ಇಂದಿರಾ ಗಾಂಧಿ ಮಾತ್ರವಲ್ಲ, ಪವಾರ್, ಬಾಳಾ ಠಾಕ್ರೆ ಫೋಟೋಗಳೂ ಇವೆ: ಭೂಗತ ದೊರೆ ಕರೀಂ ಮೊಮ್ಮಗ

kareemlal

ಮುಂಬೈ,  ಜ ೧೬ - ಮಾಜಿ ಪ್ರಧಾನಿ ಇಂದಿರಾ ಗಾಂಧಿ  ಭೂಗತ  ದೊರೆ ಕರೀಂ ಲಾಲಾ ಅವರನ್ನು ಭೇಟಿಯಾಗುತ್ತಿದ್ದರು  ಎಂದು  ಶಿವಸೇನೆ ರಾಜ್ಯಸಭಾ  ಸಂಜಯ್ ರಾವತ್   ಪ್ರಕಟಿಸಿದ  ಬೆನ್ನಲ್ಲೇ ಮತ್ತೊಂದು ಬಾಂಬ್ ಸ್ಫೋಟಗೊಂಡಿದೆ.. ಕರೀಂ   ಮೊಮ್ಮಗ  ಪ್ರತಿಕ್ರಿಯಿಸಿ, ತಮ್ಮ ಅಜ್ಜನ ಜೊತೆ   ಇಂದಿರಾಗಾಂಧಿ  ಮಾತ್ರವಲ್ಲ,  ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷ ಮುಖ್ಯಸ್ಥ ಶರದ್ ಪವಾರ್ , ಶಿವಸೇನೆ ಮುಖ್ಯಸ್ಥ ಬಾಳಾ  ಠಾಕ್ರೆ ಭೇಟಿಯಾಗಿರುವ  ಚಿತ್ರಗಳೂ  ಕಚೇರಿಯಲ್ಲಿವೆ ಎಂದು ಹೇಳಿದ್ದಾರೆ.  

ಇನ್ನೊಂದು ಕಡೆ,  ಮಿತ್ರ ಪಕ್ಷ  ಕಾಂಗ್ರೆಸ್  ನಾಯಕರು  ಆಕ್ರೋಶಗೊಂಡ ನಂತರ,    ಸಂಜಯ್ ರಾವತ್   ತಮ್ಮ ಹೇಳಿಕೆಯನ್ನು  ಗುರುವಾರ ಹಿಂಪಡೆದುಕೊಂಡಿದ್ದಾರೆ.

ಮಾಜಿ ಪ್ರಧಾನಿ ಇಂದಿರಾ ಗಾಂಧಿ ಮುಂಬೈನಲ್ಲಿ  ಭೂಗತ ದೊರೆ  ಕರೀಂ  ಲಾಲಾ ನನ್ನು ಭೇಟಿಯಾಗುತ್ತಿದ್ದರು  ಎಂದು ಸಂಜಯ್ ರಾವತ್   ಬುಧವಾರ ಆರೋಪಿಸಿದ್ದರು.   ಮಹಾರಾಷ್ಟ್ರದಲ್ಲಿ ಈಗ  ಶಿವಸೇನೆ, ಕಾಂಗ್ರೆಸ್ ಮತ್ತು ಎನ್‌ಸಿಪಿ ಸರ್ಕಾರದಲ್ಲಿ ಪಾಲುದಾರರಾಗಿರುವುದರಿಂದ ಈ ಅಭಿಪ್ರಾಯಗಳು ಪ್ರಾಮುಖ್ಯತೆ ಪಡೆದುಕೊಂಡಿವೆ.

 ಸಂಜಯ್  ರಾವತ್    ಹೇಳಿಕೆಗಳ ವಿರುದ್ದ   ಕಾಂಗ್ರೆಸ್  ವ್ಯಗ್ರಗೊಂಡಿದ್ದು.  ರಾವತ್   ಕೂಡಲೇ ತಮ್ಮ  ಹೇಳಿಕೆಗಳನ್ನು   ಅವರು ಹಿಂಪಡೆಯಬೇಕೆಂದು ಒತ್ತಾಯಿಸಿದ್ದಾರೆ.  ಸುಳ್ಳು ಹೇಳಿಕೆಗಳನ್ನು ಹಿಂಪಡೆದುಕೊಳ್ಳಬೇಕೆಂದು ಕಾಂಗ್ರೆಸ್ ಮುಖಂಡರುಗಳಾದ  ಮಿಲಿಂದ್ ದಿಯೋರಾ ಮತ್ತು ಸಂಜಯ್ ನಿರುಪಮ್ ಅವರು ಒತ್ತಾಯಿಸಿದ್ದಾರೆ.

 ಈ ನಡುವೆ    ಭೂಗತ  ದೊರೆ   ಕರೀಂ ಲಾಲಾ  ಮೊಮ್ಮಗ  ಮಾತನಾಡಿ,   ಕರೀಂ ಲಾಲಾ ಅವರನ್ನು ಮಾಜಿ ಪ್ರಧಾನಿ ಇಂದಿರಾ ಗಾಂಧಿ ಭೇಟಿ ಮಾಡಿದ್ದ   ಫೋಟೋಗಳು  ತಮ್ಮ ಕಚೇರಿಯಲ್ಲಿವೆ.  ಅಲ್ಲದೆ, ಶರದ್ ಪವಾರ್ ಮತ್ತು ಬಾಳ್  ಠಾಕ್ರೆ ಸೇರಿದಂತೆ  ಇನ್ನೂ  ಹಲವು  ಪ್ರಮುಖ ನಾಯಕರು   ಕರೀಂ ಲಾಲಾ ಅವರನ್ನು ಭೇಟಿಯಾಗಿರುವ  ಚಿತ್ರಗಳು ನಮ್ಮ ಕಚೇರಿಯಲ್ಲಿವೆ   ಎಂದು  ಹೇಳಿದ್ದಾರೆ. 

ಸಂಜಯ್ ರಾವತ್,    ಗುರುವಾರ ತಮ್ಮ ಅಭಿಪ್ರಾಯಗಳನ್ನು ಹಿಂತೆಗೆದುಕೊಂಡಿದ್ದಾರೆ. ಕಾಂಗ್ರೆಸ್  ಸ್ನೇಹಿತರು  ಬೇಸರ ಪಡಬೇಕಾದ  ಅಗತ್ಯವಿಲ್ಲ.  ತಮ್ಮ ಹೇಳಿಕೆ   ಇಂದಿರಾ ಗಾಂಧಿ ಅವರ   ಹೆಸರು, ಪ್ರತಿಷ್ಠೆಗೆ ಧಕ್ಕೆ ತರುತ್ತವೆ ಎಂದು ಯಾರಾದರೂ ಭಾವಿಸಿದರೆ ಹೇಳಿಕೆ ಹಿಂಪಡೆಯುವುದಾಗಿ ಹೇಳಿದ್ದಾರೆ. ಕರೀಂ ಲಾಲಾ  ಪಷ್ತೂನ್ -  ಎ -  ಹಿಂದ್   ಎಂಬ  ಸಂಘಟನೆಯ  ನಾಯಕರೂ  ಆಗಿದ್ದರು.   ಇಂದಿರಾ ಗಾಂಧಿ ಸೇರಿದಂತೆ ಹಲವು ಉನ್ನತ ನಾಯಕರನ್ನು ಸಂಘಟನೆಯ ಮುಖಂಡರಾಗಿ  ಅವರು ಭೇಟಿಯಾಗುತ್ತಿದ್ದರು.   ಇತಿಹಾಸ ಗೊತ್ತಿಲ್ಲದವರು  ತಮ್ಮ ಹೇಳಿಕೆಯನ್ನು  ತಿರುಚುತ್ತಿದ್ದಾರೆ ಎಂದು ರಾವತ್  ಬೇಸರ ವ್ಯಕ್ತಪಡಿಸಿದ್ದಾರೆ.