ವಿದ್ಯಾಥರ್ಿಗಳ ವ್ಯಕ್ತಿತ್ವ ವಿಕಸನಕ್ಕೆ ಪಠ್ಯೇತರ ಚಟುವಟಿಕೆಗಳು ಅವಶ್ಯಕ: ಡಾ.ಎಂ.ಎಂ.ಪಡಶೆಟ್ಟಿ

ಲೋಕದರ್ಶನ ವರದಿ

ಸಿಂದಗಿ 04:ವಿದ್ಯಾಥರ್ಿಗಳ ವ್ಯಕ್ತಿತ್ವ ವಿಕಸನದಲ್ಲಿ ಪಠ್ಯದ ಜೊತೆಗೆ ಪಠ್ಯಪೂರಕ ಚಟುವಟಿಕೆಗಳು ಪ್ರಮುಖ ಪಾತ್ರನಿರ್ವಹಿಸುತ್ತವೆ ಎಂದು ಹಿರಿಯ ಸಂಶೋಧಕ, ಭೀಮಾ ಯುನಿವರ್ಸಲ್ ಸೆಂಟ್ರಲ್ ಸ್ಕೂಲ್ ನಿದರ್ೇಶಕ ಡಾ.ಎಂ.ಎಂ.ಪಡಶೆಟ್ಟಿ ಹೇಳಿದರು.

ಪಟ್ಟಣದ ಭೀಮಾ ಯುನಿವರ್ಸಲ್ ಸೆಂಟ್ರಲ್ ಸ್ಕೂಲ್ನಲ್ಲಿ ಹಮ್ಮಿಕೊಂಡ ಕಾನರ್ಿವಲ್ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಕಾನರ್ಿವಲ್ ಕಾರ್ಯಕ್ರಮ ವಿದ್ಯಾಥರ್ಿಗಳ ವ್ಯಕ್ತಿತ್ವ ರೂಪಿಸುವ ಕಾರ್ಯಕ್ರಮವಾಗಿದೆ. ಮಕ್ಕಳಿಗೆ ವ್ಯವಹಾರಿಕ ಜ್ಞಾನ ಬೆಳೆಸಿಕೊಳ್ಳಲು ಇಂಥ ಕಾರ್ಯಕ್ರಮಗಳನ್ನು ಆಯೋಜಿಸಿರುವುದು ಸೂಕ್ತವಾಗಿದೆ. ಈ ಕಾರ್ಯಕ್ರಮದಲ್ಲಿ ಮಕ್ಕಳು ತಮ್ಮ ಮನೆಯಲ್ಲಿ ಸಿದ್ದ ಪಡೆಸಿದ ವಸ್ತುಗಳನ್ನು ಮಾರಾಟ ಮಾಡುವ ಮೂಲಕ ವ್ಯವಹಾರ ಜ್ಞಾನ ಬೆಳೆಸಿಕೊಳ್ಳಲು ಈ ವೇದಿಕೆ ಸಹಕಾರಿಯಾಗಿದೆ. ಇಂತ ಕಾರ್ಯಕ್ರಮಗಳನ್ನು ಎಲ್ಲ ಶಾಲೆಯಲ್ಲಿ ನಡೆಸಿಕೊಂಡು ಬರಬೇಕು ಎಂದು ಸಲಹೆ ನೀಡಿದರು.

ಕಾರ್ಯಕ್ರಮ ಉದ್ಘಾಟಿಸಿದ ಭೀಮಾ ಯುನಿವರ್ಸಲ್ ಸೆಂಟ್ರಲ್ ಸ್ಕೂಲ್ ಅಧ್ಯಕ್ಷ ವಿಠ್ಠಲ ಕೋಳ್ಳೂರ ಅವರು ಮಾತನಾಡಿ, ಮಕ್ಕಳಿಗೆ ಶಿಕ್ಷಣ ನೀಡುವ ಜೊತೆಗೆ ಅವರ ವ್ಯಕ್ತಿತ್ವ ವಿಕಸನಕ್ಕೆ ಪೂರಕವಾದ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ ಎಂದು ಹೇಳೀದರು.

ಶಾಲಾ ಮಕ್ಕಳು ತಮ್ಮ ಮನೆಯಲ್ಲಿ ಸಿದ್ದ ಪಡೆಸಿಕೊಂಡು ಬಂದ ತಿಂಡಿ-ತಿನಸುಗಳನ್ನು, ತಂಪು ಪಾನಿ, ಕಸೂತಿ ವಸ್ತುಗಳು ಹೀಗೆ ವಿವಿಧ ವಸ್ತುಗಳನ್ನು ಮಾರಾಟ ಮಾಡಿದರು.

ಕಣರ್ಾಟಕ ಬ್ಯಾಂಕ, ಪೋಸ್ಟ ಆಫೀಸ್, ಜೋಗುರ ಮೋಟರ್ಸ್, ಆಯುವರ್ೆದಿಕ್ ಮೆಡಿಕಲ್, ಸ್ಪಾನ್ಸರ್ಸಗಳು, ಸ್ಟೇಷನರಿ ಶಾಪ್, ಪುಸ್ತಕ ಮಳಿಗೆಗಳ ಪದರ್ಶನ ನಡೆದವು. ಶಾಲೆಯ ನಿದರ್ೇಶಕರಾದ ಜಿ. ಕೆ. ಪಡಗಾನೂರ, ದತ್ತು ಮಾವೂರ, ಪ್ರಶಾಂತ ಕಮತಗಿ, ಭೀಮಾಶಂಕರ ತಾರಾಪೂರ, ಶಿವಶರಣ ಮಾವೂರ, ಶ್ರೀಮಂತ ಮಲ್ಲೇದ, ಶಾಂತು ಕುಂಬಾರ ಅವರು ವೇದಿಕೆ ಮೇಲೆ ಇದ್ದರು. ಸ್ನೇಹಾ ಹಿರೇಮಠ ಹಾಗೂ ಕುಮಾರಿ ತ್ರಿವೇಣಿ ಸ್ವಾಗತ ಗೀತೆ ಹಾಡಿದರು. ಪ್ರಾಚಾರ್ಯೆ ಶಾಹಿಮೋಲ್ ಎಸ್.ಪಿ. ಸ್ವಾಗತಿಸಿದರು.