ಅಕ್ರಮವಾಗಿ ಒಂಟೆ, ಗೋವುಗಳ ವಧೆ ತಡೆಗೆ ಮುಂಜಾಗ್ರತಾ ಕ್ರಮಕ್ಕೆ ಸೂಚನೆ

ಹಾವೇರಿ: ಜಿಲ್ಲೆಯಲ್ಲಿ  ಅನಧಿಕೃತ ಜಾನುವಾರು ಹತ್ಯೆ ಹಾಗೂ ಕಾನೂನು ಬಾಹೀರವಾಗಿ ಜಾನುವಾರುಗಳ ಸಾಗಾಣಿಕೆ ತಡೆಗಟ್ಟಲು ಕಟ್ಟುನಿಟ್ಟಿನ ಕ್ರಮಕೈಗೊಳ್ಳಲು ತೀಮರ್ಾನಿಸಲಾಯಿತು. ಅನಧಿಕೃತ ಜಾನುವಾರು ಹತ್ಯೆ ತಡೆಗೆ ರಚಿಸಲಾದ ಸಮಿತಿಯ  ಕಾಯರ್ಾನುಷ್ಠಾನ ಕುರಿತಂತೆ ಇತ್ತೀಚೆಗೆ ಜರುಗಿದ ಜಿಲ್ಲಾ ಮಟ್ಟದ ಸಮಿತಿ ಸಭೆಯಲ್ಲಿ ಒಂಟೆ ಹಾಗೂ ಗೋವು ಸೇರಿದಂತೆ ಜಾನುವಾರುಗಳನ್ನು ಅನಧಿಕೃತವಾಗಿ ವಧೆ ಮಾಡುವುದು ಹಾಗೂ ಸಾಗಾಣಿಕೆ ಮಾಡುವುದು ಕಾನೂನು ಬಾಹೀರವಾಗಿದೆ ಎಂದು ಸಭೆಯಲ್ಲಿ ಭಾಗವಹಿಸಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಜಿ.ದೇವರಾಜ ಅವರು ತಿಳಿಸಿದರು.

ಜಿಲ್ಲೆಯ ಆಯ್ದ 22 ಸ್ಥಳಗಳಲ್ಲಿ ಪೊಲೀಸ್ ಚೆಕ್ ಪೋಸ್ಟ್ಗಳನ್ನು ಸ್ಥಾಪಿಸಲಾಗಿದೆ. ಠಾಣಾ ಮಟ್ಟದಲ್ಲಿ ಶಾಂತಿ ಸಭೆಗಳನ್ನು ಆಯೋಜಿಸಿಲಾಗಿದೆ, ಠಾಣಾ ಮಟ್ಟದಲ್ಲಿ ಸ್ಥಳೀಯ ಸಮಿತಿಗಳನ್ನು ರಚಿಸಿ ಪ್ರಾಣಿ ಹಿಂಸೆ ತಡೆಗಟ್ಟುವ ನಿಟ್ಟಿನಲ್ಲಿ ಅರಿವು ಮತ್ತು ಜಾಗೃತಿ ಮೂಡಿಸಲಾಗಿದೆ. ಬೀಟ್ ಪೊಲೀಸ್ ಸಿಬ್ಬಂದಿಯು ಸಹ ತಮ್ಮ ವ್ಯಾಪ್ತಿಯಲ್ಲಿ ಜಾಗೃತಿ ಮೂಡಿಸುವ ಕಾರ್ಯ ಕೈಗೊಂಡಿದ್ದಾರೆ. ಗ್ರಾಮೀಣ ಮಟ್ಟದಲ್ಲಿ ಪಿಡಿಓಗಳು, ಕಂದಾಯ ಇಲಾಖೆ ಸಿಬ್ಬಂದಿಗಳು ಸಹಕಾರ ಮತ್ತು ಸಮನ್ವಯತೆಯಿಂದ ಅನಧಿಕೃತವಾಗಿ ಪ್ರಾಣಿ ಹತ್ಯೆ ಹಾಗೂ ಸಾಗಾಣಿಕೆ ಕುರಿತಂತೆ ಜಾಗೃತಿ ಮೂಡಿಸಬೇಕು. ಪ್ರಾಣಿ ಕಲ್ಯಾಣ ಕಾರ್ಯಕ್ರಮವನ್ನು ಅನುಷ್ಠಾನಗೊಳಿಸಬೇಕು ಎಂದು ತಿಳಿಸಿದರು.ಹಬ್ಬ ಹಾಗೂ ವಿಶೇಷ ಸಂದರ್ಭದಲ್ಲಿ ಪ್ರಾಣಿ ವಧೆಯನ್ನು ಅತ್ಯಂತ ವೈಜ್ಞಾನಿಕವಾಗಿ ಕೈಗೊಳ್ಳಬೇಕಾಗಿದೆ. 

ಈ ಉದ್ದೇಶಕ್ಕಾಗಿ ಪರವಾನಿಗೆಯನ್ನು ಪಡೆಯಬೇಕಾಗಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿಗಳು ತಿಳಿಸಿದರು.ಸಮಿತಿ ಸದಸ್ಯರಾದ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿವರ್ಾಹಣಾಧಿಕಾರಿ ಶ್ರೀಮತಿ ಕೆ.ಲೀಲಾವತಿ ಮಾತನಾಡಿ, ಪ್ರಾಣಿ ಹಿಂಸೆ, ತೊಂದರೆ, ಹತ್ಯೆ ತಡೆಯಲು ಇರುವಂತಹ ಬಹುಮುಖ್ಯ ಕಾನೂನುಗಳ ಕುರಿತಂತೆ ಅರಿತುಕೊಂಡು ಇಂತಹ ಚಟುವಟಿಕೆಗಳನ್ನು ತಡೆಯುವುದು ಅಧಿಕಾರಿಗಳ ಬಹುಮುಖ್ಯ ಕರ್ತವ್ಯ ಎಂದು ಹೇಳಿದರು. ನಗರಾಭಿವೃದ್ಧಿ ಕೋಶದ ಯೋಜನಾಧಿಕಾರಿ ವಾಸಣ್ಣ ಅವರು ಮಾತನಾಡಿ, ಹಾನಗಲ್ ಪಟ್ಟಣದ ಪುರಸಭೆ ವ್ಯಾಪ್ತಿಯಲ್ಲಿ ವ್ಯವಸ್ಥಿತ ವಧಾಗಾರವಿದೆ. ನಿಯಮಾನುಸಾರ ಪರವಾನಿಗೆ ಕೊಡಲಾಗಿದೆ. ಮಾರಾಟಗಾರರು ಇದರ ಪ್ರಯೋಜನ ಪಡೆಯಲು ತಿಳಿಸಿದರು.

ಪೌರಾಯುಕ್ತ ಬಸವರಾಜ ಜಿದ್ದಿ ಅವರು ಮಾತನಾಡಿ, ಹಾವೇರಿ ನಗರದಲ್ಲಿ ವೈಜ್ಞಾನಿಕ ವಧಾಗಾರ ನಿಮರ್ಿಸುವ ಉದ್ದೇಶಿತ ಕಾರ್ಯದ ಬಗ್ಗೆ ವಿವರಿಸಿದರು.

   ಸಭೆಯಲ್ಲಿ  ಚುನಾವಣಾ ತಹಶೀಲ್ದಾರ ಪ್ರಶಾಂತ ನಾಲವಾರ, ಪರಿಸರ ಅಧಿಕಾರಿ ಮಹೇಶ್ವರಪ್ಪ, ಪಶು ಪಾಲನಾ ಇಲಾಖೆ ಉಪನಿದರ್ೆಶಕ ಡಾ.ಸುಧಾಕರ, ಸಹಾಯಕ ನಿದರ್ೆಶಕರಾದ ಡಾ.ಆನಂದ ಪಾಲೇಕರ  ಹಾಗೂ ರಾಜು ಕೂಲೇರ  ಇತರರು ಉಪಸ್ಥಿತರಿದ್ದರು.