ಮುಂಬೈ, ಫೆ 10 : ಬಾಲಿವುಡ್ ಧಡಕ್ ಬೆಡಗಿ ಜಾಹ್ನವಿ ಕಪೂರ್ ತಮ್ಮ ನಟನೆಗಿಂತ ಹೆಚ್ಚು ತಮ್ಮ ಜಿಮ್ ವಸ್ತ್ರದ ಕುರಿತು ಭಾರಿ ಚರ್ಚೆಯಲ್ಲಿರುತ್ತಾರೆ.
ನಿರ್ದೇಶಕ ಬೋನಿ ಕಪೂರ್ ಹಾಗೂ ನಟಿ ಶ್ರೀದೇವಿ ಮಗಳಾದ ಜಾಹ್ನವಿ, ಧಡಕ್ ಚಿತ್ರದ ಮೂಲಕ ಮೊದಲ ಬಾರಿಗೆ ಬಿಟೌನ್ ಪ್ರವೇಶಿಸಿದ್ದರು.
ಜಾಹ್ನವಿ ತಮ್ಮ ನಟನೆಗಿಂತ ಅವರ ಜಿಮ್ ಲುಕ್ ಮೂಲಕವೇ ಹೆಚ್ಚು ಸುದ್ದಿಯಲ್ಲಿರುತ್ತಾರೆ.
ಈ ಕುರಿತು ಪ್ರತಿಕ್ರಿಯಿಸಿರುವ ಜಾಹ್ನವಿ, ಜನ ನನ್ನ ನಟನೆಗಿಂತ ಹೆಚ್ಚು ಜಿಮ್ ಲುಕ್ ಬಗ್ಗೆ ಚರ್ಚಿಸುವುದು ತಮ್ಮ ಗಮನಕ್ಕಿದೆ. ಮೊದಲ ಚಿತ್ರ ಧಡಕ್ ಬಿಡುಗಡೆಗೊಂಡಾಗ ಜನ ನನ್ನನ್ನು ಭೇಟಿಯಾಗಿ ಚಿತ್ರದ ನಟನೆ ಕುರಿತು ಮಾತನಾಡುತ್ತಿದ್ದರು. ಆದರೀಗ ಭೇಟಿಯಾದಾಗ ನನ್ನ ಜಿಮ್ ಲುಕ್ ಚೆನ್ನಾಗಿದೆ ಎಂದು ಮಾತನಾಡುತ್ತಾರೆ ಎಂದು ತಿಳಿಸಿದರು.
ಜನ ನನ್ನ ಜಿಮ್ ಲುಕ್ ನನ್ನು ಅನುಕರಿಸುತ್ತಾರೆ. ನನ್ನ ಧರಿಸುವ ಶಾರ್ಟ್ಸ್ ಅವರಿಗೆ ತುಂಬಾ ಇಷ್ಟವಾಗುತ್ತದೆ ಎಂಬುದನ್ನು ಕೇಳಿ ನಾನು ಧಡಕ್ ಚಿತ್ರದಿಂದ ಗುರುತಿಸಿಕೊಳ್ಳುತ್ತಿರುವೇನೋ ಇಲ್ಲ ಜಿಮ್ ಲುಕ್ ಗಾಗಿ ಗುರುತಿಸಲ್ಪಡುತ್ತಿದ್ದೇನೋ ಎಂದು ವಿಚಿತ್ರ ಎನಿಸುತ್ತದೆ ಎಂದರು.
ಆದರೆ, ಈ ವಿಷಯದಲ್ಲಿ ನಾನು ಅವರನ್ನು ಗುರಿಯಾಗಿಸುವುದಿಲ್ಲ. ಏಕೆಂದರೆ ಧಡಕ್ ಚಿತ್ರದ ನಂತರ ಮತ್ತಾವುದೇ ಚಿತ್ರ ಬಿಡುಗಡೆಗೊಂಡಿಲ್ಲ. ಆದರೀಗ ಶೀಘ್ರವೇ ನಾನು ಅಭಿನಯಿಸಿದ ಚಿತ್ರ ಹೊರಬರಲಿದ್ದು, ಮುಂದಿನ ದಿನಗಳಲ್ಲಿ ಚಿತ್ರದ ಕುರಿತು ಜನ ಮಾತನಾಡಲಿದ್ದಾರೆ ಹೊರತು ಜಿಮ್ ಲುಕ್ ಬಗ್ಗೆ ಅಲ್ಲ ಎಂಬ ವಿಶ್ವಾಸವಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಜಾಹ್ನವಿ ಶೀಘ್ರವೇ ಪಂಕಜ್ ತ್ರಿಪಾಠಿ ಜೊತೆಗೆ ಕುಂಜನ್ ಸೆಕ್ಸೇನಾ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಅಲ್ಲದೇ, ರೂಹಿ-ಅಫ್ಜಾ, ದೋಸ್ತಾನಾ- 2 ಹಾಗೂ ತಖ್ಸ್ ಚಿತ್ರದ ಮುಖ್ಯಪಾತ್ರದಲ್ಲಿಯೂ ಜಾಹ್ನವಿ ಅಭಿನಯಿಸುತ್ತಿದ್ದಾರೆ.