ಲೋಕದರ್ಶನ ವರದಿ
ಬಾಗಲಕೋಟೆ 11: ಮತದಾರ ಪಟ್ಟಿ ಪರಿಷ್ಕರಣೆ ಕಾರ್ಯ ಮಹತ್ವವಾಗಿದ್ದು, ಜಿಲ್ಲೆಯಲ್ಲಿ ದೋಷ ರಹಿತವಾದ ಮಾದರಿ ಮತದಾರ ಪಟ್ಟಿ ಸಿದ್ದಪಡಿಸುವಂತೆ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಸಕರ್ಾರ ಕಾರ್ಯದಶರ್ಿಗಳು ಹಾಗೂ ಜಿಲ್ಲಾ ಮತದಾರ ಪಟ್ಟಿ ವೀಕ್ಷಕರಾದ ಮೊಹಮದ್ ಮೊಹಸಿನ್ ಸೂಚಿಸಿದರು.
ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿಂದು ಜರುಗಿದ ಜಿಲ್ಲೆಯ ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಮತದಾರರ ಪಟ್ಟಿ ಶುದ್ದವಾಗಿದ್ದರೆ ಚುನಾವಣೆಯೂ ಸಹ ಸುಸೂತ್ರವಾಗಿ ಜರುಗುವುದು. ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯದಲ್ಲಿ ತಮಗೆ ವಹಿಸಿ ಕಾರ್ಯವನ್ನು ಜವಾಬ್ದಾರಿಯಿಂದ ನಿರ್ವಹಿಸಬೇಕು. ಮನೆ ಮನೆಗೆ ಹೋಗಿ ಪರಿಶೀಲನೆ ಮಾಡಬೇಕು ಎಂದರು.
ಮತದಾರರ ಪಟ್ಟಿಯಲ್ಲಿ ಪೋಟ ಇಲ್ಲದಿದ್ದರೆ ಪೋಟೋ ಅಪ್ಲೋಡ್ ಮಾಡಬೇಕು. ಕೆಲವೊಬ್ಬರಿಗೆ ಮತದಾರರ ಗುರುತಿನ ಚೀಟಿ ಇದ್ದರೂ ಸಹ ಮತದಾರರ ಪಟ್ಟಿಯಲ್ಲಿ ಹೆಸರು ಇರುವದಿಲ್ಲ. ಇಂತಹ ಒಂದಿಲ್ಲ ಒಂದು ಸಮಸ್ಯೆಗಳು ಇದ್ದು ಅವರುಗಳನ್ನು ಸೂಕ್ಷ್ಮವಾಗಿ ಪರಿಶೀಲಿಸಿ ಸರಿಪಡಿಸುವ ಕಾರ್ಯವಾಗಬೇಕು. ಬಿಎಲ್ಓಗಳು ಹಾಗೂ ಸೆಕ್ಟರ್ ಅಧಿಕಾರಿಗಳು ಜವಾಬ್ದಾರಿಯಿಂದ ಕೆಲಸ ನಿರ್ವಹಿಸಬೇಕು. ಯಾವುದೇ ರೀತಿಯ ಸಮಸ್ಯೆಯಾಗದಂತೆ ಪೂರ್ಣ ಪ್ರಮಾಣದ ಮತದಾರರ ಪಟ್ಟಿ ಸಿದ್ದಪಡಿಸುವ ಕಾರ್ಯವಾಗಬೇಕು ಎಂದರು.
ಮತದಾರರ ಪಟ್ಟಿಯನ್ನು ಭಾವಚಿತ್ರ ಇಲ್ಲದಿರುವ ಮತದಾರರ ಭಾವಚಿತ್ರ ಸಂಗ್ರಹಿಸುವ ಕಾರ್ಯವಾಗಬೇಕು. ಅನರ್ಹರಾದವರ ಹೆಸರುಗಳನ್ನು ಮತದಾರರ ಪಟ್ಟಿಯಿಂದ ತೆಗೆದುಹಾಕಲು ಸೂಕ್ತ ಕ್ರಮಕೈಗೊಳ್ಳುವಂತೆ ತಹಶೀಲ್ದಾರರಿಗೆ ಸೂಚಿಸಿದರು. ಜನವರಿ 25 ರಂದು ಆಚರಿಸುವ ರಾಷ್ಟ್ರೀಯ ಮತದಾರರ ದಿನಾಚರಣೆಯನ್ನು ಪ್ರತಿ ಮತಗಟ್ಟೆ ಮಟ್ಟದಲ್ಲಿ ಆಚರಿಸಲು ಸೂಚಿಸದರು. ಈ ದಿನಾಚರಣೆಯನ್ನು ಶಾಲೆಗಳ ಪ್ರಾರ್ಥನಾ ಸಮಯದಲ್ಲಿ ಆಚರಿಸಿ ಇದರಿಂದ ಮಕ್ಕಳಲ್ಲಿ ಮತದಾನದ ಜಾಗೃತಿ ಮೂಡಿಸಿದಂತಾಗುತ್ತದೆ. ಅಲ್ಲದೇ ಮತದಾನ ಮಹತ್ವದ ಬಗ್ಗೆ ಯುವ ಮತದಾರರಲ್ಲಿ ಉತ್ಸಾಹ ಹೆಚ್ಚಿಸುವ ಕಾರ್ಯವಾಗಬೇಕು ಎಂದರು.
ಪರಿಷ್ಕರಣೆ ಕಾರ್ಯದಲ್ಲಿ ಬಂದ ಅಜರ್ಿಗಳನ್ನು ಪೆಂಡಿಂಗ್ ಉಳಿಸಬಾರದು. ಪ್ರತಿಯೊಂದು ತಹಶೀಲ್ದಾರ ಕಚೇರಿಯಲ್ಲಿ ಮತದಾರರ ಪಟ್ಟಿಗೆ ಸಂಬಂದಿಸಿದ ದೂರುಗಳನ್ನು ಸ್ವೀಕರಿಸಿ ಪರಿಹರಿಸುವ ಕಾರ್ಯವಾಗಬೇಕು. ದೂರುಗಳನ್ನು ಲಿಖಿತವಾಗಿ ನೀಡದಿದ್ದರೂ ಅವುಗಳನ್ನು ಬರೆದಿಟ್ಟುಕೊಂಡು ಸರಿಪಡಿಸುವ ಕಾರ್ಯವಾಗಬೇಕು ಎಂದರು.
ನಂತರ ನಡೆ ರಾಜಕೀಯ ಪಕ್ಷಗಳ ಸಭೆಯಲ್ಲಿ ಮಾದರಿ ಮತಾರರ ಪಟ್ಟಿ ಸಿದ್ದತೆಯಲ್ಲಿ ಏಜೆಂಟರುಗಳ ಸಹಕಾರ ಮಹತ್ವವಾಗಿದೆ. ಜಿಲ್ಲೆಯ ಮತದಾರರ ಪಟ್ಟಿಯಲ್ಲಿನ ದೋಷಗಳ ನಿವಾರಣೆಗೆ ಕ್ರಮ ಜರುಗಿಸಲಾಗಿದೆ ಎಂದು ತಿಳಿಸಿದರು.
ಸಭೆಯಲ್ಲಿ ಜಿಲ್ಲಾಧಿಕಾರಿ ಕೆ.ಜಿ.ಶಾಂತಾರಾಮ, ಜಿ.ಪಂ ಸಿಇಓ ಗಂಗೂಬಾಯಿ ಮಾನಕರ, ಅಪರ ಜಿಲ್ಲಾಧಿಕಾರಿ ಅಶೋಕ ದುಡಗುಂಟಿ, ಉಪವಿಭಾಗಾಧಿಕಾರಿಗಳಾದ ಎಚ್.ಜಯ, ಇಕ್ರಮ ಸೇರಿದಂತೆ ಆಯಾ ತಾಲೂಕಿನ ತಹಶೀಲ್ದಾರರು ಉಪಸ್ಥಿತರಿದ್ದರು.