ಲೋಕದರ್ಶನ ವರದಿ
ಸಂಬರಗಿ 24: ತಂಗಡಿ ಗ್ರಾಮದಲ್ಲಿ ಕೃಷ್ಣಾ ನದಿಗೆ ಪ್ರವಾಹ ಬಂದಾಗ 373 ಕುಟುಂಬಗಳ ಮನೆ ನೀರಿನಿಂದ ಮುನಿಗಿ ಹೊಗಿದ್ದು ಆ ಕುಟುಂಬಗಳು ಬೀದಿ ಪಾಲಾಗಿವೆ. ಸರಕಾರದಿಂದ ಪರಿಹಾರ ಧನ ದೊರೆತ್ತಿಲ್ಲ ಎಂಬ ಕಾರಣಕ್ಕಾಗಿ ಡಿಸೆಂಬರ್ 5 ರಂದು ಅಥಣಿ ವಿಧಾನಸಭಾ ಕ್ಷೇತ್ರದಲ್ಲಿ ಬರುವ ತಂಗಡಿ ಗ್ರಾಮಸ್ಥರು ಚುನಾವಣಾ ಬಹಿಷ್ಕಾರ ಹಾಗೂ ಡಿಸೆಂಬರ್ 1 ರಂದು ತಂಗಡಿ ಗ್ರಾಮ ಪಂಚಾಯತ ಎದುರಿಗೆ ಧರಣಿ ಉಪವಾಸ ಸತ್ಯಾಗ್ರಹ ಮಾಡಲಾಗುವುದೆಂದು ತಹಶಿಲ್ದಾರ, ತಾಲೂಕಾ ಪಂಚಾಯತ ಕಾರ್ಯ ನಿವರ್ಾಹಕರು ಅಥಣಿ ಹಾಗೂ ಚುನಾವಣಾ ಅಧಿಕಾರಿ ಅಥಣಿ ಇವರಿಗೆ 24 ರವಿವಾರ ಮನವಿ ಸಲ್ಲಿಸಿದ್ದಾರೆ.
ಕೃಷ್ಣಾ ನದಿಗೆ ಪ್ರವಾಹ ಬಂದಾಗ ಗ್ರಾಮದಲ್ಲಿ ವಾಸಿಸುವ 373 ಕುಟುಂಬಗಳು ಸರಕಾರದಿಂದ ಯಾವುದೇ ಪ್ರಕಾರದ ಸರ್ವೇ ಆಗಿಲ್ಲ ಸುಮಾರು 120 ಕುಟುಂಬಗಳಿಗೆ 10 ಸಾವಿರ ರೂ ತಾತ್ಕಾಲಿಕ ಪರಿಹಾರ ದೊರೆತ್ತಿಲ್ಲ. 150 ಕುಟುಂಬಕ್ಕೆ ಸರಕಾರದಿಂದ ಪೂರೈಕೆ ಮಾಡುವ ಆಹಾರ ಧಾನ್ಯವನ್ನು ಇನ್ನೂವರೆಗೆ ದೊರೆತ್ತಿಲ್ಲ. ಬಿದ್ದು ಹೋಗಿರುವ ಕೆಲವು ಮನೆಗಳನ್ನು ಮಾತ್ರ ಸವರ್ೇ ಮಾಡಿ ಪಟ್ಟಿಯನ್ನು ತಯಾರಿಸಿ ಅರ್ಧಕ್ಕೆ ಸರ್ವೇ ಕಾರ್ಯದಿಂದ ಕೈ ಬಿಟ್ಟಿದ್ದಾರೆ. ಈ ಗ್ರಾಮದಲ್ಲಿ ಬೀದಿಗೆ ಬಂದಿರುವ ಕುಟುಂಬಗಳು ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಶೀಘ್ರದಲ್ಲಿ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.
ಈ ವೇಳೆ ಗ್ರಾಮ ಪಂಚಾಯತ ಮಾಜಿ ಅಧ್ಯಕ್ಷರು ಹಾಗೂ ಹಾಲಿ ಸದಸ್ಯರು ರಾಜಾರಾಮ ಪಾಟೀಲ ಶ್ರೀಕಾಂತ ಪಾಟೀಲ, ರಾಮಚಂದ್ರ ಮಹಾದೇವ ಪಾಟೀಲ, ಪೊಪಟ ಮೊರೆ, ಶಂಕರ ಚೌಗಲಾ, ಮಲ್ಲಪ್ಪ ಬಂಡಗರ, ಸಲಿಂ ಖಿಲೆದಾರ ಸೇರಿದಂತ ಗ್ರಾಮದ ಗಣ್ಯರು ಹಾಜರಿದ್ದರು. ಪ್ರತಿಗಳು, ಮುಖ್ಯಮಂತ್ರಿ ಸಾಹೇಬರು, ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಇವರಿಗೆ, ವಸತಿ ಸಚಿವರು, ನಿರಾವರಿ ಸಚಿವರು, ಜಿಲ್ಲಾಧಿಕಾರಿ ಬೆಳಗಾವಿ, ಎಸ್. ಪಿ ಸಾಹೇಬರು ಬೆಳಗಾವಿ, ಉಪವಿಭಾಗ ಅಧಿಕಾರಿ ಚಿಕ್ಕೋಡಿ, ತಹಶಿಲ್ದಾರ ಅಥಣಿ, ತಾಲೂಕಾ ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿಗಳು ಅಥಣಿ, ಡಿ. ವಾಯ್. ಎಸ್.ಪಿ ಸಾಹೇಬರು ಅಥಣಿ, ಸಿ.ಪಿ.ಆಯ್ ಸಾಹೇಬರು ಅಥಣಿ, ಪಿ ಎಸ್ ಐ ಸಾಹೇಬರು ಅಥಣಿ, ಚುನವಣಾ ಅಧಿಕಾರಿಗಳು ಅಥಣಿ ಹಾಗೂ ತಂಗಡಿ ಗ್ರಾಮ ಪಂಚಾಯತ ಅಧ್ಯಕ್ಷರು ಉಪಾಧ್ಯಕ್ಷರು, ಪಿ.ಡಿ.ಓ ಇವರಿಗೆ ಮನವಿ ಸಲ್ಲಿಸಲಾಗಿದೆ.