ಲೋಕದರ್ಶನ ವರದಿ
ಬೈಲಹೊಂಗಲ, 26- ಪಟ್ಟಣದ ಶಾಸಕ ಮಹಾಂತೇಶ ಕೌಜಲಗಿ ನಿವಾಸಕ್ಕೆ ತಾಲ್ಲೂಕಿನ ವಕ್ಕುಂದ ಗ್ರಾಮದ ರೈತರು ತಮಗಾಗುತ್ತಿರುವ ವಿದ್ಯುತ್ ತೊಂದರೆ ನಿವಾರಿಸಿ ಎಂದು ಮನವಿ ಮಾಡಲು ಬಂದರೆ ಶಾಸಕರು ಅವರಿಗೆ ಸರಿಯಾಗಿ ಸ್ಪಂದಿಸದೆ ಸಭೆಯಿಂದ ಎದ್ದು ಹೊರ ನಡೆದರು.
ರೈತರು ನಾವು ಯಾರಿಗೂ ಲಂಚ ಕೊಟ್ಟಿಲ್ಲ. ಕೊಡುವುದಿಲ್ಲ. ಕೆಪಿಟಿಸಿಎಲ್ ಅಧಿಕಾರಿಗಳಿಗೆ ಲಂಚ ಕೊಟ್ಟರೆ ಮಾತ್ರ ಸಮಪರ್ಕವಾಗಿ ವಿದ್ಯುತ್ ಕೊಡಲಾಗುತ್ತಿದೆ. ಇದು ಹೀಗೆ ಮುಂದುವರೆದರೆ ರೈತರಿಗೆ ತೀವ್ರ ತೊಂದರೆ ಆಗಲಿದೆ. ಶಾಸಕರು ನೀವು ರೈತರನ್ನು ಸುಕ್ಕಾಸುಮ್ನೇ ಸತಾಯಿಸುತ್ತಿರುವ ಕೆಪಿಟಿಸಿಎಲ್ ಅಧಿಕಾರಿಗಳಿಗೆ ಸೂಚಿಸಿ ಸರಿಯಾಗಿ ವಿದ್ಯುತ್ ಕೊಡಿಸಿಕೊಡಿ
ಎಂದರು.
ರೈತರು ಸುದ್ದಿಗಾರರೊಂದಿಗೆ ಮಾತನಾಡಿ, 'ಗ್ರಾಮದ ರೈತರ ಮೇಲೆ ಕೆಪಿಟಿಸಿಎಲ್ ಅಧಿಕಾರಿಗಳು ನಡೆಸುತ್ತಿರುವ ದೌರ್ಜನ್ಯ ವಿರುದ್ಧ ಪ್ರತಿಭಟಿಸಿ ಶಾಸಕರನ್ನು, ಅಧಿಕಾರಿ ವಲಯವನ್ನು ಗ್ರಾಮಕ್ಕೆ ಕರೆಯಿಸಬೇಕಿತ್ತು. ನಾವು ಆ ರೀತಿ ಮಾಡಲಿಲ್ಲ. ಸ್ಥಳೀಯ ಶಾಸಕರು ನಮ್ಮ ಮನವಿಗೆ ಸ್ಪಂದಿಸಿ ವಿದ್ಯುತ್ ಕೊಡಿಸಿಕೊಡುತ್ತಾರೆಂದು ನಂಬಿದ್ದೇವು. ಆದರೆ ಮನೆಗೆ ಬಂದ ರೈತರಿಗೆ ಶಾಸಕರು ನಮಗೆ ಅಪಮಾನ ಮಾಡಿದರು. ಚುನಾವಣೆ ಸಂದರ್ಭದಲ್ಲಿ ಸಭ್ಯರಂತೆ ವತರ್ಿಸಿ ಮತ ಕೇಳಿ ಶಾಸಕರಾಗಿದ್ದಾರೆ. ಈಗ ರೈತರನ್ನು ಮನೆಗೆ ಸೇರಿಸಿಕೊಳ್ಳುತ್ತಿಲ್ಲ. ಇದು ಅಧಿಕಾರದ ದುರನಡೆತೆಯಾಗಿದೆ. ಶಾಸಕರು, ಅಧಿಕಾರಿಗಳು ಒಂದಾಗಿ ರೈತರ ಮೇಲೆ ದೌರ್ಜನ್ಯ ನಡೆಸುತ್ತಿದ್ದಾರೆಂದು ಕಟುವಾಗಿ
ಟೀಕಿಸಿದರು.
ಅಧಿಕಾರಿಗಳೊಂದಿಗೆ ಚಚರ್ೆ: ರೈತರನ್ನು ಹೊರ ನಡೆಯಿರಿ ಎಂದ ಶಾಸಕರ ನಡೆಗೆ ಆಕ್ಷೇಪ ವ್ಯಕ್ತಪಡಿಸಿದ ರೈತರು ಕೂಡಲೇ ಅಧಿಕಾರಿಗಳನ್ನು ಕರೆದು ವಿದ್ಯುತ್ ಸಮಸ್ಯೆ ನಿವಾರಿಸಬೇಕು ಎಂದು ಪಟ್ಟು ಹಿಡಿದರು. ರೈತರ ಒತ್ತಡಕ್ಕೆ ಮನಿದ ಶಾಸಕರು ತಮ್ಮ ಮನೆಗೆ ಕೆಪಿಟಿಸಿಎಲ್ ಎಇಇ, ಅಧಿಕಾರಿಗಳನ್ನು ಕರೆದು ಕೆಲಕಾಲ ಚಚರ್ೆ ನಡೆಸಿದರು. ಗ್ರಾಮದ ರೈತರಿಗೆ, ನೇಕಾರರಿಗೆ, ಬೈಲಹೊಂಗಲ ಪಟ್ಟಣ ಜನರ ಕುಡಿಯುವ ನೀರು ಸರಬರಾಜಿಗೆ ಯಾವುದೇ ರೀತಿ ತೊಂದರೆ ಆಗದ ರೀತಿಯಲ್ಲಿ ವಿದ್ಯುತ್ ವ್ಯವಸ್ಥೆ ಕಲ್ಪಿಸುವಂತೆ ಸೂಚಿಸಿದರು. ರಾಮನಗೌಡ ಪಾಟೀಲ, ಕಾಶಪ್ಪ ಭದ್ರಶೆಟ್ಟಿ, ಅಶೋಕ ಭದ್ರಶೆಟ್ಟಿ, ಎಂ.ಎಫ್.ತಡಸಲ, ಯು,ಬಿ.ಅಂಗಡಿ, ಆನಂದ ಪಂತಿ, ಎ.ಎಸ್.ಹೊರಳಿ, ಮಂಜುನಾಥ ಉರಬಿನ್, ಮಲ್ಲಿಕಾಜರ್ುನ ಅಂಬರಗಟ್ಟಿ, ವಿನಾಯಕ ಸುತಗಟ್ಟಿ, ಚನ್ನಪ್ಪ ಬಡಿಗೇರ, ಮುಂತಾದವರು ಇದ್ದರು.