ಜೆಡಿಎಸ್ ಅಭ್ಯರ್ಥಿಯಿಂದ ನಾಮಪತ್ರ ಸಲ್ಲಿಕೆ

ಬ್ಯಾಡಗಿ: ಮೇ 29 ರಂದು ನಡೆಯಲಿರುವ ಸ್ಥಳೀಯ ಪುರಸಭೆಯ ಚುನಾವಣೆಗೆ ಇಂದಿನವರೆಗೂ ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷದಿಂದ ಯಾವುದೇ ನಾಮ ಪತ್ರಗಳು ಸಲ್ಲಿಕೆಯಾಗದೇ ಜೆಡಿಎಸ್ನಿಂದ ಮೇ.14 ರಂದು ಮತ್ತೊಂದು  ನಾಮ ಪತ್ರ ಸಲ್ಲಿಕೆಯಾಗುವ ಮೂಲಕ ಒಟ್ಟು ಎರಡು ನಾಮ ಪತ್ರಗಳನ್ನು ಜೆಡಿಎಸ್ ಸಲ್ಲಿಸಿದಂತಾಗಿದೆ.

      ಮಂಗಳವಾರ ಇಲ್ಲಿನ ಪುರಸಭೆಯ ಕಾಯರ್ಾಲಯದ    ಸಭಾಂಗಣದಲ್ಲಿರುವ ಚುನಾವಣಾಧಿಕಾರಿ ಕಾಯರ್ಾಲಯದಲ್ಲಿ, 12ನೇ ವಾಡರ್ಿನಿಂದ ಸಾಮಾನ್ಯ ಅಭ್ಯಥರ್ಿಗೆ ಮೀಸಲಿರುವ ಸ್ಥಾನಕ್ಕೆ ಜೆಡಿಎಸ್ ಅಭ್ಯಥರ್ಿ ಶಹಜಾನ ಕಾಲೇಬಾಯಿ ಅವರು ತಮ್ಮ ನಾಮ ಪತ್ರ ಸಲ್ಲಿಸಿದರಲ್ಲದೇ ಮೇ.13 ರಂದು 11ನೇ ವಾಡರ್ಿನಿಂದ ಸದರಿ ಪಕ್ಷದಿಂದ ಮಾಲತೇಶ ಹಾವೇರಿ ಅವರು ನಾಮ ಪತ್ರ ಸಲ್ಲಿಸಿದ್ದನ್ನು ಸ್ಮರಿಸಬಹುದಾಗಿದೆ. 

   ಒಟ್ಟು 23 ವಾಡರ್ುಗಳನ್ನು ಹೊಂದಿರುವ ಬ್ಯಾಡಗಿ ಪುರಸಭೆಗೆ ಇಂದಿನವರೆಗೂ ಕೇವಲ ಎರಡು ನಾಮ ಪತ್ರ ಸಲ್ಲಿಕೆಯಾದಂತಾಗಿದೆ. 

    ಮೇ.16 ರಂದು ನಾಮ ಪತ್ರ ಸಲ್ಲಿಸಲು ಕೊನೆಯ ದಿನವಾಗಿದೆ ಎಂದು ಚುನಾವಣಾಧಿಕಾರಿ ಎಂ.ಎಫ್ ಬಾಕರ್ಿ ತಿಳಿಸಿದ್ದಾರೆ

        ಈ ಸಂದರ್ಭದಲ್ಲಿ ಸಹಾಯಕ ಚುನಾವಣಾಧಿಕಾರಿ ಹನುಮಂತಪ್ಪ ಲಮಾಣಿ, ಜೆಡಿಎಸ್ ನಾಯಕ ಮೋಹನ ಬಿನ್ನಾಳ ಸೇರಿದಂತೆ ಇನ್ನಿತರರಿದ್ದರು.