ಗದಗ 16: ಬ್ಯಾಂಕುಗಳು ವಿವಿಧ ಯೋಜನೆಗಳಿಗಾಗಿ ಫಲಾನುಭವಿಗಳಿಗೆ ಸಾಲ ನೀಡಿಕೆ ವಿಳಂಬ ಮಾಡುತ್ತಿರುವ ದೂರುಗಳಿದ್ದು ಈ ಕುರಿತು ಗಮನ ಹರಿಸಿ ಸಕಾಲಕ್ಕೆ ಸಾಲ ಒದಗಿಸಬೇಕು ಎಂದು ಜಿ.ಪಂ. ಪ್ರಭಾರ ಅಧ್ಯಕ್ಷರಾದ ಶ್ರೀಮತಿ ರೂಪಾ ಅಂಗಡಿ ಸೂಚಿಸಿದರು.
ಗದಗ ಜಿ.ಪಂ. ಸಭಾಂಗಣದಲ್ಲಿಂದು ಜರುಗಿದ ಕನರ್ಾಟಕ ಅಭಿವೃದ್ಧಿ ಯೋಜನೆಗಳ(ಕೆಡಿಪಿ) ಮಾಸಿಕ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಜಿ.ಪಂ. ಮುಖ್ಯ ಕಾರ್ಯನಿವರ್ಾಹಕ ಅಧಿಕಾರಿ ಮಂಜುನಾಥ ಚವ್ಹಾಣ ಅವರು ಫಲಾನುಭವಿಗಳಿಗೆ ಬ್ಯಾಂಕುಗಳಿಂದ ಸಾಲ, ಸಹಾಯಧನ ಶೀಘ್ರವೆ ಲಭ್ಯವಾಗುವಂತೆ ಸಂಬಂಧಿತ ಇಲಾಖೆಗಳು, ನಿಗಮಗಳ ಮುಖ್ಯಸ್ಥರು ಬ್ಯಾಂಕ ಅಧಿಕಾರಿಗಳೊಂದಿಗೆ ನಿರಂತರ ಸಂಪರ್ಕ ಹೊಂದಿ ಫಲಾನುಭವಿಗಳು ಅಜರ್ಿ ಸಲ್ಲಿಸಿ ಬ್ಯಾಂಕು, ಕಚೇರಿಗಳಿಗೆ ಪದೇ ಪದೇ ಸುತ್ತಾಡುವದಕ್ಕೆ ಅವಕಾಶ ನೀಡದಂತೆ ಕಾರ್ಯ ನಿರ್ವಹಿಸಲು ಸೂಚಿಸಿದರು.
ಜಿಲ್ಲೆಯಲ್ಲಿ ಚೆಕಡ್ಯಾಂಗಳ ನಿಮರ್ಾಣಕ್ಕೆ ಸಂಬಂಧಿಸಿದಂತೆ ಈಗಾಗಲೇ ನಿಮರ್ಾಣ ಹಂತದಲ್ಲಿರುವ ಕಾಮಗಾರಿ ಹೊರತು ಪಡಿಸಿ ಇನ್ನೂ ಮುಂದೆ ಸೆಟಲ್ಯಾಟ್ ಮೂಲಕ ಕನರ್ಾಟಕ ರಾಜ್ಯ ರಿಮೋಟಸೆನ್ಸಿಂಗ ಸಂಸ್ಥೆಯು ಗುರುತಿಸಿದ ಸ್ಥಳಗಳನ್ನು ಆಯ್ಕೆ ಮಾಡಿ ಕಾಮಗಾರಿಗಳ ನಿಮರ್ಾಣಕ್ಕೆ ಪ್ರಸ್ತಾವನೆ ಸಲ್ಲಿಸಬೇಕು ಎಂದು ಮಂಜುನಾಥ ಚವ್ಹಾಣ ತಿಳಿಸಿದರು. ಚೆಕ್ ಡ್ಯಾಂ, ನೀರು, ಮಣ್ಣು, ಫಲವತ್ತತೆ ಸಂವರ್ಧನೆ ಅಂಶಗಳನ್ನು ಹೊಂದಿದ್ದು ಪ್ರತಿಯೊಂದು ಚೆಕ್ ಡ್ಯಾಂ ಸುತ್ತಲಿನ ರೈತರಿಗೆ, ಗ್ರಾಮಸ್ಥರಿಗೆ ಅನುಕೂಲ ಕಲ್ಪಿಸುವುದಕ್ಕೆ ನೆರವಾಗಬೇಕು. ಉದ್ಯೋಗ ಖಾತ್ರಿ ಯೋಜನೆ ಸಂಯೋಜನೆ ಮೂಲಕ ಕೈಕೊಳ್ಳುವ ಯಾವುದೇ ಕಾಮಗಾರಿಗಳು ಸಕರ್ಾರ ರೂಪಿಸಿರುವ ಮಾರ್ಗದಶರ್ಿ ಸೂತ್ರಗಳಿಗೆ ಅನುಗುಣವಾಗಿರುವಂತೆ ಪ್ರತಿ ಪಟ್ಟಣ ಗ್ರಾಮಗಳಲ್ಲಿ ಇಲಾಖಾ ಕಟ್ಟಡಗಳ ಪ್ರಸ್ತಾವನೆ ಸಲ್ಲಿಸುವಾಗ ಕನಿಷ್ಠ ಒಂದು ಕಟ್ಟಡವಿರದ ಸ್ಥಳಗಳ ಮೊದಲು ಪ್ರಸ್ತಾವನೆ ಸಲ್ಲಿಸಬೇಕು. ಅರಣ್ಯ ಇಲಾಖೆಯು ವಿವಿಧ ಯೋಜನೆಗಳಡಿ ನೆಟ್ಟ ಸಸಿಗಳ ಸಂರಕ್ಷಣೆಗಾಗಿ ನೀರುಣಿಸುವ ವೇಳಾಪಟ್ಟಿಯನ್ನು ತಯಾರಿಸಬೇಕು. ಗದಗ ಜಿಲ್ಲೆಯಲ್ಲಿ ನಿಗದಿತ ಮಳೆ ಆಗದೆ ಬರ ಪರಿಸ್ಥಿತಿ ಅನುಸರಿಸಿ ವಿಶೇಷ ಅನುದಾನಕ್ಕೆ ಪ್ರಸ್ತಾವಣೆ ಸಲ್ಲಿಸಿ ಒಟ್ಟಾರೆ ಗಿಡಮರಗಳ ಸಂರಕ್ಷಣೆಗೆ ಕ್ರಮ ಜರುಗಿಸಬೇಕು.
ನರೇಗಾ ಯೋಜನೆಯಡಿ ಭೂ,ಜಲ ಅಭಿವೃದ್ಧಿ, ಮೀನುಗಾರಿಕೆ, ರೇಷ್ಮೆ, ಹೈನುಗಾರಿಕೆ ಇಲಾಖೆಗಳು ಪದೇ ಪದೇ ಬರಗಾಲದಿಂದ ಕೃಷಿ ಆದಾಯ ಕುಂಠಿತವಾಗಿರುವ ರೈತರಿಗೆ ಆಥರ್ಿಕ ಸಾಮಥ್ರ್ಯ ಹೆಚ್ಚಿಸಲು ರೈತರಿಗೆ ಸೂಕ್ತ ಮಾಹಿತಿ ನೀಡಿ ಉಪಕಸುಬುಗಳನ್ನು ಕೈಕೊಳ್ಳಲು ಪ್ರೇರೆಪಿಸಬೇಕು ಎಂದು ನುಡಿದ ಸಿ.ಇ.ಓ. ಗಂಗಾ ಕಲ್ಯಾಣ ಯೋಜನೆಯಡಿ ಅಂಬೇಡ್ಕರ, ದೇವರಾಜ ಅರಸ, ಅಲ್ಪಸಂಖ್ಯಾತರ ನಿಗಮಗಳಿಂದ ಕಳೆದ ಸಾಲಿನ ಗಂಗಾ ಕಲ್ಯಾಣ ಯೋಜನೆಯಡಿ ಕೊಳವೆಭಾವಿ ಒದಗಿಸುವದಕ್ಕಾಗಿ ವಿಳಂಬವಾಗಿರುವ ಕುರಿತು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಪ್ರಸಕ್ತ ಸಾಲಿನಲ್ಲಿ ವಿವಿಧ ಯೋಜನೆಗಳಡಿ ಶಾಸಕರ, ಜಿಲ್ಲಾಧಿಕಾರಿಗಳು ಹಾಗೂ ಜಿ.ಪಂ. ಮುಖ್ಯ ಕಾರ್ಯನಿವರ್ಾಹಕ ಅಧಿಕಾರಿಗಳ ಅಧ್ಯಕ್ಷತೆಯಲ್ಲಿ ಫಲಾನುಭವಿಗಳ ಪಟ್ಟಿಯನ್ನು ಅಕ್ಟೋಬರ ಅಂತ್ಯದೊಳಗಾಗಿ ಸಿದ್ಧಪಡಿಸಿಕೊಳ್ಳಬೇಕು. ಸಾರ್ವಜನಿಕ ಶಿಕ್ಷಣ ಇಲಾಖೆಯು ಗುಣಮಟ್ಟದ ಶಿಕ್ಷಣ ಕುರಿತಂತೆ ಹಾಗೂ ವಿಧ್ಯಾಥರ್ಿ ವೇತನಕ್ಕೆ ಎಲ್ಲ ಅರ್ಹ ವಿಧ್ಯಾಥರ್ಿಗಳು ಅಜರ್ಿ ಸಲ್ಲಿಸಿ ಸೌಲಭ್ಯ ಪಡೆಯಲು ನಿಗದಿತ ಅವಧಿಯಲ್ಲಿ ಕ್ರಮ ಜರುಗಿಸಬೇಕು. ಗ್ರಾಮೀಣ ಕುಡಿಯುವ ನೀರು ಪೂರೈಕೆಗೆ ಸಂಬಂಧಸಿದಂತೆ ಶುದ್ಧ ಕುಡಿಯುವ ನೀರಿನ ಘಟಕಗಳಿಗೆ ನೀರು ಪೂರೈಕೆಗೆ ಸದಾ ನಿಗಾವಹಿಸಿ ಕಾರ್ಯನಿರ್ವಹಿಸಿ ಸ್ಥಳ ಭೇಟಿ ನೀಡಿ ವರದಿ ನೀಡಲು ಮಂಜುನಾಥ ಚವ್ಹಾಣ ಸೂಚನೆ ನೀಡಿದರು.
ಜಿ.ಪಂ. ಉಪಕಾರ್ಯದಶರ್ಿ ಎಸ್.ಸಿ.ಮಹೇಶ, ಯೋಜನಾಧಿಕಾರಿ ಬಿ.ಆರ್.ಪಾಟೀಲ, ವಿವಿಧ ಇಲಾಖೆಗೆ, ನಿಗಮಗಳ ಜಿಲ್ಲಾ ಮುಖ್ಯಸ್ಥರು ಸಭೆಯಲ್ಲಿ ಭಾಗವಹಿಸಿದ್ದರು.