ವಿಜಯಪುರ 30: ಜಿಲ್ಲೆಯಲ್ಲಿ
ಕೋಟ್ಪಾ 2003ರ
ಕಾಯ್ದೆಯನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಲು ತಂಬಾಕು ಉತ್ಪನ್ನಗಳನ್ನು ಮಾರಾಟ ಮಾಡುವ ಎಲ್ಲ ಮಾರಾಟಗಾರರು, ತಯಾರಕರು,
ವಿತರಕರು ಹಾಗೂ ದಾಸ್ತಾನುಗಾರರು ತಂಬಾಕು
ನಿಯಂತ್ರಣ ಕಾನೂನು ಕೋಟ್ಪಾ-2003ನ್ನು ಅನುಪಾಲಿಸಬೇಕು ಹಾಗೂ
ಇದನ್ನು ಉಲ್ಲಂಘಿಸಿದರೆ ದಂಡ ವಿಧಿಸಲಾಗುವುದು ಎಂದು
ಜಿಲ್ಲಾಧಿಕಾರಿ ಎಸ್.ಬಿ.ಶೆಟ್ಟೆಣ್ಣವರ
ಅವರು ತಿಳಿಸಿದ್ದಾರೆ.
ಇತ್ತೀಚೆಗೆ
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜರುಗಿದ ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ಸಮನ್ವಯ ಸಮಿತಿ
ಸಭೆಯ ಅಧ್ಯಕ್ಷತೆ ವಹಿಸಿದ್ದ ಅವರು, ತಂಬಾಕು ಉತ್ಪನ್ನಗಳ ಸೇವನೆಯಿಂದ ಆಗುತ್ತಿರುವ ಆರೋಗ್ಯ ಸಮಸ್ಯೆಗಳನ್ನು ಪರಿಗಣಿಸಿ, ತಂಬಾಕು ಉತ್ಪನ್ನಗಳ ಉತ್ಪಾದನೆ, ಸರಬರಾಜು ಮತ್ತು ಮಾರಾಟದ ಮೇಲೆ ನಿಯಂತ್ರಣ ಹೇರಲು
ಭಾರತ ಸಕರ್ಾರ ಈ ಕಾಯ್ದೆಯನ್ನು ಜಾರಿಗೆ
ತಂದಿದ್ದು, ಜಿಲ್ಲೆಯಲ್ಲಿ ಕಟ್ಟುನಿಟ್ಟಾಗಿ ಜಾರಿಗೊಳಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಕೋಟ್ಪಾ
ಕಾಯ್ದೆಯನ್ವಯ ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ಮಾಡುವುದು ನಿಷೇಧವಿದ್ದು, ಈ ಕುರಿತಂತೆ ಸಾರ್ವಜನಿಕ
ಸ್ಥಳದ ಮಾಲೀಕರು 60/45 ಸೆಂ.ಮೀ. ಅಳತೆಯ ನಾಮಫಲಕವನ್ನು
ಪ್ರದರ್ಶನ ಮಾಡಬೇಕು. ಸಾರ್ವಜನಿಕ ಸ್ಥಳದಲ್ಲಿ ಧೂಮಪಾನ ಮಾಡುವುದು ಕಂಡು ಬಂದಲ್ಲಿ ಹತ್ತಿರದ
ಪೋಲಿಸ್ ಠಾಣೆಗೆ ದೂರು ನೀಡಬೇಕು. ತಂಬಾಕು
ಮಾರಾಟ ಮಾಡುವ ಅಂಗಡಿಗಳಲ್ಲಿ ಬೆಂಕಿ ಪೊಟ್ಟಣ, ಲೈಟರ್, ಆ್ಯಷ್ ಟ್ರೇ ಮುಂತಾದ ಧೂಮಪಾನಕ್ಕೆ
ಉತ್ತೇಜಿಸುವ ವಸ್ತುಗಳನ್ನು ಇರಿಸುವುದು ನಿಷೇಧಿಸಲಾಗಿದೆ. ಈ ನಿಯಮ ಉಲ್ಲಂಘಿಸಿದ್ದಲ್ಲಿ
ನಿಯಮ ಪಾಲಿಸದ ವ್ಯಕ್ತಿಗೆ 200 ರೂ.ವರೆಗೆ ದಂಡ
ವಿಧಿಸಲು ಅವಕಾಶವಿದೆ
ತಂಬಾಕು
ಉತ್ಪನ್ನಗಳ ನೇರ ಹಾಗೂ ಪರೋಕ್ಷ
ಜಾಹೀರಾತು, ಉತ್ತೇಜನ, ಪ್ರಾಯೋಜಕತೆಯ ಮೇಲೆ ನಿಷೇಧವಿದ್ದು, ತಂಬಾಕು
ಉತ್ಪನ್ನಗಳ ಮಾರಾಟ ಮಾಡುವ ಅಂಗಡಿಗಳಲ್ಲಿ ತಂಬಾಕು ಉತ್ಪನ್ನಗಳನ್ನು ಶೋಕೇಸ್ಗಳ ಮೂಲಕ ಪ್ರದರ್ಶನ ಮಾಡುವಂತಿಲ್ಲ.
ತಂಬಾಕು ಉತ್ಪನ್ನಗಳ ಜಾಹೀರಾತುಗಳನ್ನು ಬೋಡರ್್, ಭಿತ್ತಿಪತ್ರ, ಎಲ್.ಸಿ.ಡಿ.
ಟಿವಿಗಳ, ಗೋಡೆ ಬರಹ, ಹೋಡರ್ಿಂಗ್ಗಳ
ಮೂಲಕ ಹಾಗೂ ದೃಶ್ಯ ಹಾಗೂ
ಮುದ್ರಣ ಮಾಧ್ಯಮದ ಮೂಲಕ ತಂಬಾಕು ಉತ್ಪನ್ನಗಳ
ಪ್ರಚಾರ ಮಾಡಲು ನಿಷೇಧಿಸಲಾಗಿದೆ. ಈ ನಿಯಮ ಉಲ್ಲಂಘನೆಗೆ
2 ವರ್ಷ ಜೈಲು ಶಿಕ್ಷೆ , 1000 ರೂ.
ದಂಡ ಹಾಗೂ ಎರಡನೇ ಉಲ್ಲಂಘನೆಗೆ
5 ವರ್ಷ ಜೈಲು, 5 ಸಾವಿರ ರೂ. ದಂಡ ವಿಧಿಸಲು
ಅವಕಾಶವಿದೆ.
ತಂಬಾಕು
ಉತ್ಪನ್ನಗಳನ್ನು ಅಪ್ರಾಪ್ತ ವಯಸ್ಕರಿಗೆ ಮಾರಾಟ ಮಾಡುವುದು, ಅವರಿಂದ ಮಾರಾಟ ಮಾಡಿಸುವುದು ನಿಷೇಧವಿದ್ದು ಇದು ಶಿಕ್ಷಾರ್ಹ ಅಪರಾಧವಾಗಿದೆ.
ತಂಬಾಕು ಮಾರಾಟ ಮಾಡುವ ಅಂಗಡಿ ಮಾಲೀಕರು 60/45 ಸೆಂ.ಮೀ. ಅಳತೆಯ
ಆರೋಗ್ಯ ಎಚ್ಚರಿಕೆ ನಾಮ ಫಲಕವನ್ನು ಕಡ್ಡಾಯವಾಗಿ
ಅಂಗಡಿ ಮುಂದೆ ಪ್ರದರ್ಶನ ಮಾಡಬೇಕು. ಸೆಕ್ಷನ್ 6 (ಬಿ) ಪ್ರಕಾರ ಶಿಕ್ಷಣ
ಸಂಸ್ಥೆಗಳ 100 ಗಜದ ಒಳಗೆ ತಂಬಾಕು
ಉತ್ಪನ್ನಗಳ ಮಾರಾಟ ಶಿಕ್ಷಾರ್ಹ ಅಪರಾಧವಾಗಿದ್ದು, ಶಿಕ್ಷಣ ಸಂಸ್ಥೆಯ ಮುಖ್ಯಸ್ಥರು ತಮ್ಮ ಸಂಸ್ಥೆಯನ್ನು ಸಂಪೂರ್ಣ
ತಂಬಾಕು ಮುಕ್ತವನ್ನಾಗಿಸುವ ಜವಾಬ್ದಾರಿಯನ್ನು ಹೊಂದಿರುತ್ತಾರೆ. 3/2 ಅಡಿ ಸುತ್ತಳತೆಯ ನಾಮ
ಫಲಕವನ್ನು ಶಿಕ್ಷಣ
ಸಂಸ್ಥೆಯ ಮುಂದೆ ಪ್ರದರ್ಶನ ಮಾಡುವುದು ಕಡ್ಡಾಯವಾಗಿದೆ. ಈ ನಿಯಮ ಉಲ್ಲಂಘನೆಗೆ
200 ರೂ. ದಂಡವನ್ನು ಶಾಲಾ
ಮುಖ್ಯೋಪಾಧ್ಯಾಯರು ಅಥವಾ ಸಂಬಂಧಪಟ್ಟ
ಹತ್ತಿರದ ಪೋಲಿಸ್ ಠಾಣೆಯವರು ವಿಧಿಸಬಹುದಾಗಿದೆ.
ಸಿಗರೇಟ
ಮತ್ತು ಇತರೆ ತಂಬಾಕು ಉತ್ಪನ್ನಗಳ
ಪ್ಯಾಕುಗಳ ಮೇಲೆ ಶೇ.85% ರಷ್ಟು
ನಿದರ್ಿಷ್ಟ ಆರೋಗ್ಯದ ಎಚ್ಚರಿಕೆ ಸಂದೇಶಗಳಿಲ್ಲದೇ ಮಾರಾಟ ಮಾಡುವುದರ ಮೇಲೆ ಹಾಗೂ ಬಿಡಿ
ಬಿಡಿಯಾಗಿ ಮಾರಾಟ ಮಾಡುವುದರ ಮೇಲ ನಿಷೇಧವಿದ್ದು, ಇದರ
ಉಲ್ಲಂಘನೆಗೆ 2 ವರ್ಷ ಜೈಲು ಶಿಕ್ಷೆ-
5 ಸಾವಿರ ರೂ. ದಂಡ, ಹಾಗೂ
ಎರಡನೇ ಉಲ್ಲಂಘನೆಗೆ 5 ವರ್ಷ ಜೈಲು ಅಥವಾ
10 ಸಾವಿರ ರೂ. ದಂಡ ವಿಧಿಸಲು
ಅವಕಾಶವಿದೆ. ಮತ್ತು ಮಾರಾಟ ಚಿಲ್ಲರೆ ವ್ಯಾಪಾರಿಗಳಿಗೆ ಮೊದಲನೇ ಉಲ್ಲಂಘನೆಗೆ 2 ವರ್ಷ ಜೈಲು ಅಥವಾ
1 ಸಾವಿರ ರೂ. ದಂಡ ಮತ್ತು
ಎರಡನೇ ಉಲ್ಲಂಘನೆಗೆ 5 ವರ್ಷ ಜೈಲು 3 ಸಾವಿರ
ರೂ. ದಂಡದ ಅವಕಾಶವಿದೆ.
ತಂಬಾಕು
ವ್ಯಸನಿಗಳಿಗೆ ಜಿಲ್ಲಾ ಆಸ್ಪತ್ರೆಯ ರೂಂ. ನಂ.8/3 ರಲ್ಲಿ
ವ್ಯಸನ ಮುಕ್ತ ಕೇಂದ್ರ ಕಾರ್ಯನಿರ್ವಹಿಸುತ್ತಿದ್ದು, ಈ ಕೇಂದ್ರದಲ್ಲಿ ಉಚಿತ
ಸಮಾಲೋಚನೆ, ಆಧುನಿಕ ಯಂತ್ರಗಳ ಸಹಾಯದಿಂದ ತಂಬಾಕು ಸೇವನೆ ಪ್ರಮಾಣ ಪತ್ತೆ, ಹಾಗೂ ಅಗತ್ಯವಿದ್ದವರಿಗೆ
ಎನ್ಆರ್ಟಿ ಚಿಕಿತ್ಸೆ ನೀಡಲಾಗುವುದು.
ಈ ಎಲ್ಲ ಸೇವೆ ಸೌಲಭ್ಯಗಳು
ಉಚಿತವಾಗಿದ್ದು, ವ್ಯಸನಿಗಳು ಇದರ ಸದುಪಯೋಗ ಪಡೆದುಕೊಳ್ಳುವಂತೆ
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳು ಹಾಗೂ ತಂಬಾಕು ನಿಯಂತ್ರಣ
ಘಟಕದ ಜಿಲ್ಲಾ
ಸವರ್ೇಕ್ಷಣಾಧಿಕಾರಿಗಳು ಜಂಟಿ ಪತ್ರಿಕಾ ಪ್ರಕಟಣೆಯಲ್ಲಿ
ತಿಳಿಸಿದ್ದಾರೆ.