ಅಧ್ಯಯನ ವೇಳೆ ಮೊಬೈಲ್ ಬಳಕೆ ಬೇಡ: ನ್ಯಾಯಾಧೀಶರಾದ ಪ್ರತಾಪಕುಮಾರ


ಲೋಕದರ್ಶನ ವರದಿ

ಶಿರಹಟ್ಟಿ 05: ವಿದ್ಯಾರ್ಥಿಗಳು ಉಜ್ವಲ ಭವಿಷ್ಯವನ್ನು ರೂಪಿಸಿಕೊಳ್ಳವುದಕ್ಕಾಗಿ ಶಿಕ್ಷಣ ಪಡೆಯುತ್ತಿದ್ದು, ಇಂತಹ ಸಂದರ್ಭದಲ್ಲಿ ವಿದ್ಯಾರ್ಥಿಗಳು ಹೆಚ್ಚು ಅಭ್ಯಾಸದ ಕಡೆ ಗಮನವನ್ನು ನೀಡಬೇಕು. ಅನಾವಶ್ಯಕವಾಗಿ ಮೊಬೈಲ್ಗಳ ದಾಸರಾಗಿ ಜೀವನ ಹಾಳುಮಾಡಿಕೊಳ್ಳುವುದು ಬೇಡಿ ಮೊಬೈಲ್ ದುರ್ಬಳಕೆ ಜೀವನಕ್ಕೆ ಅಪಾಯಕಾರಿ ಎಂದು ತಾಲೂಕ ಕಾನೂನು ಸೇವಾಸಮಿತಿಯ ಅಧ್ಯಕ್ಷ  ಹಾಗೂ ನ್ಯಾಯಾಧೀಶರಾದ ಪ್ರತಾಪಕುಮಾರ ಹೇಳಿದರು. 

ಅವರು ತಾಲೂಕಿನ ಬೆಳ್ಳಟ್ಟಿ ಗ್ರಾಮದ ಜ.ಫ. ಪ್ರೌಢ ಶಾಲೆಯಲ್ಲಿ ಜರುಗಿದ ತಾಲೂಕ ಕಾನೂನು ಸೇವಾ ಸಮಿತಿ, ತಾಲೂಕ ವಕೀಲರ ಸಂಘ ಶಿರಹಟ್ಟಿ ಆರಕ್ಷಕ ಇಲಾಖೆ, ಕಂದಾಯ ಇಲಾಖೆ, ಶಿಕ್ಷಣ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ಜ.ಫ.ಪ್ರೌಢ ಶಾಲೆ ಬೆಳ್ಳಟ್ಟಿ ಇವರ ಸಂಯುಕ್ತಾಶ್ರದಲ್ಲಿ ಜರುಗಿದ ಕಾನೂನು ಅರಿವು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ವಿದ್ಯಾಥರ್ಿ ಜೀವನದಲ್ಲಿರುವಾಗಲೆ ದೇಶದ ಸಂವಿಧಾವನ್ನು ಅರಿಯಬೇಕು. ಮತ್ತು ಅದರಲ್ಲಿರುವ ಸಾಮಾನ್ಯ ಕಾಯ್ದೆಗಳ ತಿಳುವಳಿಕೆಯನ್ನು ಹೊಂದುವುದು ಅವಶ್ಯಕವಾಗಿದೆ. ನಮ್ಮನ್ನು ನಾವು ರಕ್ಷಿಸಿಕೊಳ್ಳಲು ಕಾನೂನುಗಳ ತಿಳುವಳಿಕೆಯನ್ನು ಹೊಂದಬೇಕು. ಉತ್ತಮ ಜೀವನ ನಡೆಸುವುದಕ್ಕಾಗಿ ಉತ್ತಮ ಶಿಕ್ಷಣ ಪಡೆದುಕೊಳ್ಳಬೇಕು. ವಿದ್ಯಾರ್ಥಿಗಳು ದುಶ್ಚಗಳಿಂದ ದೂರವಿರಬೇಕು. ವಿದ್ಯಾರ್ಜನೆಯ ಸಮಯದಲ್ಲಿ ಟಿವ್ಹಿ ಮತ್ತು ಮೊಬೈಲ್ಗಳನ್ನಬಳದೇ ಇರುವುದು ಉತ್ತಮ ಆದರೆ ನಮ್ಮ ಜ್ಞಾನಬೆಳವಣಿಗೆಗೆ ಪೂರಕವಾದ ವಿಚಾರಗಳನ್ನು ಪಡೆದುಕೊಳ್ಳುವುದರಲ್ಲಿ ಯಾವುದು ತಪ್ಪಿರಲಾರದು, ದುರ್ಬಳೆಕೆ ಮಾಡಿದರೆ ಮಾತ್ರ ಸಹಿಲಾಗದು. ಉತ್ತಮ ಗುರಿಗಳನ್ನು ರೂಢಿಸಿಕೊಳ್ಳಿ, ಅದನ್ನು ಈಡೇರಿಸಿಕೊಳ್ಳಲು ಉತ್ತಮವಾದ ಮಾರ್ಗವನ್ನು ಅನುಸರಿಸಿದರೆ ಜೀವನ ಯಶಸ್ವಿಯಾಗುವುದು ಎಂದು ಹೇಳಿದರು. 

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಶಾಲೆ ಮುಖ್ಯೋಪಾದ್ಯಾಯ ಹೆಚ್.ಟಿ.ಬಿಜ್ಜೂರ ಮತ್ತು ಉಪನ್ಯಾಸರಾಗಿ ಆಗಮಿಸಿದದ್ದ ಪಿ.ಎಮ್.ವಾಲಿ ಮಾತನಾಡಿ, ಜೀವನದಲ್ಲಿ ಊಟ ಎಷ್ಟು ಮುಖ್ಯವೋ ಅಷ್ಟೇ ಮುಖ್ಯ ಶಿಕ್ಷಣ ಮುಖ್ಯವಾದದು. ಊಟದಲ್ಲಿ ಉಪ್ಪಿನಕಾಯಿ ಎಷ್ಟು ಮುಖ್ಯವೋ ಅಷ್ಠೇ ಟಿವ್ಹಿ, ಮತ್ತು ಮೊಬೈಲ್ಗಳ ಬಳಕೆ ಅಷ್ಟೇ ಮುಖ್ಯ ವಾದುದಾಗಿದೆ. ಮೊಬೈಲ್ಗಳ ಬಳಕೆಯಿಂದ ಸಾಕಷ್ಟು ತೊಂದರೆಯಾಗುವುದು. ತರಂಗಗಳಿಂದ ನಮ್ಮ ಹೃದಯಕ್ಕೆ ತೊಂದೆರೆಯಾಗುತ್ತದೆ. ಕಣ್ಣಿಗೆ ತೊಂದರೆಯಾಗುತ್ತದೆ. ಕಿಡ್ನಿ ವೈಫಲ್ಯಕ್ಕೂ ಕಾರಣವಾಗಿದೆ. ಇನ್ನು ಹತ್ತು ಹಲವು ತೊಂದರೆಗಳನ್ನು ನೀಡಬಹುದಾದ ಸಂಗತಿಗಳಿಗೆ ನಾವೆಲ್ಲ ಹೆಚ್ಚು ಪ್ರಾಶಸ್ತ್ಯವನ್ನು ನೀಡುತ್ತಿರುವುದು ಬೇಸರ ಸಂಗತಿಯಾಗಿದೆ. ಶಿಕ್ಷಣ ಪಡೆಯುವ ಸಂದರ್ಭದಲ್ಲಿ ಅದರ ಧನಾತ್ಮಕ ಬಳಕೆ ಮಾಡಿಕೊಳ್ಳುವುದು ಮಾತ್ರ ಸೂಕ್ತ. ಅತೀಯಾದ ಬಳಕೆಯಿಂದ ಸಮಯ ಹರಣವಾಗಿ ಉತ್ತಮವಾದ ಭವಿಷ್ಯಕ್ಕೆ ಕೊಡಲೆ ಪೆಟ್ಟಿಗೆ ಕಾರಣವಾಗಿದೆ. ಅದಕ್ಕಾಗಿ ನಾವೆಲ್ಲ ಸೂಕ್ತ ಸಮಯದಲ್ಲಿ ಸೂಕ್ತ ಬಳಕೆ ಮಾಡಿದರೆ ಮಾತ್ರ ಉತ್ತಮವಾದುದು ಎಂದು ಹೇಳಿದರು. 

ಕಾರ್ಯಕ್ರಮದಲ್ಲಿ ವಕೀಲರಾದ ಎಸ್.ವಾಯ್.ಗೊಬ್ಬರಗುಂಪಿ, ಎ.ಎ.ಬೇವಿನಗಿಡದ, ಅನೀಲ ಮಾನೆ, ಸಾಲಾ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.