ಸರ್ಕಾರದ ದೂರದೃಷ್ಟಿ ಜನಪ್ರತಿನಿಧಿಗಳ ಆಸಕ್ತಿ ಇದ್ದರೆ ಯಾವುದು ಅಸಾಧ್ಯವಲ್ಲ : ಜಾವಿದ್‌

Nothing is impossible if the vision of the government is the interest of the people's representative

ಸರ್ಕಾರದ ದೂರದೃಷ್ಟಿ ಜನಪ್ರತಿನಿಧಿಗಳ ಆಸಕ್ತಿ ಇದ್ದರೆ ಯಾವುದು ಅಸಾಧ್ಯವಲ್ಲ : ಜಾವಿದ್‌

 ಶಿಗ್ಗಾವಿ 26 : ಸರ್ಕಾರದ ದೂರದೃಷ್ಟಿ ಜನಪ್ರತಿನಿಧಿಗಳ ಆಸಕ್ತಿ ಇದ್ದರೆ ಯಾವುದು ಅಸಾಧ್ಯವಲ್ಲ ಗ್ರಾಮ ಪಂಚಾಯಿತಿ ಅಧ್ಯಕ್ಷ ಜಾವಿದ. ತಾಲೂಕಿನ ಹುಲಗೂರ ಹಿಂದೂ ರುದ್ರ ಭೂಮಿಯ ವಿದ್ಯುದ್ಧೀಕರಣ ಕೆಲಸಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ ಸಾರ್ವಜನಿಕರು ಕಳೆದ 20 ವರ್ಷಗಳಿಂದಲೂ ಹುಲಗೂರು ರುದ್ರಭೂಮಿಯ ವಿದ್ಯುದ್ದಿಕರಣ ಆಗಿರಲಿಲ್ಲ ಕಾಂಗ್ರೆಸ್ ಸರ್ಕಾರದ ಅನುದಾನ ಗ್ರಾಮ ಪಂಚಾಯತಿ ಮತ್ತು ಹೆಸ್ಕಾಂ ಇಲಾಖೆಯ ಮುತವರ್ಜಿ ಜೊತೆಗೆ ಕೆಲಸ ಮಾಡುವವರು ಹಲವಾರು ಜನ ಇದ್ದಾರೆ ಆದರೆ ಸಾಮಾಜಿಕ ಹೋರಾಟಗಾರ ಪ್ರಥಮ ದರ್ಜೆ ವಿದ್ಯುತ ಗುತ್ತಿಗೆದಾರ ಮಂಜಣ್ಣ ಮಣ್ಣಣ್ಣವರ ಹಲವಾರು ವರ್ಷಗಳಿಂದ ಇಂತಹ ಕೆಲಸಗಳನ್ನು ಹುಡುಕಿ ಮಾಡುವುದರಲ್ಲಿ ಅವರ ಆಸಕ್ತಿ ನಿಜಕ್ಕೂ ಸಂತಸ ತಂದಿದೆ ರುದ್ರ ಭೂಮಿಗೆ ವಿದ್ಯುತ್ ಮಾರ್ಗ ಅಳವಡಿಸಲಾಗಿದೆ.   

 ಈ ಕಾಮಗಾರಿಗೆ ವಿಶೇಷ ಆಸಕ್ತಿ ತೋರಿಸಿದ ಗ್ರಾಮ ಪಂಚಾಯಿತಿ ಅಧ್ಯಕ್ಷ ಜಾವೀದ್ ಹಾಗೂ ಸದಸ್ಯರು ಹಾಗೂ ಸ್ಥಳೀಯ ಗುತ್ತಿಗೆದಾರ ಶರಣಪ್ಪ ದೇಸಾಯಿ ಈ ಕೆಲಸಕ್ಕೆ ಸಹಕಾರ ನೀಡಿದ್ದಾರೆ ಕಾಮಗಾರಿ ನಂತರ ಸ್ಥಳಕ್ಕೆ ಆಗಮಿಸಿದ ಪಂಚಾಯತಿ ಅಧ್ಯಕ್ಷ ಜಾವಿದ್ ಮತ್ತು ಸದಸ್ಯರು ಹಲವಾರು ವರ್ಷಗಳಿಂದ ಜೊತೆ ನೀಡಲು ಪ್ರಯತ್ನಪಟ್ಟಿದ್ದೆವು ಆದರೆ ಅನುದಾನ ಕೊರತೆಯಿಂದ ಸಾಧ್ಯವಾಗಿರಲಿಲ್ಲ ಇಗಾ ರಾಜ್ಯದಲ್ಲಿರುವ ಕಾಂಗ್ರೆಸ್ ಸರ್ಕಾರದ ವಿಶೇಷ ಅನುದಾನದಲ್ಲಿ ಮತ್ತು ಹೆಸ್ಕಾಂ ಇಲಾಖೆಯ ಸಹಕಾರ ಜೊತೆಗೆ ಸಾಮಾಜಿಕ ಹೋರಾಟಗಾರ ಜನಪರ ಕಾಳಜಿಯ ವ್ಯಕ್ತಿ ಕಾಂಗ್ರೆಸ್ ಪಕ್ಷದ ತಾಲೂಕ ವಕ್ತಾರ ಮಂಜಣ್ಣ ಅವರ ವಿಶೇಷ ಮುತವರ್ಜಿಯಿಂದ ಕೆಲಸವಾಗಿದ್ದು ವಿದ್ಯುತ್ ಕಂಬಗಳಿಗೆ ಆದಷ್ಟು ಬೇಗನೆ ವಿದ್ಯುತ್ ದೀಪಗಳನ್ನು ಅಳವಡಿಸಲು ಶಾಸಕರು ಹಾಗೂ ಹೆಸ್ಕಾಂ ಅಧ್ಯಕ್ಷರ ಸಹಕಾರ ಪಡೆದು ಅವರ ಸಮ್ಮುಖದಲ್ಲಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಲಾಗುವುದು ಎಂದು ತಿಳಿಸಿದ್ದಾರೆ.  ಈ ಸಂದರ್ಭದಲ್ಲಿ ಸ್ಥಳೀಯ ಅಧಿಕಾರಿಗಳ ಸಹಕಾರಕ್ಕೂ ಧನ್ಯವಾದ ಹಾಗೂ ಕಾಮಗಾರಿ ನಿರ್ವಹಿಸಿದ ಮಂಜಣ್ಣ ಅವರ ಕಾರ್ಮಿಕರಿಗೂ ಸಹ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.