನ ನಿಮರ್ಿಸಲು ಸೂಚಿಸಿದರು. ಇಲ್ಲಿಯವರೆಗೆ 16 ಲಕ್ಷ ರೂಪಾಯಿ ಖಚರ್ು ಮಾಡಲಾಗಿದ್ದು,2011-12ರಲ್ಲಿ 83 ಲಕ್ಷ ರೂಪಾಯಿಗೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಕ್ರೀಡಾಂಗಣ ಅಭಿವೃದ್ಧಿಗೆ ಇನ್ನೂಹೆಚ್ಚಿನ ಹಣದ ಅಗತ್ಯವಿರುವುದರಿಂದ 2 ಕೋಟಿ ರೂಪಾಯಿಗೆ ಪ್ರಸ್ತಾವನೆ ಸಲ್ಲಿಸಲು ಇಂದಿನ ಸಭೆಯಲ್ಲಿ ನಿರ್ಣಯಿಸಲಾಗಿದೆ.

  ಸಭೆಯಲ್ಲಿ ತಾ.ಪಂ ಅಧ್ಯಕ್ಷ ಸುಧೀರ ಗೌಡರ, ಪ.ಪಂ ಅಧ್ಯಕ್ಷೆ ಸುಮನಾ ಕಾಮತ್, ಜಿ.ಪಂ ಸದಸ್ಯ ನಾಗರಾಜ ನಾಯ್ಕ.ತಾ.ಪಂ ಸ್ಥಾಯಿ ಸಮಿತಿ ಅಧ್ಯಕ್ಷ ಮಹಾಬಲೇಶ್ವರ ಹೆಗಡೆ, ತಾ.ಪಂ.ಕಾರ್ಯ ನಿರ್ವಹಣಾಧಿಕಾರಿ ದಿನೇಶ ಈಡಿ..ಪ.ಪಂಸದಸ್ಯ ಕೆ.ಜಿ.ನಾಯ್ಕ ಹಣಜಿಬೈಲ್, ಯುವ ಒಕ್ಕೂಟದ ಅಧ್ಯಕ್ಷ ಮತ್ತು ಜಯಕನರ್ಾಟಕ ಸಂಘಟನೆಯ ಗೌರವ ಅಧ್ಯಕ್ಷ ಅಣ್ಣಪ್ಪ ಶಿರಳಗಿ, ಕ.ರ.ವೇ ಪ್ರಧಾನ ಕಾರ್ಯದಶರ್ಿ ದಯಾನಂದ ಕಡಕೇರಿ.ಅರಣ್ಯ ,ಭೂ ಸೇನೆ,ಯುವಸಬಲಿಕರಣ ಕ್ರೀಡಾ ಅಧಿಕಾರಿಗಳು ಉಪಸ್ಥಿತರಿದ್ದರು.